Home Karnataka State Politics Updates Lakshadweep: ಕೇವಲ 250 ರೂಪಾಯಿಯಲ್ಲಿ ಮಂಗಳೂರಿನಿಂದ ಲಕ್ಷದ್ವೀಪಕ್ಕೆ ಹೋಗಬೇಕಾ??ಇಲ್ಲಿದೆ ನಿಮಗೆ ಸುವರ್ಣಾವಕಾಶ!!

Lakshadweep: ಕೇವಲ 250 ರೂಪಾಯಿಯಲ್ಲಿ ಮಂಗಳೂರಿನಿಂದ ಲಕ್ಷದ್ವೀಪಕ್ಕೆ ಹೋಗಬೇಕಾ??ಇಲ್ಲಿದೆ ನಿಮಗೆ ಸುವರ್ಣಾವಕಾಶ!!

Lakshadweep

Hindu neighbor gifts plot of land

Hindu neighbour gifts land to Muslim journalist

Lakshadweep: ಪ್ರವಾಸಿಗರೇ ಗಮನಿಸಿ, ಲಕ್ಷದ್ವೀಪಕ್ಕೆ(Lakshadweep) ಹೋಗುವ ಪ್ಲಾನ್ ನಲ್ಲಿದ್ದಿರಾ?? ಹಾಗಿದ್ರೆ ನಿಮಗೆ ಗುಡ್ ನ್ಯೂಸ್ ಇಲ್ಲಿದೆ ನೋಡಿ!!ದಕ್ಷಿಣ ಕನ್ನಡ ಜಿಲ್ಲಾಡಳಿತ ಮಂಗಳೂರಿನಿಂದ (Mangaluru)ಲಕ್ಷದ್ವೀಪಕ್ಕೆ ಪ್ರವಾಸಿ ಹಡಗು ಆರಂಭ ಮಾಡಲು ಮುಂದಾಗಿದೆ.

 

ಮಂಗಳೂರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi)ಭೇಟಿ ಬೆನ್ನಲ್ಲೇ ಲಕ್ಷದ್ವೀಪದ ಪ್ರವಾಸೋದ್ಯಮ ಚಟುವಟಿಕೆಗಳು ಗರಿಗೆದರಿವೆ. ಹೀಗಾಗಿ ಹಲವು ಮಂದಿ ಲಕ್ಷದ್ವೀಪಕ್ಕೆ ಹಾರಲು ಅಣಿಯಾಗುತ್ತಿದ್ದಾರೆ. ಕೇರಳದ ಮೂಲಕ ತೆರಳುವ ಮಂದಿ ಕೊಚ್ಚಿಯಿಂದ ಹಡಗಿನ ಮೂಲಕ ತೆರಳಬಹುದು. ಆದರೆ, ಮಂಗಳೂರು ಬಂದರಿಗೆ ಲಕ್ಷದ್ವೀಪ ಕೊಚ್ಚಿಗಿಂತ ಸಮೀಪವಾಗಿದೆ. ಲಕ್ಷದ್ವೀಪಕ್ಕೆ ಮಂಗಳೂರು ಬಂದರು ಮೂಲಕವೇ ಹಣ್ಣು, ತರಕಾರಿ ಹಾಗೂ ಇತರೆ ಸರಕುಗಳು ಹೋಗುತ್ತವಂತೆ.

ಇದನ್ನೂ ಓದಿ: Mumbai Cricketer Dies: ಪಂದ್ಯದ ವೇಳೆ ಘೋರ ದುರಂತ; ಚೆಂಡು ತಲೆಗೆ ಬಡಿದು ಮುಂಬೈ ಕ್ರಿಕೆಟಿಗ ಸಾವು!!

ಕೆಲವು ವರ್ಷಗಳ ಹಿಂದೆವರೆಗೂ ಲಕ್ಷದ್ವೀಪಕ್ಕೆ ತೆರಳಲು ಪ್ರವಾಸಿ ಹಡಗು ಕೂಡಾ ಮಂಗಳೂರಿನಿಂದ ಲಭ್ಯವಿತ್ತು. ಪ್ರವಾಸಿ ಹಡಗು ತೆರಳುತ್ತಿದ್ದ ಸಮಯದಲ್ಲಿ ಕೇವಲ 250 ರಿಂದ 300 ರೂಪಾಯಿಯಲ್ಲಿ ಲಕ್ಷದ್ವೀಪ ಕಲ್ಪೆನಿ ದ್ವೀಪವನ್ನು ತಲುಪಬಹುದಾಗಿತ್ತು. ಇದಕ್ಕೆ ಪೂರಕ ವ್ಯವಸ್ಥೆಯನ್ನು ಕಲ್ಪಿಸುವಂತೆ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಸೂಚನೆ ನೀಡಿದ್ದಾರೆ.