Home Social Washing Machine Blast: ವಾಷಿಂಗ್ ಮಿಷಿನ್ ನಲ್ಲಿ ಭಾರೀ ಸ್ಫೋಟ, ವಾಶಿಂಗ್ ಮಶೀನ್ ಬಳಸುವ ಗೃಹಿಣಿಯರೇ...

Washing Machine Blast: ವಾಷಿಂಗ್ ಮಿಷಿನ್ ನಲ್ಲಿ ಭಾರೀ ಸ್ಫೋಟ, ವಾಶಿಂಗ್ ಮಶೀನ್ ಬಳಸುವ ಗೃಹಿಣಿಯರೇ ಎಚ್ಚರ !

Washing Machine Blast

Hindu neighbor gifts plot of land

Hindu neighbour gifts land to Muslim journalist

Washing Machine Blast: ಬಟ್ಟೆಯನ್ನು ಒಗೆಯುವಾಗ (Dress Washing) ಅಥವಾ ಬಟ್ಟೆಗಳನ್ನು ಒಗೆಯಲು ವಾಷಿಂಗ್ ಮಷಿನ್‌ಗೆ ಹಾಕುವ ಮೊದಲು ಬಟ್ಟೆಗಳಲ್ಲಿರುವ ಜೇಬುಗಳಿಗೆ ಒಂದು ಸಾರಿ ಕಣ್ಣು ಹಾಯಿಸಬೇಕು ಎಂದು ಯಾವಾಗಲೂ ಹೇಳುತ್ತಾರೆ. ಜೇಬಿನಲ್ಲಿ ಮರೆತು ಬಿಟ್ಟ ನೋಟಾಗಲಿ ಅಥವಾ ಇನ್ಯಾವುದೇ ಅಗತ್ಯ ಕಾಗದಪತ್ರಗಳು ನೀರಿನಲ್ಲಿ ತೊಳೆದು ಹೋದರೆ ಕಷ್ಟ ಅನ್ನುವುದು ಈ ಸಲಹೆಯ ಉದ್ದೇಶ. ಆದರೆ, ವಾಷಿಂಗ್ ಮಷಿನ್ ನಾವು ಊಹಿಸಿದುದಕ್ಕಿಂತಲೂ ಹೆಚ್ಚು ಡಿಸ್ಟ್ರ ಕ್ತೀವ್ ಆಗಬಲ್ಲದು ಅನ್ನುವುದಕ್ಕೆ ಈ ವೈರಲ್ ಆಗಿರುವ ಈ ವೀಡಿಯೊನೇ ಸಾಕ್ಷಿ. (Viral video)

ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ವಾಷಿಂಗ್ ಮಶೀನ್ ಗೆ ಬಟ್ಟೆಗಳನ್ನು ಹಾಕಿ ತೊಳೆಯಲು ಬಿಟ್ಟಿದ್ದ. ಅದು ಆಟೋಮೇಟೆಡ್ ಸೈಡ್ ಲೋಡಿಂಗ್ ವಾಷಿಂಗ್ ಮಶೀನ್. ಸ್ವಲ್ಪ ಸಮಯದ ವರೆಗೆ ವಾಷಿಂಗ್ ಮಷಿನ್‌ನಲ್ಲಿ ಬಟ್ಟೆಯೂ ತಿರುಗುವುದನ್ನು ಕಾಣಬಹುದು. ಇದ್ದಕ್ಕಿಂದತೆ ಈ ವಾಷಿಂಗ್ ಮಷೀನ್ ನಲ್ಲಿ ಬೆಂಕಿ ಹೊತ್ತಿಕೊಂಡಿದೆ, ಅದರ ಕ್ಷಣಗಳ ಬೆನ್ನಲ್ಲೇ ಭಯಾನಕವಾದ ಸ್ಫೋಟ (Washing Machine Blast) ಸಂಭವಿಸಿದೆ. ಈ ಅಘಾತಕಾರಿ ವೀಡಿಯೊ ಈಗ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ.

ಬಟ್ಟೆಯನ್ನು ಹಾಕಿದ ತಕ್ಷಣ ಸರಾಗವಾಗಿ ಬಟ್ಟೆ ತಿರುಗುವುದನ್ನು ವಾಷಿಂಗ್ ಮಷಿನ್ ನಲ್ಲಿ ಕಾಣಬಹುದು. ಆದರೆ ಕೆಲವೇ ಕ್ಷಣಗಳಲ್ಲಿ ವಾಷಿಂಗ್ ಮೆಷಿನ್ ಬಟ್ಟೆಯನ್ನು ಒಗೆಯುವಾಗ, ಒಳಗೆ ಒತ್ತಡ ಉಂಟಾಗಿ ಮಷಿನ್ ನ ಡೋರ್ ಓಪನ್ ಆಗಿದೆ. ಅದರಿಂದ ಬೆನ್ನಲ್ಲೇ ಬೇಕಿಯಿಗುಳಿದ ಮಷಿನ್ ಸ್ಫೋಟಗೊಂಡಿದೆ. ಬೆಂಕಿ ಮತ್ತು ಸ್ಫೋಟಕ್ಕೆ ಆ ರೂಮಿನ ಎಲ್ಲಾ ವಸ್ತುಗಳೂ ವಸ್ತುಗಳು ಚಿದ್ರ- ಚಿದ್ರವಾಗಿದೆ. ರೂಮಿನ ಗಾಜುಗಳು ಕಿಟಕಿ ಬಾಗಿಲುಗಳ ಗಾಜುಗಳು ಪುಡಿ ಪುಡಿಯಾಗಿವೆ.

ಈ ದುರ್ಘಟನೆ ನಡೆಯುವ ಕೆಲವೇ ಕ್ಷಣಗಳ ಮೊದಲು ವ್ಯಕ್ತಿಯೊಬ್ಬ ಅಂಗಡಿಯಿಂದ ಹೊರಗೆ ಬಂದಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಮನುಷ್ಯ ಪವಾಡಸದೃಶವಾಗಿ ಪಾರಾಗಿರುವುದೇ ಎಲ್ಲರಿಗೂ ವಿಶೇಷವಾಗಿದೆ. ಈ ವಿಡಿಯೋವನ್ನು ಸಾಮಾಜಿಕ ಜಾಣತನದಲ್ಲಿ ಹಂಚಿಕೊಂಡ ನಂತರ ಅದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಆದರೆ ಇವತ್ತಿಗೂ ಸ್ಫೋಟಕ್ಕೆ ನಿಖರ ಕಾರಣ.ತಿಳಿದುಬಂದಿಲ್ಲ.

ಜೇಬಿನಲ್ಲಿ ಬ್ಯಾಟರಿ.ಇದ್ದಿರಬಹುದು, ಲೈಟರ್ ಮ್ಯಾಚ್ ಸ್ಟಿಕ್ ಪಟಾಕಿ ಮುಂತಾದ ವಸ್ತುಗಳೇ ಇದ್ದಿರಬಹುದು, ಅದೇ ಸ್ಫೋಟಕ್ಕೆ ಕಾರಣ ಇರಬಹುದು ಎನ್ನುವ ತರ್ಕ ಒಂದೆಡೆ ಇದೆ. ಮತ್ತೊಂದೆಡೆ, ನೀರು ಹಾಕದೆ ವಾಷಿಂಗ್ ಮಷಿನ್ ಚಲಾಯಿಸಿದ್ದೇ ಘಟನೆಗೆ ಕಾರಣ ಎನ್ನುವ ಅನುಮಾನ ವ್ಯಕ್ತ ಆಗಿದೆ. ವಾಷಿಂಗ್ ಮಷಿನ್ ಚಲಾವಣೆಗೆ ಅಥವಾ ಡ್ರೈಯಿಂಗ್ ಗೆ ನ್ಯಾಚುರಲ್ ಬಳಕೆಯೇ ಘಟನೆಗೆ ಕಾರಣ ಇರಬಹುದು, ಗ್ಯಾಸ್ ಲೀಕ್ ಆಗಿ ಸ್ಫೋಟ ಸಂಭವಿಸಿರಬಹುದು ಅನ್ನೋದು ಇನ್ನೊಂದು ಸಂಭವನೀಯ ವಾದ. ಸ್ಥಿರ ವಿದ್ಯುತ್ ನಿಂದ ಸ್ಫೋಟ ಉಂಟಾಗಿರಬಹುದು ಎನ್ನುವುದು ಕೂಡಾ ಇನ್ನೊಂದು ರೀಸನಿಂಗ್.

ಟ್ವಿಟರ್ ನಲ್ಲಿ ಹಂಚಿಕೊಂಡ ವಿಡಿಯೋ ಶೀರ್ಷಿಕೆಯನ್ನು ನೋಡಿದಾಗ, ವಾಷಿಂಗ್ ಮಷಿನ್‌ಗೆ ಬಟ್ಟೆಗಳನ್ನು ಹಾಕುವ ಮುನ್ನ ಜೇಬುಗಳನ್ನು ಪರಿಶೀಲಿಸುವುದು ಬಹಳ ಮುಖ್ಯವಾಗಿದೆ. ಬಟ್ಟೆಗಳ ಜೇಬಿನಲ್ಲಿ ಅನಗತ್ಯ ವಸ್ತುಗಳು ಇದ್ದ ಕಾರಣ ಈ ಘಟನೆ ನಡೆದಿದೆ ಎಂದು ಈಗ ನಂಬಲಾಗಿದೆ.

ಇದನ್ನೂ ಓದಿ: Artificial Intelligence: ಹೆಂಡ್ತಿ ಇಲ್ಲವೆಂದು ಕೊರಗಿದ 63ರ ವೃಧ್ಧ, ಕೃತಕ ಹುಡುಗಿಯನ್ನೇ ಮದುವೆಯಾದ!