Home Karnataka State Politics Updates ಪಗ್ ನಾಯಿಯೊಂದಿಗೆ ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗಿಯ ಅವರ ಫೋಟೋ ಕೊಲಾಜ್ ಮಾಡಿದ ತ್ರಿಪುರಾದ ಮಾಜಿ...

ಪಗ್ ನಾಯಿಯೊಂದಿಗೆ ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗಿಯ ಅವರ ಫೋಟೋ ಕೊಲಾಜ್ ಮಾಡಿದ ತ್ರಿಪುರಾದ ಮಾಜಿ ಗವರ್ನರ್ !!| ವಿವಾದ ಸೃಷ್ಟಿಸಿದ ಟ್ವೀಟ್ ಗೆ ಬಿಜೆಪಿಯಿಂದ ಭಾರೀ ಆಕ್ರೋಶ

Hindu neighbor gifts plot of land

Hindu neighbour gifts land to Muslim journalist

ರಾಜಕೀಯ ಎಂದರೆ ಹೀಗೇನೆ ಒಬ್ಬರಿಗೊಬ್ಬರು ಸದಾ ಕೆಸರೆರೆಚುತ್ತಿರುತ್ತಾರೆ. ಟ್ವೀಟ್ ಮೂಲಕವೋ ಅಥವಾ ಇನ್ನಿತರ ಸಭೆ ಸಮಾರಂಭಗಳಲ್ಲೂ ಒಬ್ಬರ ಕಾಲನ್ನು ಒಬ್ಬರು ಎಳೆಯುತ್ತಲೇ ಇರುತ್ತಾರೆ. ಇಂತಹುದೇ ಘಟನೆಯೊಂದು ತ್ರಿಪುರಾದಲ್ಲಿ ನಡೆದು ಅದೇ ದೊಡ್ಡ ವಿವಾದವನ್ನೇ ಸೃಷ್ಟಿಸಿದೆ.

ತ್ರಿಪುರಾದ ಮಾಜಿ ಗವರ್ನರ್ ತಥಾಗತ ರಾಯ್ ನಾಯಿ ಫೋಟೋ ಜೊತೆಗೆ ಬಿಜೆಪಿಯ ಪಶ್ಚಿಮ ಬಂಗಾಳದ ಉಸ್ತುವಾರಿ ಕೈಲಾಶ್ ವಿಜಯವರ್ಗಿಯಾ ಫೋಟೋವನ್ನು ಕೊಲಾಜ್ ಮಾಡಿ ಟ್ವೀಟ್ ಮಾಡುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.

ಫೋಟೋ ಜೊತೆಗೆ, ಮತ್ತೆ ಪಶ್ಚಿಮ ಬಂಗಾಳದಲ್ಲಿ ವೊಡಾಫೋನ್ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಹಲವಾರು ವರ್ಷಗಳ ಹಿಂದೆ ವೊಡಾಫೋನ್ ತನ್ನ ಕಂಪನಿಯ ಜಾಹೀರಾತಿನಲ್ಲಿ ಪಗ್‍ ನಾಯಿಗಳನ್ನು ಬಳಸಲಾಗಿತ್ತು.

ಚುನಾವಣಾ ಸೋಲಿನ ಹೊರತಾಗಿಯೂ ಕೈಲಾಶ್ ವಿಜಯವರ್ಗಿಯಾ ಇನ್ನೂ ಬಿಜೆಪಿ ಬಂಗಾಳದ ಉಸ್ತುವಾರಿಯಾಗಿದ್ದಾರೆ ಎಂಬ ನೆಟ್ಟಿಗರೊಬ್ಬರ ಟ್ವೀಟ್‍ಗೆ ಪ್ರತಿಕ್ರಿಯೆಯಾಗಿ ತಥಾಗತ ರಾಯ್ ಈ ಪೋಸ್ಟ್ ಅನ್ನು ಮಾಡಿದ್ದಾರೆ.

“ಕೈಲಾಶ್ ವಿಜಯವರ್ಗಿಯಾ ಅವರನ್ನು ಯಾರೂ ಉಲ್ಲೇಖಿಸಿಲ್ಲ. ಆದರೆ ಉನ್ನತ ನಾಯಕರೊಂದಿಗೆ ಅವರಿಗಿರುವ ನಿಕಟ ಬಾಂಧವ್ಯ ಬಹುಶಃ ಅವರನ್ನು ಸ್ಥಾನದಲ್ಲಿಯೇ ಉಳಿಸುತ್ತಿದೆ. ಕುತೂಹಲಕಾರಿ ವಿಚಾರವೆಂದರೆ, ಅವರು ಇನ್ನೂ ಬಿಜೆಪಿ ಬಂಗಾಳದ ಉಸ್ತುವಾರಿಯಾಗಿದ್ದಾರೆ. ಈ ಬಗ್ಗೆ ಬಿಜೆಪಿ ಕೊಲ್ಕತ್ತಾದಲ್ಲಿ ಸ್ಪಷ್ಟವಾದ ಮಾಹಿತಿಯಿಲ್ಲ,” ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.

ಈ ವರ್ಷದ ಆರಂಭದಲ್ಲಿ ನಡೆದ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ ಭರ್ಜರಿ ಗೆಲುವು ಸಾಧಿಸಿತು, 294 ಸ್ಥಾನಗಳಲ್ಲಿ 213 ಸ್ಥಾನಗಳನ್ನು ಗಳಿಸಿತು ಮತ್ತು ಬಿಜೆಪಿಯನ್ನು 77ಕ್ಕೆ ಹಿಂದಿಕ್ಕಿತು. ಈ ಚುನಾವಣೆ ಸೋಲಿಗೆ ರಾಜ್ಯ ಪಕ್ಷದ ಅಧ್ಯಕ್ಷ ದಿಲೀಪ್ ಘೋಷ್ ಮತ್ತು ಪಕ್ಷದ ಕೇಂದ್ರ ವೀಕ್ಷಕರಾದ ಕೈಲಾಶ್ ವಿಜಯವರ್ಗಿಯಾ, ಶಿವಪ್ರಕಾಶ್ ಮತ್ತು ಅರವಿಂದ್ ಮೆನನ್ ಕಾರಣ ಎಂದು ತಥಾಗತ ರಾಯ್ ಆರೋಪಿಸಿದ್ದಾರೆ.

ಆದರೆ ಈ ಟ್ವೀಟ್ ಗೆ ಬಿಜೆಪಿಯಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಕುರಿತು ಮಾನನಷ್ಟ ಮೊಕದ್ದಮೆ ಹೂಡುವ ಸಾಧ್ಯತೆಯೂ ಹೆಚ್ಚಿದೆ.