Home Karnataka State Politics Updates Archana Gautam : ‘ಮಿಸ್ ಬಿಕನಿ’ ಆದ ಕಾಂಗ್ರೆಸ್ ನಾಯಕಿ !! ಕಚೇರಿಗೆ ನೋ ಎಂಟ್ರಿ...

Archana Gautam : ‘ಮಿಸ್ ಬಿಕನಿ’ ಆದ ಕಾಂಗ್ರೆಸ್ ನಾಯಕಿ !! ಕಚೇರಿಗೆ ನೋ ಎಂಟ್ರಿ ಎನ್ನುತ್ತ ಚೆನ್ನಾಗಿ ಥಳಿಸಿ ಹೊರದಬ್ಬಿದ ಪಕ್ಷದ ನಾಯಕರು – ವಿಡಿಯೋ ವೈರಲ್ !

Hindu neighbor gifts plot of land

Hindu neighbour gifts land to Muslim journalist

Archana Gautam: ಕಳೆದ ವರ್ಷ ಕಾಂಗ್ರೆಸ್​ನಿಂದ ಟಿಕೆಟ್​ ಪಡೆದು ಭಾರಿ ಸುದ್ದಿಯಾಗಿದ್ದ ಉತ್ತರ ಪ್ರದೇಶದ ಹಸ್ತಿನಾಪುರದ ‘ಮಿಸ್‌ ಬಿಕಿನಿ ಇಂಡಿಯಾ’ (Miss Bikini India) ಆಗಿದ್ದ ಅರ್ಚನಾ ಗೌತಮ್‌ (Archana Gautam) ಮತ್ತು ಅವರ ತಂದೆಯ ಮೇಲೆ ದೆಹಲಿಯ ಕಾಂಗ್ರೆಸ್ ಕಚೇರಿ ಎದುರು ಭಾರಿ ಹಲ್ಲೆ ಮಾಡಲಾಗಿದೆ. ಕಚೇರಿಗೆ ನೋ ಎಂಟ್ರಿ ಎನ್ನುತ್ತ ಚೆನ್ನಾಗಿ ಥಳಿಸಿ ಹೊರದಬ್ಬಲಾಗಿದೆ. ಸದ್ಯ ಇದರ ವಿಡಿಯೋ ವೈರಲ್ ಆಗಿದೆ.

ಅರ್ಚನಾ ಗೌತಮ್ ಅವರು ತಂದೆಯ ಜೊತೆ ಕಾಂಗ್ರೆಸ್ ಆಫೀಸ್​ಗೆ ಬಂದಿದ್ದರು. ಮಹಿಳಾ ಮೀಸಲಾತಿ ಮಸೂದೆಗೆ ಸಂಬಂಧಿಸಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್ ರಾಷ್ಟ್ರೀಯ ಜನರಲ್ ಸೆಕ್ರೆಟರಿ ಪ್ರಿಯಾಂಕಾ ಗಾಂಧಿ ಅವರಿಗೆ ಶುಭಾಶಯ ತಿಳಿಸಲು ಅವರು ಬಂದಿದ್ದರು. ಈ ವೇಳೆ ಹಲ್ಲೆ ನಡೆದಿದೆ. ಕಳೆದ 29 ರಂದು ಈ ಘಟನೆ ನಡೆದಿದೆ ಎನ್ನಲಾಗಿದೆ.

ಅವರಿಗೆ ಆಫೀಸ್ ಒಳಗಡೆ ಬಿಡಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಬದಲಾಗಿ ಪ್ರವೇಶ ದ್ವಾರದಲ್ಲಿಯೇ ಥಳಿಸಿ, ಹೊಡೆದು ರಸ್ತೆಯಲ್ಲಿಯೇ ದೈಹಿಕ ದೌರ್ಜನ್ಯ ಎಸಗಲಾಗಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಅರ್ಚನಾ ಗೌತಮ್ ಅವರು ಗಂಭೀರವಾಗಿ ಆರೋಪಿಸಿದ್ದಾರೆ. ಮಾಧ್ಯಮಗಳ ಎದುರು ಅರ್ಚನಾ ನೋವು ತೋಡಿಕೊಂಡಿದ್ದಾರೆ.

ಅವರು ನಮ್ಮನ್ನು ಆಫೀಸ್ ಒಳಗೆ ಹೋಗಲು ಬಿಡಲಿಲ್ಲ. ಗೇಟ್ ಕೂಡಾ ತೆರೆಯಲಿಲ್ಲ. ಮೇಲಿಂದ ಆದೇಶ ನೀಡಲಾಗಿದೆ, ನಿಮ್ಮ ಎಂಟ್ರಿ ನಿರಾಕರಿಸಲಾಗಿದೆ ಎಂದು ತಿಳಿಸಿದ್ದರು.
ತಮ್ಮ ತಂದೆ ಹಾಗೂ ಚಾಲಕ ಈ ಘಟನೆಯಲ್ಲಿ ಗಾಯಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ಯಾಕೆ ಹೀಗೆ ಮಾಡಿದ್ರೂ ಗೊತ್ತಾಗಲಿಲ್ಲ. ನಾನು ಅಲ್ಲಿಂದ ಹೇಗೋ ತಪ್ಪಿಸಿಕೊಂಡು ನನ್ನ ಜೀವ ಉಳಿಸಿಕೊಂಡೆ ಎಂದಿದ್ದಾರೆ.

https://x.com/madhuriadnal/status/1707988873870278688?s=20

ಇದನ್ನೂ ಓದಿ: India’s Costliest Advertisement : ಮಂಗಳೂರ ಯುವಕನಿಂದ ನಿರ್ಮಾಣವಾಯ್ತು ಭಾರತದ ಅತೀ ಕಾಸ್ಟ್ಲಿಯೆಸ್ಟ್ ಎನಿಸಿದ 75 ಕೋಟಿ ರೂಪಾಯಿ ಜಾಹಿರಾತು !! ಏನಿದರ ವಿಶೇಷತೆ?!