Home Karnataka State Politics Updates ಗುಟ್ಕಾ ಪ್ಯಾಕೆಟ್ ಮುಂದೆ ಇಟ್ಟು ಉಮೇಶ್‌ ಕತ್ತಿ ಸಮಾಧಿಗೆ ಪುತ್ರ, ಅಳಿಯನಿಂದ ಪೂಜೆ, ಇಷ್ಟಪಟ್ಟು ತಿನ್ನುತ್ತಿದ್ದ...

ಗುಟ್ಕಾ ಪ್ಯಾಕೆಟ್ ಮುಂದೆ ಇಟ್ಟು ಉಮೇಶ್‌ ಕತ್ತಿ ಸಮಾಧಿಗೆ ಪುತ್ರ, ಅಳಿಯನಿಂದ ಪೂಜೆ, ಇಷ್ಟಪಟ್ಟು ತಿನ್ನುತ್ತಿದ್ದ ಗುಟ್ಕಾದಿಂದ ಕಾಡಿತ್ತೆ ಹೃದಯಾಘಾತ ?!

Hindu neighbor gifts plot of land

Hindu neighbour gifts land to Muslim journalist

ಹೃದಯಾಘಾತದಿಂದ ಸಾವನ್ನಪ್ಪಿದ ಉಮೇಶ್ ಕತ್ತಿಸಮಾಧಿಗೆ ಕುಟುಂಬಸ್ಥರು ಪೂಜೆ ನೆರವೇರಿಸಿ ಅಂತಿಮ ವಿಧಿ ವಿಧಾನವನ್ನು ನಿನ್ನೆ ಪೂರೈಸಿದರು. ಆ ಸಮಯದಲ್ಲಿ ಉಮೇಶ್ ಕತ್ತಿಯವರು ದಶಕಗಳಿಂದ ಆಸೆಪಟ್ಟು ತಿನ್ನುತ್ತಿದ್ದ ಗುಟ್ಕಾವನ್ನು  ಅವರ ಕುಟುಂಬಸ್ಥರು ಕತ್ತಿಯವರ ಸಮಾಧಿಗೆ ಅರ್ಪಿಸಿದ ಘಟನೆ ನಡೆದಿದೆ.

ಮೊನ್ನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿರುವ ಗದ್ದೆಯಲ್ಲಿ ತಂದೆ ತಾಯಿ ಸಮಾಧಿ ಪಕ್ಕವೇ ಅವರ ಅಂತ್ಯಕ್ರಿಯೆ ನಡೆದಿತ್ತು. ಸಮಾಧಿಗೆ ತೆರಳಿ ಪುತ್ರ ನಿಖಿಲ್ ಕತ್ತಿ, ಅಳಿಯ ನಿತಿನ್ ಪ್ರಭುದೇವ ಅವರು ಪುರೋಹಿತರ ಮಾರ್ಗದರ್ಶನದಂತೆ ಪೂಜೆ ಸಲ್ಲಿಸಿದರು.
ಆಗ ಸಮಾಧಿಗೆ ಪೂಜೆ ಮಾಡಿ ಸಮಾಧಿಯ ಮೇಲೆ ಅವರಿಷ್ಟದ ತಿಂಡಿ, ತಿನಿಸುಗಳನ್ನು ಇಡಲಾಯಿತು. ಜೊತೆಗೆ  ಅವರಿಗೆ ಇಷ್ಟವಾದ ಗುಟ್ಕಾ ಪ್ಯಾಕೇಟ್ ಇಟ್ಟು ನಮನ ಸಲ್ಲಿಸಿದ್ದು ಎಲ್ಲರ ಗಮನ ಸೆಳೆಯಿತು.

ಮೊನ್ನೆಯಿಂದ ಅವರ ಮನೆಗೆ ಅಭಿಮಾನಿಗಳು ದಂಡೇ ಹರಿದು ಬರುತ್ತಿದೆ. ಜನರು ನಿರಂತರವಾಗಿ ಬಂದು ಕತ್ತಿಯವರ ಸಮಾಧಿಗೆ ಭೇಟಿ ನೀಡುತ್ತಾ, ಮನೆಯವರನ್ನು ಸಮಾಧಾನ ಮಾಡುತ್ತಾ ಇರುವ ದೃಶ್ಯ ಕಂಡುಬರುತ್ತಿದೆ.