Home Karnataka State Politics Updates Karnataka Election 2023: ಇಂದು ಹಳೇ ಮೈಸೂರಿನಲ್ಲಿ, ಸಿದ್ದರಾಮಯ್ಯ ತವರಿನಲ್ಲಿ ನರೇಂದ್ರ ಮೋದಿ ರೋಡ್ ಶೋ,...

Karnataka Election 2023: ಇಂದು ಹಳೇ ಮೈಸೂರಿನಲ್ಲಿ, ಸಿದ್ದರಾಮಯ್ಯ ತವರಿನಲ್ಲಿ ನರೇಂದ್ರ ಮೋದಿ ರೋಡ್ ಶೋ, ಅಬ್ಬರ !

Karnataka Election 2023
Image Source: Deccan Herald

Hindu neighbor gifts plot of land

Hindu neighbour gifts land to Muslim journalist

Narendra Modi road show : ರಾಜ್ಯಕ್ಕೆ ಆಗಮಿಸಿ ಈಗಾಗಲೇ ಅಬ್ಬರದ ಪ್ರಚಾರಕ್ಕೆ ಕೈ ಹಾಕಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು ಹಳೆ ಮೈಸೂರು ಭಾಗದಲ್ಲಿ ಚುನಾವಣಾ ಪ್ರಚಾರ ಕಾರ್ಯ (Narendra Modi road show)  ನಡೆಸಲಿದ್ದಾರೆ. ಜೆಡಿಎಸ್ (JDS) ಮತ್ತು ಕಾಂಗ್ರೆಸ್ (Congress) ಭದ್ರ ಕೋಟೆಗಳಾಗಿರುವ ಕ್ಷೇತ್ರಗಳ ಮೇಲೆ ಕಣ್ಣಿಟ್ಟಿರುವ ಪ್ರಧಾನಿ ಮೋದಿಯವರು ಇಂದು ಅಬ್ಬರದ ಪ್ರಚಾರ (Election Campaign) ನಡೆಸಲಿದ್ದಾರೆ.

ಗೆಲ್ಲುವ ಫಿಫ್ಟಿ ಫಿಫ್ಟಿ ಸಾಧ್ಯತೆ ಇರೋ ಕ್ಷೇತ್ರಗಳಲ್ಲಿ ಮೋದಿಯನ್ನು ಮುಂದೆ ಇಟ್ಟುಕೊಂಡು ಗೆಲ್ಲಲು ಬಿಜೆಪಿ (BJP) ತಂತ್ರ ನಡೆಸಿದೆ. ಈಗ ಓಲ್ಡ್ ಮೈಸೂರಿನಲ್ಲಿ ಬಿಜೆಪಿಯ ಒಟ್ಟು ಬಲ 11 ಕ್ಷೇತ್ರಗಳಲ್ಲಿ ಮಾತ್ರ. ಈ ಸಲ ಟಾರ್ಗೆಟ್ 25 ಟಾಸ್ಕ್ ಇಟ್ಟುಕೊಂಡು ಬಿಜೆಪಿಯಿಂದ ನಾನಾ ತಂತ್ರಗಾರಿಕೆ ಪ್ರಯೋಗ ನಡೆಸಲಿದ್ದಾರೆ ಎನ್ನುವುದು ಬಿಜೆಪಿ ಮೂಲಗಳ ಹೇಳಿಕೆ.

ಅತ್ತ ಇಂದು ಜೆಡಿಎಸ್ ಭದ್ರಕೋಟೆಗಳಾಗಿರುವ ಕೋಲಾರ (Kolar), ಚನ್ನಪಟ್ಟಣ (Channapatna) ಹಾಗೂ ಹಾಸನದ ಬೇಲೂರಲ್ಲಿ (Hassan) ಸಮಾವೇಶ ನಡೆಸಲಾಗುತ್ತದೆ.

ಕೋಲಾರದಲ್ಲಿ ಬೆಳಗ್ಗೆ 11.30 ಗಂಟೆಗೆ ಸಮಾವೇಶಕ್ಕೆ ಸಿದ್ಧತೆ ನಡೆದಿದೆ. ಚನ್ನಪಟ್ಟಣದಲ್ಲಿ ಮಧ್ಯಾಹ್ನ 1.30, ಬೇಲೂರಿನಲ್ಲಿ ಮಧ್ಯಾಹ್ನ 3.45ಕ್ಕೆ ಸಾರ್ವಜನಿಕ ಸಮಾವೇಶ ನಡೆಸಲಿದ್ದಾರೆ. ಸಂಜೆ 5.45ಕ್ಕೆ ಮೈಸೂರಿನಲ್ಲಿ 11 ಕಿ.ಮೀ. ರೋಡ್ ಶೋ ನಡೆಸಲಿದ್ದಾರೆ. ಇಂದು ಸಂಜೆ ಮಾಜಿ ಸಿಎಂ ಸಿದ್ದರಾಮಯ್ಯ (Ex CM Siddaramaiah) ತವರು ಮೈಸೂರಲ್ಲಿ ಮೋದಿ ರೋಡ್​ಶೋ ನಡೆಸಿ ಅಬ್ಬರಿಸಲಿದ್ದಾರೆ.

ಎಲ್ಲೆಲ್ಲಿ ಏನೇನು?
ಕೋಲಾರದ ಕೆಂದಟ್ಟಿ ಗ್ರಾಮದಲ್ಲಿ ಸಮಾವೇಶ ಆಯೋಜನೆ ಮಾಡಲಾಗಿದೆ. ಮೂರು ಜಿಲ್ಲೆಗಳ – ಕೋಲಾರ, ಚಿಕ್ಕಬಳ್ಳಾಪುರ, ಬೆಂ.ಗ್ರಾಮಾಂತರ ಜಿಲ್ಲೆಗಳ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮೋದಿಯವರು ಮತಯಾಚನೆ ಮಾಡಲಿದ್ದಾರೆ. ಪ್ರಧಾನಿಗಳ ಆಗಮನದ ಹಿನ್ನೆಲೆ ನರಸಾಪುರದಿಂದ ಕೊಂಡರಾಜನ ಹಳ್ಳಿವರೆಗೆ N.H 75 ಸಂಚಾರ ಬಂದ್ ಮಾಡಲಾಗಿದೆ.

ಮಾಜಿ ಸಿಎಂ ಕುಮಾರಸ್ವಾಮಿಯವರ ಸ್ವಕ್ಷೇತ್ರದಲ್ಲಿ ಪ್ರಧಾನಿ ಮೋದಿತವರ ಬೃಹತ್​ ಸಮಾವೇಶ ಆಯೋಜನೆ ಮಾಡಲಾಗಿದ್ದು, ಮತ್ತೀಕೆರೆ – ಶೆಟ್ಟಿಹಳ್ಳಿ ಸಮೀಪ 30 ಎಕರೆಯಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದೆ. ಒಟ್ಟು 50,000 ವರೆಗೆ ಆಸನ‌ ವ್ಯವಸ್ಥೆ ಇದೆ ಎನ್ನಲಾಗಿದ್ದು, ಸುಮಾರು 1.5 ಲಕ್ಷ ಜನರು ಸೇರುವ ನಿರೀಕ್ಷೆಯಿದೆಯಂತೆ. ಇಲ್ಲಿ ನಿಂತು ಎರಡು ಜೆಡಿಎಸ್ ಪ್ರಬಲ ಜಿಲ್ಲೆಗಳಲ್ಲಿ ಮೋದಿ ಮಾತಾಡಲಿದ್ದಾರೆ. ರಾಮನಗರ, ಮಂಡ್ಯ ಜಿಲ್ಲೆಗಳ ಅಭ್ಯರ್ಥಿಗಳ ಪರ ಮೋದಿ ಅವರು ಪ್ರಚಾರ ಮಾಡಲಿದ್ದಾರೆ. ಕುಣಿಗಲ್​ ಕ್ಷೇತ್ರ ಅಭ್ಯರ್ಥಿಗೂ ವೇದಿಕೆಯಲ್ಲಿ ಸ್ಥಳಾವಕಾಶ ಮಾಡಿಕೊಡಲಾಗಿದೆ.

ಇನ್ನೊಂದು ಜೆಡಿಎಸ್​​ ಹಿಡಿತದಲ್ಲಿರುವ ಹಾಸನದ ಬೇಲೂರಿನ ಇಬ್ಬೀಡು ಎಂಬ ಗ್ರಾಮದ ಬಳಿ ಸಮಾವೇಶ ಆಯೋಜಿಸಲಾಗಿದೆ. ಅಲ್ಲಿ ನಿಂತು ಮೋದಿಯವರು 7 ಹಾಸನದ ಕ್ಷೇತ್ರಗಳು, ಚಿಕ್ಕಮಗಳೂರಿನ 3 ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ನಡೆಸಲಿದ್ದಾರೆ.

ಮೈಸೂರಿನ ಗನ್​ಹೌಸ್ ಸರ್ಕಲ್​ನಿಂದ ಪ್ರಧಾನಿಗಳು ರೋಡ್​​ಶೋ ನಡೆಸಲಿದ್ದಾರೆ. ಮೈಸೂರು ವೀಳ್ಯದೆಲೆ, ಶ್ರೀಗಂಧ, ಮೈಸೂರ್ ಸಿಲ್ಕ್ ಪ್ರಧಾನಿಗಳಿಗೆ ಉಡುಗೊರೆಯನ್ನಾಗಿ ನೀಡಲಾಗುತ್ತದೆ. ರೋಡ್​ಶೋ ವೇಳೆ ಹಿರಿಯ ನಾಗರೀಕರಿಗೆ ಕೂರಲು 5 ಕಡೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ.

ಇದನ್ನೂ ಓದಿ: siddaramaiah : ‘ನಾನೇಕೆ ಬಿದ್ದೆ ಗೊತ್ತೇನ್ರಿ? ಯಾವ ಬಿಸ್ಲಿಗೂ ಜಗ್ಗಲ್ಲ ನಾನು’! ಕುಸಿದು ಬಿದ್ದ ಅಸಲಿ ಕಾರಣ ಬಿಚ್ಚಿಟ್ಟ ಸಿದ್ದರಾಮಯ್ಯ!