Home Karnataka State Politics Updates KSRTC New Rules: ಶಕ್ತಿ ಯೋಜನೆಯಲ್ಲಿ ರಾಜ್ಯಾದ್ಯಂತ ಹೊಸ ನಿಯಮ ಜಾರಿ!

KSRTC New Rules: ಶಕ್ತಿ ಯೋಜನೆಯಲ್ಲಿ ರಾಜ್ಯಾದ್ಯಂತ ಹೊಸ ನಿಯಮ ಜಾರಿ!

Hindu neighbor gifts plot of land

Hindu neighbour gifts land to Muslim journalist

KSRTC New Rules: ರಾಜ್ಯಾದ್ಯಂತ ಶಕ್ತಿ ಯೋಜನೆಯಲ್ಲಿ ಹೊಸ ನಿಯಮ ಜಾರಿ ತರಲಾಗಿದೆ. ಹೌದು, KSRTC ನಲ್ಲಿ ಉಚಿತವಾಗಿ ಪ್ರಯಾಣಿಸುವ ಮಹಿಳೆಯರಿಗೆ ಕೊನೆಗೂ ಹೊಸ ನಿಯಮಗಳನ್ನು (KSRTC New Rules) ತರಲಾಗಿದೆ. ಕರ್ನಾಟಕ ರಾಜ್ಯ ಸಾರಿಗೆ ರಸ್ತೆ ಸಾರಿಗೆ ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕರು ಇತ್ತೀಚೆಗೆ ಹೊಸ ಆದೇಶವನ್ನು ಹೊರಡಿಸಿದ್ದು, ಅದರ ಪ್ರಕಾರ ಉಚಿತ ಟಿಕೆಟ್‌ನೊಂದಿಗೆ ಬಸ್‌ನಲ್ಲಿ ಪ್ರಯಾಣಿಸುವ ಮಹಿಳೆಯರು ಟಿಕೆಟ್ ಕಳೆದುಕೊಂಡರೆ ದಂಡ ವಿಧಿಸಲಾಗುತ್ತದೆ.

ಶಕ್ತಿ ಯೋಜನೆಯಡಿ ಮಹಿಳೆಯರಿಗೆ ವಿತರಿಸುವ ಪಿಂಕ್ ಟಿಕೆಟ್‌ ಕಳೆದುಹೋದರೆ, ಬಸ್ ಕಂಡಕ್ಟರ್‌ನಿಂದ ಟಿಕೆಟ್‌ಗೆ ಹತ್ತು ರೂಪಾಯಿ ದಂಡ ವಿಧಿಸಲಾಗುತ್ತದೆ.

ಹೌದು, ಶಕ್ತಿ ಯೋಜನೆ ಅಡಿ ಮಹಿಳೆಯರಿಗೆ ಉಚಿತ ಟಿಕೆಟ್‌ ವಿತರಣೆಯ ಸಂದರ್ಭದಲ್ಲಿ ನಿರ್ವಾಹಕರು ಬಳಸುವ ಟಿಕೆಟ್ ವಿತರಣಾ ಯಂತ್ರವನ್ನು ಹಸ್ತಾಂತರಿಸುವ ಸಮಯದಲ್ಲಿ ಪ್ರಯಾಣಿಕರಿಗೆ ಟಿಕೆಟ್ ಅನ್ನು ಹಸ್ತಚಾಲಿತವಾಗಿ ವಿತರಿಸಬೇಕು. ಆದರೆ ಆ ಟಿಕೆಟ್‌ಗಳಲ್ಲಿ ಘಟಕ, ವಿಭಾಗ, ಇಂದ, ಗೆ ಮತ್ತು ವೇಳಾಪಟ್ಟಿಯ ಆಯ್ಕೆಗಳಲ್ಲಿ ಸ್ಥಳವನ್ನು ಖಾಲಿ ಬಿಡಲಾಗಿದೆ. ಇವೆಲ್ಲವನ್ನೂ ನಿರ್ವಾಹಕರು ಭರ್ತಿ ಮಾಡಿ ಅವರ ಸಹಿ ನಂತರ ಮಹಿಳೆಯರಿಗೆ ಪಿಂಕ್ ಟಿಕೆಟ್ ವಿತರಿಸಬೇಕು.

ಪುರುಷರ ಟಿಕೆಟ್‌ನಲ್ಲಿ ಎಲ್ಲಿಂದ ಎಲ್ಲಿಗೆ ಎಂಬ ಮೊತ್ತವನ್ನು ಸೂಚಿಸಲಾಗಿದೆ ಆದರೆ ಮಹಿಳೆಯರ ಉಚಿತ ಟಿಕೆಟ್‌ನಲ್ಲಿ ನಮೂದಿಸಿಲ್ಲ. ಆದ್ದರಿಂದ ಕಂಡಕ್ಟರ್‌ಗಳು ಎಲ್ಲವನ್ನೂ ಭರ್ತಿ ಮಾಡಬೇಕು. ಈಗಾಗಲೇ ಒತ್ತಡದಲ್ಲಿ ಕೆಲಸ ಮಾಡುತ್ತಿರುವ ಕಂಡಕ್ಟರ್ ಗೆ ಇದರಿಂದ ಮತ್ತಷ್ಟು ಹೊರೆಯಾಗಲಿದೆ.

ಒಂದು ವೇಳೆ ಮಹಿಳೆಯರಿಗೆ ನೀಡಿದ ಪಿಂಕ್ ಟಿಕೆಟ್ ಚೀಟಿಯನ್ನು ಮಹಿಳೆಯರು ಕಳೆದುಕೊಂಡರೆ ಆಯೋಜಕರು ರೂ. 10 ದಂಡ ವಿಧಿಸಲಾಗುವುದು ಎಂದು ತಿಳಿಸಲಾಗಿದೆ.