Home Karnataka State Politics Updates BJP: ಯತ್ನಾಳ್ ಅಲ್ಲ, ಬಿ ವೈ ವಿಜಯೇಂದ್ರ ಅಲ್ಲ – ಈ ಪ್ರಬಲ ನಾಯಕನಿಗೆ ಬಿಜೆಪಿ...

BJP: ಯತ್ನಾಳ್ ಅಲ್ಲ, ಬಿ ವೈ ವಿಜಯೇಂದ್ರ ಅಲ್ಲ – ಈ ಪ್ರಬಲ ನಾಯಕನಿಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ!!

Hindu neighbor gifts plot of land

Hindu neighbour gifts land to Muslim journalist

BJP: ರಾಜ್ಯ ಬಿಜೆಪಿಯ ಒಳ ಜಗಳ ತಾರಕಕ್ಕೇರುತ್ತಿದೆ. ಬಣಗಳ ನಡುವೆ ಕಾದಾಟವು ಹೆಚ್ಚುತ್ತಿದೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಜೋರಾಗಿದೆ. ಇನ್ನೊಂದೆಡೆ ರಾಜ್ಯ ಅಧ್ಯಕ್ಷರ ಆಯ್ಕೆಗೆ ಚುನಾವಣೆ ಕೂಡ ನಡೆಯಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇದೆಲ್ಲದರ ನಡುವೆ ಬಿಜೆಪಿ ಅಧ್ಯಕ್ಷ ಸ್ಥಾನ ಯತ್ನಾಳ್ ಗೂ ಇಲ್ಲ, ವಿಜಯೇಂದ್ರನಿಗೂ ಇಲ್ಲ. ಈ ಪ್ರಬಲ ನಾಯಕನಿಗೆ ಸಿಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಹೌದು, ಸದ್ಯ ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಹಲವರು ಕಣ್ಣಿಟ್ಟಿದ್ದು, ಆಕಾಂಕ್ಷಿಗಳ ಪಟ್ಟಿಯೂ ಹೆಚ್ಚಾಗಿದೆ. ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಶಾಸಕ ಹಾಗೂ ಮಾಜಿ ಡಿಸಿಎಂ ಸಿ.ಎನ್‌.ಅಶ್ವಥ್‌ ನಾರಾಯಣ್‌ ಅವರ ಹೆಸರು ಕೇಳಿಬಂದಿದೆ. ಅಶ್ವಥ್‌ ನಾರಾಯಣ್‌ ಕೂಡ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದು ಬಿಜೆಪಿ ನಾಯಕ ಶ್ರೀರಾಮುಲು ಬಹಿರಂಗಪಡಿಸಿದ್ದಾರೆ.

ಸದ್ಯ ಮಲ್ಲೇಶ್ವರ ಕ್ಷೇತ್ರದ ಶಾಸಕರಾಗಿರುವ ಸಿ.ಎನ್‌.ಅಶ್ವಥ್‌ ನಾರಾಯಣ್‌ ಅವರು‌ ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಉಪಮುಖ್ಯಮಂತ್ರಿ ಸ್ಥಾನ ಪಡೆದುಕೊಂಡಿದ್ದರು. ಬೆಂಗಳೂರು ಭಾಗದ ಬಿಜೆಪಿ ನಾಯಕರ ಪೈಕಿ ಅಶ್ವಥ್‌ ನಾರಾಯಣ್‌ ಅವರು ಕೂಡ ಪ್ರಭಾವಿ ಎನ್ನಲಾಗಿದೆ. ಈ ಹಿನ್ನೆಲೆ ಮೊದಲಿನಿಂದಲೂ ರಾಜ್ಯಾಧ್ಯಕ್ಷ ಸ್ಥಾನದ ರೇಸ್‌ನಲ್ಲಿ ಇವರೂ ಇದ್ದಾರೆ ಎಂದು ಹೇಳಲಾಗುತ್ತಿದೆ.