Home Karnataka State Politics Updates Laxmana savadi-jarkiholi: ‘ ಗಂಡಸ್ತನ ‘ ತೋರಿಸಲು ಹೋಗಿ ಮಂತ್ರಿ ಪದವಿ ಎಗರಿ ಹೋದದ್ದು ಎಲ್ರಿಗೂ...

Laxmana savadi-jarkiholi: ‘ ಗಂಡಸ್ತನ ‘ ತೋರಿಸಲು ಹೋಗಿ ಮಂತ್ರಿ ಪದವಿ ಎಗರಿ ಹೋದದ್ದು ಎಲ್ರಿಗೂ ಗೊತ್ತು: ಜಾರಕಿಹೊಳಿಗೆ ಸವದಿ ಟಾಂಗ್ !

Laxmana savadi-jarkiholi
Imagr source: imdiaposten.com

Hindu neighbor gifts plot of land

Hindu neighbour gifts land to Muslim journalist

Laxmana Savadi-jarkiholi: ಈಗಾಗಲೇ ಚುನಾವಣೆಯ (Election 2023) ಕಾವು ಎಲ್ಲೆಡೆ ಗರಿಗೆದರಿದ್ದು, ಚುನಾವಣೆಗೆ ತಮ್ಮ ಅಭ್ಯರ್ಥಿಗಳನ್ನು ನಿಲ್ಲಿಸಿ ಮೇ 10ರಂದು ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಗೆ( Election 2023)ಗೆಲುವಿನ ಜಯಭೇರಿ ಸಾಧಿಸಲು ರಾಜಕೀಯ ಪಕ್ಷಗಳು ಭರದ ಸಿದ್ಧತೆ ನಡೆಸುತ್ತಿದೆ. ಈ ನಡುವೆ ರಾಜಕೀಯ ಪಕ್ಷಗಳು ವಿರೋಧ ಪಕ್ಷಗಳ ಮೇಲೆ ಆರೋಪ ಪ್ರತ್ಯಾರೋಪ ಮಾಡುವುದು ಮಾಮೂಲಿ. ಇದೀಗ, ಅಥಣಿ ಕಾಂಗ್ರೆಸ್‌ ಅಭ್ಯರ್ಥಿ ಲಕ್ಷ್ಮಣ ಸವದಿಯವರು ರಮೇಶ ಜಾರಕಿಹೊಳಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.

ರಮೇಶ್ ಜಾರಕಿಹೊಳಿ ಗಂಡಸ್ತನ ಇದ್ದರೇ ಗೆದ್ದು ಬಾ ಎಂದು ಪದೇ ಪದೇ ಹೇಳುವುದಕ್ಕೆ ಕಾಂಗ್ರೆಸ್‌ ಅಭ್ಯರ್ಥಿ ಲಕ್ಷ್ಮಣ ಸವದಿಯವರು(Laxmana Savadi-jarkiholi) ಟಾಂಗ್ ನೀಡಿದ್ದಾರೆ. ಗಂಡಸ್ತನ ತೋರಿಸಲು ಹೋಗಿ ಮಂತ್ರಿ ಪದವಿ ಕಳೆದುಕೊಂಡಿದ್ದು, ಎಲ್ಲರಿಗೂ ಬಹಿರಂಗವಾಗಿದೆ ಎಂದು ರಮೇಶ್ ಜಾರಕಿಹೊಳಿಯವರಿಗೆ ಟಾಂಗ್ ನೀಡಿದ್ದಾರೆ. ಸದ್ಯ ಲಕ್ಷ್ಮಣ ಸವದಿಯವರು ಇದರಲ್ಲಿ ಗಂಡಸ್ತನವೇನು ಬರುತ್ತದೆ ಎಂದು ಪ್ರಚಾರ ಸಭೆಯ ಸಂದರ್ಭ ಅವರಿಗೆ ಪ್ರಶ್ನೆ ಮಾಡಿದ್ದಾರೆ. ಅಷ್ಟೇ ಅಲ್ಲದೇ, ಜನರ ಮನವೊಲೈಕೆ ಮಾಡುವುದನ್ನು ಬಿಟ್ಟು ಉಡಾಫೆ ಮಾತುಗಳನ್ನು ಆಡುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದ ಎಂದು ಇದೇ ವೇಳೆ ಹೇಳಿಕೆ ನೀಡಿದ್ದಾರೆ. ಸ್ವಾಭಿಮಾನಿ ಮತದಾರರು ಕಾಂಗ್ರೆಸ್‌ ಪಕ್ಷವನ್ನು ಬೆಂಬಲ ನೀಡಿ ತನಗೆ ಅತ್ಯಮೂಲ್ಯ ಮತಗಳನ್ನು ನೀಡಿ ನನಗೆ ಸವಾಲು ಹಾಕುವವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಪ್ರಚಾರದ ವೇಳೆ ಮನವಿ ಸಲ್ಲಿಸಿದ್ದಾರೆ.

20 ವರ್ಷಗಳ ಹಿಂದೆ ಅಥಣಿಯಲ್ಲಿ ಭಾಜಪ ಗ್ರಾಪಂ, ತಾಪಂ, ಜಿಪಂ ಒಬ್ಬರೂ ಚುನಾಯಿತ ಪ್ರತಿನಿಧಿ ಇರದಿದ್ದ ಸಂದರ್ಭ ಪಕ್ಷವನ್ನು ಸಂಘಟಿಸಿ ಶಾಸಕನಾಗಿ ಆಯ್ಕೆಯಾಗಿದ್ದು ಮಾತ್ರವಲ್ಲ 2018ರ ಚುನಾವಣೆಯಲ್ಲಿ ಹೆಚ್ಚಿನ ಮಂದಿ ಶಾಸಕರಾಗುವಲ್ಲಿ ಮಹತ್ತರ ಪಾತ್ರ ವಹಿಸಿದ್ದೇನೆ. ಆದರೆ ಬಿಜೆಪಿ ಪಕ್ಷ ಸೇರಿದ ಬಳಿಕ ಬಿಜೆಪಿ ಪಕ್ಷದವರು ಟಿಕೇಟ್ ನೀಡದೆ ಮೋಸ ಮಾಡಿದ್ದಾರೆ ಎಂದು ಇದೇ ವೇಳೆ ಆರೋಪಿಸಿದ್ದಾರೆ.

ಇದನ್ನೂ ಓದಿ: NIRDPR Young Fellow Recruitment 2023:ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯಲ್ಲಿ ಹುದ್ದೆಗಳ ನೇಮಕ! ಈ ಕೂಡಲೇ ಅರ್ಜಿ ಸಲ್ಲಿಸಿ, ತಡಮಾಡಬೇಡಿ!!