Home Karnataka State Politics Updates D K Shivkumar : ಕುಮಾರಸ್ವಾಮಿ ಚಡ್ಡಿ ಒಳಗಡೆ ಏನಿದೆ ಎಂದು ಜಮೀರ್ ಗೆ ಗೊತ್ತು...

D K Shivkumar : ಕುಮಾರಸ್ವಾಮಿ ಚಡ್ಡಿ ಒಳಗಡೆ ಏನಿದೆ ಎಂದು ಜಮೀರ್ ಗೆ ಗೊತ್ತು – ಡಿಕೆ ಶಿವಕುಮಾರ್ ಅಚ್ಚರಿ ಹೇಳಿಕೆ !!

Hindu neighbor gifts plot of land

Hindu neighbour gifts land to Muslim journalist

D K Shivkumar : ರಾಜ್ಯದಲ್ಲಿ ಬೈ ಎಲೆಕ್ಷನ್‌ ಭರಾಟೆ ಜೋರಾಗಿದೆ. ಕರ್ನಾಟಕದ ಮೂರು ಕ್ಷೇತ್ರದ ಉಪಚುನಾವಣೆಯಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಹೈವೋಲ್ಟೇಜ್ ಕ್ಷೇತ್ರವಾಗಿದ್ದು, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಉಪಚುನಾವಣೆ ಪ್ರಚಾರ ರಂಗೇರಿದೆ. ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುವಾಗ ಕುಮಾರಸ್ವಾಮಿಯವರಿಗೆ (HD Kumarswamy) ಕರಿಯ ಎನ್ನುವ ಮೂಲಕ ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmad Khan) ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಕುಮಾರಸ್ವಾಮಿ ಬಣ್ಣದ ಕುರಿತು ಜಮೀರ್ ನೀಡಿದ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್(D K Shivkumar )ಅವರು, ಕುಮಾರಸ್ವಾಮಿ ಹಾಗೂ ಜಮೀರ್ ಅವರದ್ದು ಗಳಸ್ಯ ಕಂಠಸ್ಯ ಸಂಬಂಧ ಅವರ ಚಡ್ಡಿ ಒಳಗಡೆ ಏನಿದೆ ಅಂತ ಇವರು ಹೇಳ್ತಾರೆ. ಇವರ ಬಗ್ಗೆ ಅವರು ಹೇಳ್ತಾರೆ ಅವರವರ ವಿಚಾರ ಅದು. ಕುಮಾರಸ್ವಾಮಿ ಈ ವಿಚಾರ ಮಾತಾಡಿದ್ದಾರೆ ಎಂದರು.

ಕರಿಯಾ ಅಂತ ಹೇಳಿದ್ದ ಅಂತ ಹೇಳೋಕೆ‌ ಹೇಳಿ, ಕಂಪ್ಲೆಂಟ್ ಕೋಡೋಕೆ ಹೇಳಿ, ಡಿಫೆಂಡ್ ಮಾಡ್ತಾ ಇಲ್ಲಾ, ಅದು ಅವರವರ ವಿಚಾರ, ನಾನು ಇಂಟರ್‌ಫೀಯರ್ ಆಗಲ್ಲ ಎಂದರು. ಬಿಜೆಪಿಯವರು ಟ್ವೀಟ್ ಎಲ್ಲಾ ಮಾಡಿದ್ದಾರೆ, ಸ್ವಂತ ವಿಚಾರ ಅವರಿಗೆ ಬಿಟ್ಟಿ ವಿಚಾರ, ಅದು ಪರ್ಸನಲ್ ಇರುತ್ತದೆ, ನಾನು ಕೂಡ ನಮ್ಮ ಹುಡುಗರಿಗೆ ಹೇಳುತ್ತೇನೆ. ಸಾಬ್ ಗೌಡ ಅಂತ ನಾನೇ ಹೇಳುತ್ತೇನೆ. ಪ್ರೀತಿಯಿಂದ ಹೇಳಿರಬಹುದು ಕುಮಾರಸ್ವಾಮಿ ಮೇಲೆ‌ ಜಮೀರ್ ಗೆ ಪ್ರೀತಿ ಇರಬಹುದು ಎಂದರು. ಕುಮಾರಸ್ವಾಮಿ ಅವರು, ಕುಳ್ಳ ಅಂತ ಕರೆಯುತ್ತಾರೆ ಅಂತ ಜಮೀರ್ ಹೇಳ್ತಾರೆ ಎಂದರು.

ಕ್ಷಮೆ ಕೇಳಿದ ಜಮೀರ್:
ನನ್ನ ಹೇಳಿಕೆಯಿಂದ ಯಾರಿಗಾದರೂ ಬೇಸರವಾಗಿದ್ದರೆ ಕ್ಷಮೆಯಾಚಿಸುತ್ತೇನೆ. ನಾನು ಹೇಳಿರುವ ಉದ್ದೇಶವೇ ಬೇರೆ” ಎನ್ನುವ ಮೂಲಕ ವಸತಿ ಸಚಿವ ಬಿ.ಝೆಡ್.ಜಮೀರ್ ಅಹ್ಮದ್ ಖಾನ್ ತಮ್ಮ ವಿರುದ್ಧ ಎದ್ದಿರುವ ವಿವಾದವನ್ನು ತಣ್ಣಗಾಗಿಸಲು ಪ್ರಯತ್ನಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿ, ”ನನ್ನ ಹೇಳಿಕೆಯಿಂದ ಯಾರಿಗಾದರೂ ಬೇಸರವಾಗಿದ್ದರೆ ಕ್ಷಮೆಯಾಚಿಸುತ್ತೇನೆ. ನಾನು ಹೇಳಿರುವ ಉದ್ದೇಶವೇ ಬೇರೆ. ಈ ಹಿಂದೆ ನಾನು ಅವರ(ಎಚ್.ಡಿ.ಕುಮಾರಸ್ವಾಮಿ) ಜೊತೆಯಲ್ಲಿದ್ದಾಗ, ಅವರು ನನ್ನನ್ನು ಕುಳ್ಳ ಎನ್ನುತ್ತಿದ್ದರು. ನಾನು ಅವರನ್ನು ಕರಿಯಣ್ಣ ಎಂದು ಕರೆಯುತ್ತಿದ್ದೆ. ಪ್ರೀತಿಯಿಂದ ಅವರು ಕುಳ್ಳ ಎಂದಾಗ ನಾನು ಪ್ರೀತಿಯಿಂದಲೇ ಕರಿಯಣ್ಣ ಎನ್ನುತ್ತಿದ್ದೆ. ಅದನ್ನಷ್ಟೇ ಹೇಳಿದ್ದೇನೆ. ಅವರ ಮೇಲೆ ಗೌರವವಿದೆ. ನನ್ನ ಹೇಳಿಕೆಯಿಂದ ಯಾರಿಗಾದರೂ ಬೇಸರವಾಗಿದ್ದರೆ ಕ್ಷಮೆ ಕೇಳಲು ನಾನು ಸಿದ್ಧ” ಎಂದು ಹೇಳಿದ್ದಾರೆ.