Home Karnataka State Politics Updates ಮುಸ್ಲಿಮರೆಲ್ಲಾ ಭಯೋತ್ಪಾದಕರಲ್ಲ; ಆದರೆ ಭಯೋತ್ಪಾದಕರೆಲ್ಲಾ ಮುಸ್ಲಿಮರು : ಸಿದ್ದರಾಮಯ್ಯ ಸರ್, ರಾಜಸ್ಥಾನ ಸರ್ಕಾರಕ್ಕೆ ಬುದ್ಧಿ ಹೇಳುತ್ತೀರಾ?...

ಮುಸ್ಲಿಮರೆಲ್ಲಾ ಭಯೋತ್ಪಾದಕರಲ್ಲ; ಆದರೆ ಭಯೋತ್ಪಾದಕರೆಲ್ಲಾ ಮುಸ್ಲಿಮರು : ಸಿದ್ದರಾಮಯ್ಯ ಸರ್, ರಾಜಸ್ಥಾನ ಸರ್ಕಾರಕ್ಕೆ ಬುದ್ಧಿ ಹೇಳುತ್ತೀರಾ? ಪ್ರತಾಪ್ ಸಿಂಹ ಕಟು ವಾಗ್ದಾಳಿ

Hindu neighbor gifts plot of land

Hindu neighbour gifts land to Muslim journalist

ಮೈಸೂರು: ಮುಸ್ಲಿಮರೆಲ್ಲಾ ಭಯೋತ್ಪಾದಕರಲ್ಲ. ಆದರೆ ಭಯೋತ್ಪಾದಕರೆಲ್ಲಾ ಮುಸ್ಲಿಮರು, ಸಿದ್ದರಾಮಯ್ಯ ಸರ್ ರಾಜಸ್ಥಾನ ಸರ್ಕಾರಕ್ಕೆ ಸ್ವಲ್ಪ ಬುದ್ಧಿ ಹೇಳುತ್ತೀರಾ ಸರ್, ಎಂದು ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.

ನೂಫುರ್ ಶರ್ಮಾ ಬೆಂಬಲಿಸಿದ ವ್ಯಕ್ತಿಯ ಹತ್ಯೆ ವಿಚಾರದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನಿಡಿದ ಸಂಸದರು, ಈ ಹತ್ಯೆ ಪೈಶಾಚಿಕವಾದ ಕೊಲೆ. ಮುಸ್ಲಿಂ ಮೂಲಭೂತವಾದಿಗಳು ದೇಶದ ಶಾಂತಿ ಕೆಡಿಸುವ ಯತ್ನವಿದು. ಮನೆಯಲ್ಲಿ ಸಾಕಿದ ದನಗಳ್ಳರಿಗೆ ಎರಡೇಟು ಬಿದ್ದರೆ ಆಕಾಶ ಭೂಮಿ ಒಂದಾಗುವ ರೀತಿ ಬೊಬ್ಬೆ ಹಾಕುವವರು ಈಗ ಎಲ್ಲಿದ್ದಾರೆ? ಒಳ್ಳೆಯ ಮುಸ್ಲಿಮರು ಎಲ್ಲಿದ್ದಾರೆ ಈಗ ? ಏನ್ಮಾಡ್ತಿದ್ದಾರೆ ಎಂದು ಪ್ರಶ್ನಿಸಿದರು.

ಬ್ರದರ್ ಬ್ರದರ್ ಎಂದು ಹೇಳುವ ಕಾಂಗ್ರೆಸ್ ನಾಯಕ ಈಗ ಯಾವ ಬಿಲದಲ್ಲಿ  ಹೋಗಿ ಅಡಗಿದ್ದಾರೆ. ಕೇವಲ ಟ್ವೀಟ್ ಮಾಡಿ ಮನೆಯೊಳಗೆ ಅಡಗಿ ಕುಳಿತರೆ ಮುಗಿತಾ ನಿಮ್ಮ ಕೆಲಸ? ಕರ್ನಾಟಕದಲ್ಲೂ ಕಾಂಗ್ರೆಸ್ ಗೆ ಅಧಿಕಾರ ಕೊಟ್ಟರೆ ರಾಜಸ್ಥಾನದ ಘಟನೆ ಕರ್ನಾಟಕದಲ್ಲೂ ಆಗುತ್ತೆ. ಇದು ರಾಜ್ಯದ ಜನರಿಗೆ ಎಚ್ಚರಿಕೆ ಗಂಟೆ. ಟಿಪ್ಪು ಸಂತತಿಗಳ ಬಗ್ಗೆ ಮತದಾರರು ಜಾಗೃತರಾಗಿರಬೇಕು. ರಾಜಸ್ಥಾನ ಸರ್ಕಾರದ ಮೇಲೆ ನನಗೆ ವಿಶ್ವಾಸವಿಲ್ಲ. ಹಿಂದೂಗಳ ಧ್ವನಿ ಅಡಗಿಸಲು ಈ ಕೃತ್ಯ ನಡೆದಿದೆ. ಈ ಕೃತ್ಯದ ಹಿಂದೆ ಕಾಂಗ್ರೆಸ್ ಇದೆ. ಕಾಂಗ್ರೆಸ್ ನವರ ಮುಸ್ಲಿಂ ಓಲೈಕೆಯಿಂದ ಈ ರೀತಿ ನಡೆಯುತ್ತಿದೆ ಎಂದು ವಾಕ್ ಪ್ರಹಾರ ನಡೆಸಿದರು.

ಮುಸ್ಲಿಮರೆಲ್ಲಾ ಭಯೋತ್ಪಾದಕರಲ್ಲ. ಆದರೆ ಭಯೋತ್ಪಾದಕರೆಲ್ಲಾ ಮುಸ್ಲಿಮರು. ಈಗ ಒಳ್ಳೆಯ ಮುಸ್ಲಿಮರು ಯಾಕೆ ಮಾತಾಡ್ತಿಲ್ಲ. ಒಳ್ಳೆಯ ಮುಸ್ಲಿಮರು ಮೌನವಾಗಿ ಇದಕ್ಕೆ ಕುಮ್ಮುಕು ಕೊಡುತ್ತಿದ್ದಾರಾ?ಇನ್ನೂ ನೀವು ಧ್ವನಿ ಎತ್ತದಿದ್ದರೆ ನಿಮ್ಮ ಮೇಲೂ ಅನುಮಾನ ಮೂಡುತ್ತೆ. ಈಗ ಮೌಲಿಗಳು, ಮುಲ್ಲಾಗಳು ಎಲ್ಲಿ ಹೋಗಿದ್ದಾರೆ. ಈ ಕೊಲೆ ತಪ್ಪು ಅಂತಾ ಆರೋಪಿಗಳ ವಿರುದ್ಧ ಫತ್ವಾ ಹೊರಡಿಸಲಿ ನೋಡೋಣಾ ಎಂದು ಸವಾಲೆಸೆದ ಸಂಸದರು, ಶುಕ್ರವಾರ ಪ್ರಾರ್ಥನೆಯಾದ ನಂತರ ಕಲ್ಲು ಬಿಸಾಕುವುದು ಹೇಳಿ ಕೊಡುವುದಷ್ಟೆ ನಿಮ್ಮ ಕೆಲಸವಾ?ಎಂದು ವಾಗ್ದಾಳಿ ನಡೆಸಿದ್ದಾರೆ ಪ್ರತಾಪ್ ಸಿಂಹ.