Home Karnataka State Politics Updates Karnataka Election: ಎಲೆಕ್ಷನ್ ನಡುವೆಯೇ ಬಿಜೆಪಿಗೆ ಗುಡ್ ಬೈ ಹೇಳಿದ ನಾಯಕರು ಯಾರೆಲ್ಲ?

Karnataka Election: ಎಲೆಕ್ಷನ್ ನಡುವೆಯೇ ಬಿಜೆಪಿಗೆ ಗುಡ್ ಬೈ ಹೇಳಿದ ನಾಯಕರು ಯಾರೆಲ್ಲ?

Karnataka Election

Hindu neighbor gifts plot of land

Hindu neighbour gifts land to Muslim journalist

List of leaders who quit BJP : ಕರ್ನಾಟಕ ಚುನಾವಣಾ ಅಖಾಡಕ್ಕೆ (Karnataka Election)ಕ್ಷಣಗಣನೆ ಆರಂಭವಾಗಿದ್ದು, ಹೀಗಾಗಿ, ರಾಜಕೀಯ ಪಕ್ಷಗಳು ಚುನಾವಣ ಕಣದಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗುತ್ತಿದ್ದಂತೆ ಕಮಲ ಪಾಳಯದಲ್ಲಿ(BJP) ಕೋಪಾಗ್ನಿ ಸ್ಫೋಟಗೊಂಡಿದ್ದು, ಈ ನಡುವೆ ಕೆಲ ರಾಜಕೀಯ ಮುಖಂಡರು ಪಕ್ಷಕ್ಕೆ ಗುಡ್ ಬೈ ಹೇಳಿ ರಾಜೀನಾಮೆ ನೀಡಿದ್ದು, ಈ ನಡುವೆ ಏಕಾಏಕಿ ಕೆಲ ನಾಯಕರು ತಮ್ಮ ನಿಲುವನ್ನು ಬದಲಿಸಿದ್ದು ಕಂಡುಬಂದಿದೆ. ಇದರ ನಡುವಲ್ಲೇ ಟಿಕೆಟ್ ಆಕಾಂಕ್ಷಿತರಾಗಿದ್ದ ಬಿಜೆಪಿ ನಾಯಕರು ಯಾರ ಮನವೊಲಿಕೆಗೂ ಜಗ್ಗದೇ ಪಕ್ಷ ತೊರೆದಿರುವುದು ಗೊತ್ತೇ ಇದೆ. ಹಾಗಿದ್ರೆ, ಈ ಲಿಸ್ಟ್ ನಲ್ಲಿ ಇರುವ ಬಿಜೆಪಿ ನಾಯಕರು ಯಾರೆಲ್ಲ (List of leaders who quit BJP)?

ಕರ್ನಾಟಕ ವಿಧಾನಸಭೆ ಚುನಾವಣೆಯ (Karnataka Assembly Election) ಹಿನ್ನೆಲೆ ಚುನಾವಣೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಯಾಗುತ್ತಿದ್ದಂತೆ ಕೆಲವರ ಹೆಸರನ್ನು ಕೈ ಬಿಟ್ಟಿರುವುದರಿಂದ ಬಿಜೆಪಿಗೆ (BJP) ಶಾಕ್​ ಮೇಲೆ ಶಾಕ್​ ಎದುರಾಗುತ್ತಿದ್ದು, ಅನೇಕ ವಿಕೆಟ್ ಪತನವಾಗಿದೆ.

ಲಕ್ಷ್ಮಣ ಸವದಿ(Laxman Savadi)
ಲಕ್ಷ್ಮಣ ಸವದಿ ಟಿಕೆಟ್‌ ನೀಡದಿದ್ದಕ್ಕೆ ಬಿಜೆಪಿ ತೊರೆ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡಿದ್ಧಾರೆ. ಜಿಲ್ಲೆಯಲ್ಲಿ ಟಿಕೆಟ್ ವಂಚಿತ ಬಿಜೆಪಿ ಆಕಾಂಕ್ಷಿಗಳ ಕ್ಷೇತ್ರಗಳಲ್ಲಿ ಚುನಾವಣೆ ಸ್ಪರ್ಧೆಯ ಪೈಪೋಟಿ ಕಾವು ದಿನದಿಂದ ದಿನಕ್ಕೆ ಕಾವೇರುತ್ತಿದೆ.ಅಥಣಿ ಕ್ಷೇತ್ರದಲ್ಲಿ ಬಂಡಾಯದ ಸ್ಪಷ್ಟ ಸಂದೇಶ ರವಾನಿಸಿರುವ ಲಕ್ಷ್ಮಣ ಸವದಿ ಮನವೊಲಿಸಲು ಬಿಜೆಪಿ ನಾಯಕರು ಕಸರತ್ತು ನಡೆಸುತ್ತಿದೆ.

ಮಾಜಿ ಸಿಎಂ ಜಗದೀಶ್ ಶೆಟ್ಟರ್(Jagadish Shettar)
ಬಿಜೆಪಿ (BJP) ಪಾಳಯದಲ್ಲಿ ಎಲ್ಲರ ನಿರೀಕ್ಷೆ ತಲೆ ಕೆಳಗಾಗುವ ಹಾಗೆ ಈ ಬಾರಿ ಹಳೆಯ ಮುತ್ಸದ್ದಿ ನಾಯಕರನ್ನು ಬಿಟ್ಟು ಹೊಸ ಮುಖಗಳಿಗೆ ಅವಕಾಶ ನೀಡಿರುವುದು ಕಂಡುಬಂದಿದೆ. ಹೀಗಾಗಿ, ಟಿಕೇಟ್ ವಂಚಿತರು ತಮ್ಮ ಆಕ್ರೋಶ ಹೊರ ಹಾಕುತ್ತಿದ್ದಾರೆ. ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರದ ಪ್ರಭಾವಿ ರಾಜಕಾರಣಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar)ಸದ್ಯ, ಬಿಜೆಪಿಗೆ ಗುಡ್‌ಬೈ ಹೇಳಿದ್ದು ಬೇರೆ ಪಕ್ಷಕ್ಕೆ ಬೆಂಬಲ ಸೂಚಿಸುವ ಸಾಧ್ಯತೆಯಿದೆ.

ಎಂ. ಪಿ ಕುಮಾರಸ್ವಾಮಿ(M.P. Kumaraswamy)
ವಿಧಾನಸಭೆ ಚುನಾವಣೆ ಹಿನ್ನೆಲೆ ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಆದರೆ ಮೂಡಿಗೆರೆಯಿಂದ ಎಂ.ಪಿ.ಕುಮಾರಸ್ವಾಮಿಗೆ ಟಿಕೆಟ್‌ ಮಿಸ್‌ ಆಗಿತ್ತು. ಹೀಗಾಗಿ, ಟಿಕೆಟ್‌ ಕೈ ತಪ್ಪಿದ್ದರಿಂದ ಮೂಡಿಗೆರೆ ಶಾಸಕ ಎಂ. ಪಿ ಕುಮಾರಸ್ವಾಮಿ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ.

ಅರಸೀಕೆರೆ ವಿಧಾನಸಭೆ ಕ್ಷೇತ್ರದ ಎನ್.ಆರ್.ಸಂತೋಷ್
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (BS Yediyurappa) ಅವರ ಮಾಜಿ ರಾಜಕೀಯ ಕಾರ್ಯದರ್ಶಿ ಎನ್.ಆರ್ ಸಂತೋಷ್ (NR Santhosh) ಅವರಿಗೆ ಅರಸೀಕೆರೆ (Arsikere ) ವಿಧಾನಸಭಾ ಕ್ಷೇತ್ರದ ಟಿಟಿಕೆಟ್ಸಿಗದೆ ಇರುವ ಹಿನ್ನೆಲೆ ಬಿಜೆಪಿಗೆ ಗುಡ್ ಬೈ ಹೇಳಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಫೈಟರ್ ರವಿ
ಟಿಕೆಟ್​ ಸಿಗದ ಹಿನ್ನೆಲೆಯಲ್ಲಿ ಕಮಲ ಪಾಳಯದಲ್ಲಿ ಒಬ್ಬೊಬ್ಬರಾಗಿ ಪಕ್ಷ ಬಿಡುತ್ತಿದ್ದು, ಇದೀಗ ಬಿಜೆಪಿಯ ಇನ್ನೊಬ್ಬರು ಪಕ್ಷಕ್ಕೆ ವಿದಾಯ ಹೇಳಿದ್ದಾರೆ. ಟಿಕೆಟ್​ ವಂಚಿತರಾದ ಬಿ.ಎಂ.ಮಲ್ಲಿಕಾರ್ಜುನ ಅಲಿಯಾಸ್​ ​ಫೈಟರ್ ರವಿ (Fighter Ravi) ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಪಕ್ಷದಿಂದ ಹೊರನಡೆದಿದ್ದಾರೆ.

ಚುನಾವಣಾ ಕಾವು ಎಲ್ಲೆಡೆ ಗರಿಗೆದರಿದ್ದು, ಪಕ್ಷದಿಂದ ಒಬ್ಬೊಬ್ಬರಾಗಿ ಹೊರ ನಡೆಯುತ್ತಿರುವುದರಿಂದ ರಾಜಕೀಯ ಮುಖಂಡರ ಮುಂದಿನ ನಡೆಯೇನು ಎಂಬ ಕುತೂಹಲ ಜನವಲಯದಲ್ಲಿ ಮೂಡಿದ್ದು, ಇದನ್ನೇ ದಾಳವಾಗಿ ಬಳಸಿಕೊಂಡು ಅಸಮಾದಾನಿತರನ್ನು ತಮ್ಮ ಪಕ್ಷದತ್ತ ಸೆಳೆಯಲು ವಿಪಕ್ಷಗಳು ಕೂಡ ಮುಂದಾಗಿದ್ದು, ಹೀಗಾಗಿ ರಾಜಕೀಯ ರಣರಂಗದಲ್ಲಿ ಜಿದ್ದಾಜಿದ್ದಿನ ಪೈಪೋಟಿ ನಡೆಯುವ ಸಾಧ್ಯತೆ ದಟ್ಟವಾಗಿದೆ.