Home Karnataka State Politics Updates Congress: ಸರಕಾರಿ ಜಮೀನು ಆರ್‌ಎಸ್ಎಸ್‌ಗೆ ಹಂಚಿಕೆ ಮಾಡಿದ ಬಿಜೆಪಿ; ವಿವಾದಿತ ಭೂಮಿಯನ್ನು ಶಾರ್ಟ್‌ಲಿಸ್ಟ್ ಮಾಡಲು ತಯಾರದ...

Congress: ಸರಕಾರಿ ಜಮೀನು ಆರ್‌ಎಸ್ಎಸ್‌ಗೆ ಹಂಚಿಕೆ ಮಾಡಿದ ಬಿಜೆಪಿ; ವಿವಾದಿತ ಭೂಮಿಯನ್ನು ಶಾರ್ಟ್‌ಲಿಸ್ಟ್ ಮಾಡಲು ತಯಾರದ ಕಾಂಗ್ರೆಸ್‌ ಸರಕಾರ

Congress

Hindu neighbor gifts plot of land

Hindu neighbour gifts land to Muslim journalist

Congress: ಕಾಂಗ್ರೆಸ್‌ ಸರಕಾರ ಬಂದಾಗಿನಿಂದ ಒಂದಲ್ಲ ಒಂದು ವಿಷಯದಲ್ಲಿ ಭಾರೀ ಪ್ರಚಾರ ಪಡೆಯುತ್ತಿದೆ. ಗ್ಯಾರಂಟಿ ಭರವಸೆ ಒಂದೆಡೆಯಾದರೆ, ಬಿಜೆಪಿ ಸರಕಾರ ತಮ್ಮ ಅಧಿಕಾರ ಅವಧಿಯಲ್ಲಿ ಮಾಡಿದಂತಹ ಕೆಲವೊಂದು ಕೆಲಸಕ್ಕೆ ಕಾಂಗ್ರೆಸ್‌ ಸರಕಾರ ಕೈ ಹಾಕಿದೆ ಎನ್ನಲಾಗಿದೆ. ಈ ವಿಷಯ ಯಾಕೆ ಹೇಳ್ತಾ ಇದ್ದೀವಿ ಎಂದರೆ ಬಿಜೆಪಿ ಸರಕಾರ ತನ್ನ ಅಧಿಕಾರವಧಿಯಲ್ಲಿ ಆರ್‌ಎಸ್‌ಎಸ್‌ ಮತ್ತು ಅದರ ಅಂಗಸಂಸ್ಥೆಗಳಿಗೆ ಭೂಮಿ ಮಂಜೂರು ಮಾಡಿದೆ ಎನ್ನಲಾಗಿದ್ದು, ಅದನ್ನು ಪರಿಶೀಲಿಸಲು ಕರ್ನಾಟಕ ಕಾಂಗ್ರೆಸ್‌ (Congress) ಸರಕಾರ ನಿರ್ಧಾರ ಮಾಡಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಹರಳೂರಿನಲ್ಲಿ ಚಾಣಕ್ಯ ವಿಶ್ವವಿದ್ಯಾಲಯ ಸ್ಥಾಪಿಸಲು ಶಿಕ್ಷಣ ಮತ್ತು ಸಾಮಾಜಿಕ ಅಧ್ಯಯನ ಕೇಂದ್ರಕ್ಕೆ (ಸೆಸ್‌) ನೀಡಿರುವ 116 ಎಕರೆ ಭೂಮಿ ಪರಿಶೀಲನೆ ಮಾಡಲು ನಿರ್ಧಾರ ಮಾಡಿದೆ ಎನ್ನಲಾಗಿದೆ.

ಕಾಂಗ್ರೆಸ್‌ ನಾಯಕರು ಬಿಜೆಪಿ ಸರಕಾರವು 2020-21ರಲ್ಲಿ 300ಕೋಟಿ ರೂ. ಗಿಂತಲೂ ಹೆಚ್ಚು ಬೆಲೆಬಾಳುವ ಭೂಮಿಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಲಿಗೆ ಸೇರಿದ ಸೆಸ್‌ ಗೆ 50ಕೋಟಿ ರೂ. ಗೆ ಹಂಚಿಕೆ ಮಾಡಿದೆ ಎಂದು ಆರೋಪ ಮಾಡಿದ್ದರು. ಹಾಗೆನೇ ಸೆಸ್‌ನಲ್ಲಿರುವ ಜನರು ಆರ್‌ಎಸ್‌ಎಸ್‌ನೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬ ಮಾತನ್ನೂ ಕೂಡಾ ಅಂದು ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಆರೋಪ ಮಾಡಿದ್ದರು.

 

ಇದನ್ನು ಓದಿ: Viral news: ಅಯ್ಯೋ ಇವ್ರಿಗೆ ಫ್ರೀ ಟಿಕೆಟ್ ಯಾಕ್ರಪ್ಪ…? ನಮ್ಗೆ ಎಣ್ಣೆ ರೇಟ್ ಇಳಿಸ್ರಪ್ಪಾ…!!