Home Karnataka State Politics Updates West Bengal: ಬಿಜೆಪಿಗೆ ದೊಡ್ಡ ಆಘಾತ- ಪಶ್ಚಿಮ ಬಂಗಾಳದ 3 ಬಿಜೆಪಿ ಸಂಸದರು ನಮ್ಮ ಸಂಪರ್ಕದಲ್ಲಿದ್ದಾರೆ...

West Bengal: ಬಿಜೆಪಿಗೆ ದೊಡ್ಡ ಆಘಾತ- ಪಶ್ಚಿಮ ಬಂಗಾಳದ 3 ಬಿಜೆಪಿ ಸಂಸದರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದ TMC ನಾಯಕ !!

West Bengal

Hindu neighbor gifts plot of land

Hindu neighbour gifts land to Muslim journalist

West Bengal : ಲೋಕಸಭಾ ಚುನಾವಣೆ ಮುಗಿದಾಗಿಂದಲೂ ಬಿಜೆಪಿ(BJP) ಆಘಾತಗಳ ಮೇಲೆ ಆಘಾತ ಎದುರಾಗುತ್ತಿದೆ. ಈಗಾಗಲೇ ಬಹುಮತ ಬರದೆ ಒಂದು ರೀತಿಯಲ್ಲಿ ಭಾರೀ ಸಂಕಷ್ಟಕ್ಕೆ ಬಿಜೆಪಿ ಸಿಲುಕಿದೆ. ಆದರೂ ಹೇಗೋ NDA ಮೈತ್ರಿ ಕೂಟದ ಮೂಲಕ ಸರ್ಕಾರ ರಚನೆಗೆ ಮುಂದಾಗಿದೆ. ಆದರೆ ಈ ಬೆನ್ನಲ್ಲೇ ಪಶ್ಚಿಮ ಬಂಗಾಳದಿಂದ(West Bengal) ಶಾಕಿಂಗ್ ಸುದ್ದಿಯೊಂದು ಬಿಜೆಪಿಗೆ ಬಂದೆರಗಿದೆ.

ಇನ್ಮೇಲೆ ಗರ್ಭಧಾರಣೆ ತಡೆಯುವ ಚಿಂತೆಯಿಲ್ಲ ; ಅನಾವಶ್ಯಕ ಗರ್ಭಧಾರಣೆ ತಡೆಯಲು ಲಭ್ಯವಾಗಲಿದೆ ಈ ಜೆಲ್!

ಹೌದು, ಪಶ್ಚಿಮ ಬಂಗಾಳದಲ್ಲಿ ಗೆದ್ದಿರುವ ಬಿಜೆಪಿ ಸಂಸದರ ಪೈಕಿ ಮೂವರು ಬಿಜೆಪಿ ಸಂಸದರು ತಮ್ಮ ಸಂಪರ್ಕದಲ್ಲಿ ಇದ್ದಾರೆ ಎಂದು ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ(Abhishek Banerjee) ಹೇಳಿಕೆ ನೀಡಿದ್ದಾರೆ. ಈ ಕುರಿತು ಬಾಂಗ್ಲಾದ ಮಾಧ್ಯಮಗಳು ವರದಿ ಮಾಡಿವೆ. ಇದು ಮಿತ್ರಪಕ್ಷಗಳ ಬೆಂಬಲದೊಂದಿಗೆ ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೇರಲು ಹೊರಟಿರುವ ಬಿಜೆಪಿಗೆ ಶಾಕ್ ನೀಡುವುದಂತು ಗ್ಯಾರಂಟಿ ಎನ್ನಲಾಗಿದೆ.

ಇಂಡಿಯಾ ಸಭೆಯ ನಂತರ ಮಾತನಾಡಿದ ಅಭಿಷೇಕ್ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯಿಂದ ಗೆದ್ದಿರುವ ಮೂವರು ಸಂಸದರು ಬಿಜೆಪಿಯ ಸಂಪರ್ಕದಲ್ಲಿದ್ದಾರೆ. ಇದರ ಜೊತೆಗೆ ಎನ್‌ಡಿಎ ಮೈತ್ರಿಕೂಟದ ಭಾಗವಾಗಿರುವ ಟಿಡಿಪಿ, ಜೆಡಿಯು ಸೇರಿದಂತೆ ಸಣ್ಣ ಸಣ್ಣ ಪಕ್ಷಗಳು ನಮ್ಮನ್ನು ಸಂಪರ್ಕಿಸಿವೆ ಎಂದಿದ್ದಾರೆ. ಅಭಿಷೇಕ್ ಇಂಡಿಯಾ ಮೈತ್ರಿಕೂಟದ ಪ್ರಮುಖ ಭಾಗವಾಗಿದ್ದಾರೆ. ಹೀಗಾಗಿ ಅಭಿಷೇಕ್ ಅವರ ಈ ಹೇಳಿಕೆ ಸಂಚಲನಕ್ಕೆ ಕಾರಣವಾಗಿದೆ.

ಪಶ್ಚಿಮ ಬಂಗಾಳದಲ್ಲಿ ಯಾರಿಗೆ ಎಷ್ಟು ಸೀಟು?
ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಶ್ಚಿಮ ಬಂಗಾಳದ 42 ಲೋಕಸಭಾ ಸ್ಥಾನಗಳ ಪೈಕಿ 29 ಸ್ಥಾನಗಳಲ್ಲಿ ಗೆದ್ದು ಭರ್ಜರಿ ಗೆಲುವು ಸಾಧಿಸಿದೆ. ಬಿಜೆಪಿ ಇಲ್ಲಿ ಈ ಬಾರಿ ಕೇವಲ 12 ಸ್ಥಾನಗಳನ್ನು ಮಾತ್ರ ಗಳಿಸಿದೆ. ಕಾಂಗ್ರೆಸ್ 1 ಸೀಟು ಗೆದ್ದುಕೊಂಡಿದೆ.

Top Beer Brands: ಈ ಬಿಯರ್ ಬ್ರ್ಯಾಂಡ್‌ಗಳು ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತೆ ಯಾಕೆ ಗೊತ್ತಾ!?