Home Karnataka State Politics Updates VIRAL VIDEO NEWS: BJP ಟಿಕೆಟ್ ಬೇಕೆಂದು ಮೊಬೈಲ್ ಟವರ್ ಹತ್ತಿ ಕುಳಿತ ಆಸಾಮಿ

VIRAL VIDEO NEWS: BJP ಟಿಕೆಟ್ ಬೇಕೆಂದು ಮೊಬೈಲ್ ಟವರ್ ಹತ್ತಿ ಕುಳಿತ ಆಸಾಮಿ

VIRAL VIDEO NEWS

Hindu neighbor gifts plot of land

Hindu neighbour gifts land to Muslim journalist

BJP ticket : ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಬೇಕು ಎಂದು ಹೈಕಮಾಂಡ್ ಅನ್ನು ಓಲೈಸುವವರು , ಜಾತಿ ಸ್ವಾಮಿಗಳ ಕೈಲಿ ಹೇಳಿಸಿ ನೋಡುವವರು, ಸಮಾವೇಶ ನಡೆಸಿ ಜನ ಸೇರಿಸಿ ಶಕ್ತಿಪ್ರದರ್ಶನ ಮಾಡುವವರು- ಇವರನ್ನೆಲ್ಲ ನಾವು ನೋಡಿದ್ದೇವೆ. ಆದ್ರೆ ಇಲ್ಲೊಬ್ಬ ಭೂಪ ತನಗೆ ಸ್ಪರ್ಧೆಗೆ ಬಿಜೆಪಿಯಲ್ಲಿ ಟಿಕೆಟ್ ( BJP ticket) ನೀಡಬೇಕು ಎಂದು ಮೊಬೈಲ್ ಟವರ್ ಏರಿ ಹೈಡ್ರಾಮಾ ಸೃಷ್ಟಿ ಮಾಡಿದ್ದಾನೆ.

ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನಲ್ಲಿ ಈ ಘಟನೆ ನಡೆದಿದೆ. ಅಲ್ಲಿನ ಶಿವನಿ ಗ್ರಾಮದ ರಂಗಪ್ಪ ಎಂಬ ವ್ಯಕ್ತಿ ನನಗೆ ಬಿಜೆಪಿ ಟಿಕೆಟ್ ಬೇಕು ಎಂದು ಆಗ್ರಹಿಸಿ BSNL ಟವರ್ ಏರಿ ರಾಮಾ ರಂಪಾಟ ಮಾಡಿದ್ದಾನೆ. ನನಗೆ ಬಿಜೆಪಿ ಟಿಕೆಟ್ ಬೇಕೇ ಬೇಕು ಎಂದು ಆತ ಹುಚ್ಚಾಟ ಮಾಡಿರುವ ಇವನ ಮನವೊಲಿಸಲು ಗ್ರಾಮಸ್ಥರು ಹರಸಾಹಸಪಟ್ಟಿದ್ದಾರೆ.

ರಂಗಪ್ಪ ನಿನ್ನೆಯಿಂದ ಸಕತ್ ರಾಂಗ್ ಆಗಿದ್ದ. ಇಂದು ಬೆಳಗ್ಗೆ ಬೇಗ ಎದ್ದವನೇ ಸೀದಾ ಹೋಗಿ ಟವರ್ ಹತ್ತಿದ್ದಾನೆ. ಅಲ್ಲದೆ, ಟವರ್ ಮೇಲಿನಿಂದಲೇ ‘ ನಂಗ್ ಟಿಕೆಟ್ ಬೇಕೂ..’ ಎಂದು ಕೂಗು ಹಾಕಿದ್ದಾನೆ. ಬಿಜೆಪಿ ಟಿಕೆಟ್ ಕೊಡಲಿಲ್ಲ ಅಂದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ಆತ ಬೆದರಿಕೆ ಒಡ್ಡಿದ್ದು, ಆಗ ಪೊಲೀಸರಿಗೆ ಮತ್ತು ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಲಾಗಿದೆ.

ಬೆಳಿಗ್ಗೆ 7 ಗಂಟೆಯಿಂದಲೂ ಟವರ್ ಏರಿರುವ ಈ ಆಸಾಮಿ ಮಾಧ್ಯಮದವರು ಬರೋ ತನಕ ಕೆಳಗಿಳಿಯಲ್ಲ ಎಂದು ಹಠ ಹಿಡಿದಿದ್ದಾನೆ. ಆತನ ಮನವೊಲಿಸಿ ಕೆಳಗಿಳಿಸಲು ಪ್ಪ್ರಯತ್ನಿಸಲಾಗುತ್ತಿದೆ. ಈತನ ಮನವೊಲಿಸಲು ಗ್ರಾಮಸ್ಥರು ಮತ್ತು ಪೊಲೀಸರು ಹರ ಸಾಹಸಪಟ್ಟಿದ್ದಾರೆ.

ಇದನ್ನೂ ಓದಿ: BJP star ಪ್ರಚಾರಕರ ಪಟ್ಟಿ ಪ್ರಕಟ, ಕಿಚ್ಚ ಸುದೀಪ್ ಹೆಸರು ಯಾಕೆ ಮಿಸ್ ಆಯ್ತು !?