Home Karnataka State Politics Updates ಸಿದ್ದಣ್ಣ ಬಿಜೆಪಿಗೆ ಗುದ್ದಣ್ಣ! ಕಾಂಗ್ರೆಸ್ ಪ್ರತಿಭಟನೆಗೆ ತಲೆಯ ಮೇಲೆ ಬೋರ್ಡು ತಗುಲಿಸಿಕೊಂಡು ಗಮನ ಸೆಳೆದ ಬಲಿಷ್ಠ...

ಸಿದ್ದಣ್ಣ ಬಿಜೆಪಿಗೆ ಗುದ್ದಣ್ಣ! ಕಾಂಗ್ರೆಸ್ ಪ್ರತಿಭಟನೆಗೆ ತಲೆಯ ಮೇಲೆ ಬೋರ್ಡು ತಗುಲಿಸಿಕೊಂಡು ಗಮನ ಸೆಳೆದ ಬಲಿಷ್ಠ ಟಗರು !

Hindu neighbor gifts plot of land

Hindu neighbour gifts land to Muslim journalist

ಚಾಮರಾಜನಗರ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಸಂಬಂಧ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ನಗರದಲ್ಲಿ ಮಾಜಿ ಸಿಎಂ, ಟಗರು ನಾಮಾಂಕಿತ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಈ ವೇಳೆ ಟಗರಿನ ತಲೆ ಮೇಲೆ ಒಬ್ಬಾತ ಒಂದು ದೊಡ್ದ ಬೋರ್ಡು ನೇತು ಹಾಕಿದ್ದರು. ಹಾಗೆ ಅಲ್ಲಿ ನೇತುಹಾಕಿದ್ದ “ಸಿದ್ದಣ್ಣ ಬಿಜೆಪಿಗೆ ಗುದ್ದಣ್ಣ ಎಂಬ ಬರಹ ಗಮನ ಎಲ್ಲರ ಗಮನ ಸೆಳೆಯಿತು.

ಕೊಳ್ಳೇಗಾಲ ತಾಲೂಕಿನ ಅಣಗಳ್ಳಿ ಬಸವರಾಜು ಎಂಬವರು ಸ್ವಗ್ರಾಮದಿಂದ ಒಂದು ಕೊಬ್ಬಿದ ಟಗರು ಟೆಂಪೋ ಗೆ ಎತ್ತಾಕಿಕೊಂಡು ಬಂದಿದ್ದರು. ಹಾಗೆ ಪ್ರತಿಭಟನೆಯಲ್ಲಿ ಭಾಗವಹಿಸಿದ ಟಗರು, ಸಿದ್ದುರನ್ನು ಬೆಂಬಲಿಸಲು ರೆಡಿ ಮಾಡಿಕೊಂಡು ಬಂದಿತ್ತು.
ಅದು ತನ್ನ ತಲೆಯ ಮೇಲೆ “ಸಿದ್ದಣ್ಣ ಬಿಜೆಪಿಗೆ ಗುದ್ದಣ್ಣ” ಅಂತ ಬರೆದ ನಾಮಫಲಕ ಕಟ್ಟಿಕೊಂಡು ಸಿದ್ದರಾಮಯ್ಯ ಸಾಗಿ ಬರುತ್ತಿದ್ದ ಪ್ರತಿಭಟನಾ ಮೆರವಣಿಗೆಯ ಉದ್ದಕ್ಕೂ ಹೆಮ್ಮೆಯಿಂದ ನಡೆದು ಬಂತು. ಆ ಮೂಲಕ ಜನಾಕರ್ಷಣೆ ಯ ಒಂದು ಭಾಗವಾಗಿ ಟಗರು ನಿಂತಿತ್ತು. ಈ ಹಿಂದೆ, ಇದೇ ರೀತಿ ಸಿದ್ದರಾಮಯ್ಯನವರ ಭಾಷಣದ ಸಂದರ್ಭ ವ್ಯಕ್ತಿಯೊಬ್ಬ ” ಹೌದು ಹುಲಿಯಾ” ಎಂದು ಜಗತ್ ಪ್ರಸಿದ್ದಿ ಪಡೆದದ್ದನ್ನು ಇಲ್ಲಿ ಸ್ಮರಿಸಬಹುದು.