Home Karnataka State Politics Updates Yogi Adityanath: ಮೇ 6 ರಂದು ಪುತ್ತೂರಿಗೆ ಯೋಗಿ ಆದಿತ್ಯನಾಥ್ ಭೇಟಿ ; ರೋಡ್ ಶೋ...

Yogi Adityanath: ಮೇ 6 ರಂದು ಪುತ್ತೂರಿಗೆ ಯೋಗಿ ಆದಿತ್ಯನಾಥ್ ಭೇಟಿ ; ರೋಡ್ ಶೋ ಸಂಪೂರ್ಣ ಮಾಹಿತಿ ಇಲ್ಲಿದೆ

Yogi Visit to Puttur
Image source: republic bharat

Hindu neighbor gifts plot of land

Hindu neighbour gifts land to Muslim journalist

Yogi Visit to Puttur: ಚುನಾವಣೆ ಹಿನ್ನೆಲೆ ಮೇ 6ಕ್ಕೆ ಉತ್ತರ ಪ್ರದೇಶದ (uttar pradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಪುತ್ತೂರಿಗೆ (Yogi Visit to Puttur) ಭೇಟಿ ನೀಡಲಿದ್ದಾರೆ. ದಕ್ಷಿಣ ಕನ್ನಡ (dakshina Kannada) ಮತ್ತು ಉಡುಪಿ (Udupi) ಜಿಲ್ಲೆಯಲ್ಲಿ ಬಿಜೆಪಿ (bjp) ಪರ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಸಂಜೀವ ಮಠಂದೂರು (Sanjeeva Matandoor) ಅವರು, “ಪುತ್ತೂರು ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಅವರ ಪರವಾಗಿ ಪ್ರಚಾರ ಮಾಡಲು ಉತ್ತರ ಪ್ರದೇಶದ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ (Yogi Adityanath) ಅವರು ಪುತ್ತೂರಿಗೆ ಆಗಮಿಸಲಿದ್ದಾರೆ. ಅವರು ರೋಡ್ ಶೋ ನಡೆಸುವ ಮೂಲಕ ಮೇ.6 ರಂದು ಮತಯಾಚನೆ ಮಾಡಲಿದ್ದಾರೆ” ಎಂದು ಹೇಳಿದರು.

“ಯೋಗಿ ಹೆಲಿಕಾಪ್ಟರ್ ಮೂಲಕ ಬಂದು ಪುತ್ತೂರು ಸಮೀಪದ ಮೊಟ್ಟೆತ್ತಡ್ಕ ಹೆಲಿಪ್ಯಾಡ್ ನಲ್ಲಿ ಇಳಿಯಲಿದ್ದಾರೆ. ಅಲ್ಲಿಂದ ವಾಹನದಲ್ಲಿ ತೆರಳಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಬೆಳಗ್ಗೆ 11 ಗಂಟೆಯ ಹೊತ್ತಿಗೆ ತಲುಪಲಿದ್ದಾರೆ. ಮುಖ್ಯ ಅಂಚೆ ಕಛೇರಿಯ ಬಳಿಯಿಂದ ಜಾಥಾ ಹೊರಡಲಿದೆ. ತೆರೆದ ವಾಹನದ ಮೂಲಕ ಯೋಗಿ ಸಂಚರಿಸಲಿದ್ದಾರೆ. ಜಾಥಾ ಸರ್ಕಾರಿ ಬಸ್ ನಿಲ್ದಾಣವಾಗಿ ಕೋರ್ಟ್ ರಸ್ತೆಯ ಮೂಲಕ ಕಿಲೆಮೈದಾನಕ್ಕೆ ತೆರಳಲಿದ್ದಾರೆ. ಸುಮಾರು ಒಂದು ಕಿ.ಮೀ ಉದ್ದಕ್ಕೆ ಜಾಥ ನಡೆಯಲಿದೆ. ಸುಮಾರು 25 ಸಾವಿರ ಜನ ಸೇರುವ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ. ಯೋಗಿ ಕಿಲ್ಲೆಮೈದಾನದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ” ಎಂದು ಮಠಂದೂರು ಹೇಳಿದರು.

ಶೃಂಗೇರಿಯಲ್ಲಿ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡು ಪುತ್ತೂರಿಗೆ (puttur) ಮೇ 6ರಂದು ಆಗಮಿಸಲಿದ್ದಾರೆ. ಮಂಗಳೂರಿನ (mangaluru) ಹಲವು ಸ್ಥಳಗಳಿಗೆ ಭೇಟಿ ನೀಡಲಿರುವ ಯೋಗಿ 6 ರಂದು ಮಧ್ಯಾಹ್ನ 2 ಗಂಟೆಗೆ ಬಂಟ್ವಾಳ, 3.30ಕ್ಕೆ ಕಾರ್ಕಳ ಮತ್ತು ಸಂಜೆ 5 ಗಂಟೆಗೆ ಹೊನ್ನಾವರಕ್ಕೆ ಭೇಟಿ ನೀಡಲಿದ್ದಾರೆ. ಹಾಗೇ ಮುರುಡೇಶ್ವರದಲ್ಲಿ ವಾಸ್ತವ್ಯ ಹೂಡಲಿದ್ದಾರೆ ಎಂದು ಮಂಗಳೂರು ವಿಭಾಗ ಉಸ್ತುವಾರಿ ಉದಯಕುಮಾರ್‌ ಶೆಟ್ಟಿ ಕಿದಿಯೂರು ಹೇಳಿದ್ದಾರೆ.

 

ಇದನ್ನು ಓದಿ: Mangaluru Airport: ಮಂಗಳೂರಿಗರಿಗೆ ಸಿಹಿ ಸುದ್ದಿ! ಮಂಗಳೂರು ಏರ್ ಪೋರ್ಟ್ ನಲ್ಲಿ ನಿಮಗಾಗಿ ಲಭ್ಯವಿದೆ ಈ ಸೌಲಭ್ಯ!!!