Home Karnataka State Politics Updates Rahul Gandhi: ರಾಹುಲ್‌ ಗಾಂಧಿಗೆ ತೀವ್ರ ಹಿನ್ನೆಡೆ: ತಡೆಯಾಜ್ಞೆ ಮನವಿ ತಿರಸ್ಕೃತ, ಜೈಲೂಟ ಫಿಕ್ಸ್ ?!

Rahul Gandhi: ರಾಹುಲ್‌ ಗಾಂಧಿಗೆ ತೀವ್ರ ಹಿನ್ನೆಡೆ: ತಡೆಯಾಜ್ಞೆ ಮನವಿ ತಿರಸ್ಕೃತ, ಜೈಲೂಟ ಫಿಕ್ಸ್ ?!

Rahul Gandhi

Hindu neighbor gifts plot of land

Hindu neighbour gifts land to Muslim journalist

Rahul Gandhi Case : ಮೋದಿ ಅನ್ನುವವರೆಲ್ಲಾ ಕಳ್ಳರು ಎಂದ ‘ಮೋದಿ ಉಪನಾಮ’ ಹೇಳಿಕೆಗೆ ಸಂಬಂಧಿಸಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತ್ತೊಮ್ಮೆ ತೀವ್ರ ಹಿನ್ನಡೆಯಾಗಿದೆ. ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ (Rahul Gandhi Case) ಅರ್ಜಿಯ ವಿಚಾರಣೆ ನಡೆಸಿದ ಸೂರತ್‌ನ ಸೆಷನ್ಸ್ ಕೋರ್ಟ್ ಶಿಕ್ಷೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿದೆ.

ಸೂರತ್ ನ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ರಾಬಿನ್ ಮೊಗೇರ ಶಿಕ್ಷೆಗೆ ತಡೆ ನೀಡಲು ನಿರಾಕರಿಸಿದರು. ಇದರ ಪರಿಣಾಮವಾಗಿ ರಾಹುಲ್ ಗಾಂಧಿಯವರ ಲೋಕಸಭೆಯ ಅನರ್ಹತೆಯು ಮುಂದುವರಿಯಲಿದೆ.

ಕಾಂಗ್ರೆಸ್‌ ನಾಯಕ ಮತ್ತು ಆಗಿನ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿಯವರು ಕೋಲಾರದಲ್ಲಿ ಆಯೋಜನೆಯಾಗಿದ್ದ ಬಹಿರಂಗ ಸಭೆಯಲ್ಲಿ ಏಪ್ರಿಲ್‌ 13, 2019 ರಂದು ಬಹಿರಂಗ ಭಾಷಣ ಮಾಡುತ್ತಿದ್ದರು. ಲೋಕಸಭಾ ಚುನಾವಣೆಯ ಸಂದರ್ಭದ ಪ್ರಚಾರದಲ್ಲಿ ಕರ್ನಾಟಕದಲ್ಲಿ ಅವರು ಅಬ್ಬರದ ಭಾಷಣ ಮಾಡಿದ್ದರು. ಆಗ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ದೇಶದಲ್ಲಿ ಎಲ್ಲಾ ಕಳ್ಳರೂ ‘ ಮೋದಿ ‘ ಎಂಬ ಉಪನಾಮವನ್ನೇ ಹೊಂದಿದ್ದಾರೆ ಎಂದು ಅಪಹಾಸ್ಯ ಮಾಡಿದ್ದರು. ರಾಹುಲ್‌ ಗಾಂಧಿ ಹೇಳಿಕೆ ವಿರೋಧಿಸಿ ಗುಜರಾತ್‌ನ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಪೂರ್ಣೇಶ್ ಮೋದಿ ಅಂದು ಸೂರತ್‌ನಲ್ಲಿ ದೂರು ನೀಡಿದ್ದರು.

ಲೋಕಸಭಾ ಸಂಸದರಾದ ರಾಹುಲ್ ಗಾಂಧಿ ಅವರನ್ನು ಸೂರತ್‌ ನ ಕೆಳ ನ್ಯಾಯಾಲಯವು ಮಾರ್ಚ್ 23 ರಂದು ಸೆಕ್ಷನ್ 499 ಮತ್ತು 500 (ಮಾನನಷ್ಟ) ಅಡಿಯಲ್ಲಿ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ನಂತರ ಅವರ ವಯನಾಡ್‌ ನ ಲೋಕ ಸಭಾ ಸ್ಥಾನವನ್ನು ಅನರ್ಹಗೊಳಿಸಲಾಗಿತ್ತು.

ಅವತ್ತು ತೀರ್ಪು ಹೊರಬಿದ್ದ ಕೂಡಲೇ ರಾಹುಲ್ ಗಾಂಧಿಯವರ ಮನೆಯನ್ನು ಕೂಡಾ ಖಾಲಿ ಮಾಡಲಾಗಿತ್ತು. ಆಗ ಜಾಮೀನಿನ ಅರ್ಜಿಯ ವಿಚಾರಣೆಯೂ ನಡೆದು ನ್ಯಾಯಾಲಯ ಅವರಿಗೆ ಜಾಮೀನು ಮಂಜೂರು ಮಾಡಿತ್ತು ಅಲ್ಲದೆ, ನ್ಯಾಯಾಲಯದ ತೀರ್ಪಿನ ವಿರುದ್ಧ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಿತ್ತು. ಈಗ ರಾಜೀವ್ ಗಾಂಧಿ ಅವರಿಗೆ ತೀವ್ರ ಹಿನ್ನಡೆಯಾಗಿದೆ ಶಿಕ್ಷೆಗೆ ತಡೆಯಾಜ್ಞೆ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ.