Home Breaking Entertainment News Kannada Keerthi suresh: ನಟನೆ ಬಿಟ್ಟು ಪಾಲಿಟಿಕ್ಸ್‌ಗೆ ಕೀರ್ತಿ ಸುರೇಶ್ ಎಂಟ್ರಿ..!? ಏಂದ್ರು ಗೊತ್ತಾ ‘ಮಹಾನಟಿ’??

Keerthi suresh: ನಟನೆ ಬಿಟ್ಟು ಪಾಲಿಟಿಕ್ಸ್‌ಗೆ ಕೀರ್ತಿ ಸುರೇಶ್ ಎಂಟ್ರಿ..!? ಏಂದ್ರು ಗೊತ್ತಾ ‘ಮಹಾನಟಿ’??

Keerthi suresh
Image source- Tollywood

Hindu neighbor gifts plot of land

Hindu neighbour gifts land to Muslim journalist

Keerthi suresh: ಸೌತ್‌ ಇಂಡಿಯಾದ(South india) ಖ್ಯಾತ ನಟಿ ಕೀರ್ತಿ ಸುರೇಶ್‌(Keerti suresh) ಸಖತ್‌ ಗ್ಲಾಮರಸ್‌(Glamaras) ರೋಲ್‌ಗಳಲ್ಲಿ ಮಿಂಚುತ್ತಾ ಅಭಿಮಾನಿಗಳ ಹೃದಯ ಕದ್ದು, ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ಕೀರ್ತಿ ಇತ್ತೀಚೆಗೆ ತಮ್ಮ ಮದುವೆ ವಿಚಾರವಾಗಿ ಬಹಳ ಸುದ್ದಿಯಾಗಿದ್ರು. ಆದರೀಗ ಇದೆಲ್ಲದರ ನಡುವೆ ಕೀರ್ತಿ ಸುರೇಶ್‌ ರಾಜಕೀಯ(Political) ಅಖಾಡಕ್ಕೆ ಇಳಿಯಲಿದ್ದಾರೆ ಎನ್ನುವ ಸುದ್ಧಿಯೊಂದು ಹರಿದಾಡುತ್ತಿದೆ.

‘ಮಹಾನಟಿ’ ಯಾದ ಕೀರ್ತಿ ಸುರೇಶ್ ಇದೀಗ ಮತ್ತೊಂದು ಕಾರಣಕ್ಕಾಗಿ ಸುದ್ದಿಗೆ ಸಿಕ್ಕಿದ್ದಾರೆ. ಈ ಮಹಾನಟಿ ಸದ್ಯದಲ್ಲೇ ರಾಜಕಾರಣ (Politics) ಪ್ರವೇಶ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಯಾಕೆಂದರೆ ಇದೀಗ ಅವರು ಉದಯನಿಧಿ ಸ್ಟಾಲಿನ್(Udayanidhi Stalin) ಜೊತೆ ಮಾಮನನ್(Mamanan) ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ರಾಜಕೀಯ ಹಿನ್ನೆಲೆಯನ್ನು ಕಥೆಯನ್ನು ಹೊಂದಿದೆ. ಈ ಸಿನಿಮಾ ಸೆಲ್ವರಾಜ್ ನಿರ್ದೇಶನದಲ್ಲಿ ಮೂಡಿ ಬಂದಿದೆ. ಚಿತ್ರದ ಪ್ರಚಾರದಲ್ಲಿ ಕೇಳಿ ಬಂದ ಪ್ರಶ್ನೆಗೆ ಕೀರ್ತಿ ನೀಡಿದ ಉತ್ತರವೇ ಅವರ ರಾಜಕೀಯ ಕುರಿತಾದ ಸುದ್ದಿಗೆ ಕಾರಣವಾಗಿದೆ.

ಹೌದು, ಕೀರ್ತಿ ಅವರು ಚಿತ್ರದ ಪ್ರಚಾರದ ಭಾಗವಾಗಿ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ವೇಳೆ ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನದಲ್ಲಿ ರಾಜಕೀಯ ಪ್ರವೇಶದ ಕುರಿತು ಪ್ರತಿಕ್ರಿಯಿಸಿದ್ದು, ಈ ಹೇಳಿಕೆ ಕೀರ್ತಿ ಭವಿಷ್ಯದಲ್ಲಿ ರಾಜಕೀಯ ಪ್ರವೇಶ ಮಾಡುವ ಆಸಕ್ತಿ ಸೂಚಿಸುತ್ತದೆ. ಈ ಹಿಂದೆ ಕೀರ್ತಿ ಸುರೇಶ್ ಬಿಜೆಪಿ(BJP) ಸೇರುತ್ತಾರೆ ಎಂದು ಚಿತ್ರರಂಗದಲ್ಲಿ ಭಾರೀ ಸುದ್ದಿಯಾಗಿತ್ತು. ಆದರೆ ಕೀರ್ತಿ ಸುರೇಶ್ ತಾಯಿ ಮೇನಕಾ ಸುರೇಶ್(Menaka suresh) ಈ ಸುದ್ದಿಯನ್ನು ಅಲ್ಲಗಳೆದಿದ್ದರು. ಮುಂದೆ ಕೀರ್ತಿ ಸುರೇಶ್ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಅಂದಹಾಗೆ ಹಿಂದೆ ಡೇಟಿಂಗ್(Dating) ವಿಚಾರವಾಗಿಯೂ ಕೀರ್ತಿ ಸುರೇಶ್ ಗಾಸಿಪ್ ಖಾಲಂನಲ್ಲಿ ಕಾಣಿಸಿಕೊಂಡಿದ್ದರು. ದಳಪತಿ ವಿಜಯ್ ಜೊತೆ ಕೀರ್ತಿ ಡೇಟಿಂಗ್ ಮಾಡುತ್ತಿದ್ದು, ವಿಜಯ್ ಅವರ ಸಂಸಾರ ಹಾಳಾಗಿದೆ ಎಂದು ವರದಿಯಾಗಿತ್ತು. ಈ ವಿಚಾರವಾಗಿ ಕೀರ್ತಿ ಮಾತನಾಡಿ, ಅಂಥದ್ದೇನೂ ಇಲ್ಲ. ನಾವಿಬ್ಬರೂ ಡೇಟಿಂಗ್ ಮಾಡುತ್ತಿಲ್ಲ ಎನ್ನುವ ವಿಚಾರವನ್ನು ಹಂಚಿಕೊಂಡಿದ್ದರು. ಅಲ್ಲಿಗೆ ಆ ಗಾಸಿಪ್ ಗೆ ಫುಲ್ ಸ್ಟಾಪ್ ಇಡುವ ಪ್ರಯತ್ನ ಮಾಡಿದ್ದರು.

ಸದ್ಯ ಸದ್ಯ ನಟಿ ಕೀರ್ತಿ ಸುರೇಶ್‌ ʼಮಾಮನನ್‌ʼ ಸಿನಿಮಾವನ್ನು ಈ ವಾರ ಎದುರು ನೋಡುತ್ತಿದ್ದಾರೆ. ಚಿತ್ರದಲ್ಲಿ ಸ್ಟಾಲಿನ್‌ ಜೊತೆ ಕೀರ್ತಿ ಸುರೇಶ್‌ ನಟಿಟಿದ್ದಾರೆ. ಈ ಸಿನಿಮಾ ಮಾರಿ ಸೆಲ್ವರಾಜ್‌ ನಿರ್ದೇಶನದಲ್ಲಿ ಮೂಡಿಬಂದಿದ್ದು, ಸಾಕಷ್ಟು ಕೂತುಹಲ ಕೆರಳಿಸಿದೆ. ಅದರಲ್ಲೂ ನಟ ಉದಯನಿಧಿ ನನ್ನ ಕೊನೆಯ ಸಿನಿಮಾ ಎಂದು ಹೇಳಿದ್ದು, ಸಿನಿಮಾ ಭಾರೀ ನಿರೀಕ್ಷೆ ಹುಟ್ಟು ಹಾಕಿದೆ.