Home Karnataka State Politics Updates PM Kisan FPO: ರೈತರೇ, ಈ ಯೋಜನೆ ಮೂಲಕ ಪಡೆಯಿರಿ 15 ಲಕ್ಷ ರೂ!! ಅರ್ಜಿ...

PM Kisan FPO: ರೈತರೇ, ಈ ಯೋಜನೆ ಮೂಲಕ ಪಡೆಯಿರಿ 15 ಲಕ್ಷ ರೂ!! ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

PM Kisan FPO

Hindu neighbor gifts plot of land

Hindu neighbour gifts land to Muslim journalist

PM Kisan FPO: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM kisan yojana) ಯೋಜನೆಯಡಿ 14ನೇ ಕಂತಿನ ಹಣವನ್ನು (PM kisan 13th installment) ಬಿಡುಗಡೆ ಮಾಡಲು ಕೇಂದ್ರ ಸರ್ಕಾರವು ಸಿದ್ಧತೆ ನಡೆಸಿದೆ. ಫೆ.26 ರಂದು 13ನೇ ಕಂತಿನ ಹಣ ಬಿಡುಗಡೆಯಾಗಿದ್ದು, ಏಪ್ರಿಲ್-ಜುಲೈ ವೇಳೆಗೆ 14ನೇ ಕಂತಿನ ಹಣ (PM kisan 14th installment) ಜಮಾ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಕಿಸಾನ್ ಯೋಜನೆಯಡಿ ರೈತರಿಗೆ (former) ಪ್ರತಿ ವರ್ಷ ಮೂರು ಕಂತುಗಳಲ್ಲಿ 6,000 ರೂ. ಹಣವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ (bank account) ಜಮಾ ಮಾಡಲಾಗುತ್ತಿದೆ. ಆದರೆ, ಇನ್ನೊಂದು ಯೋಜನೆಯಿಂದಲೂ ರೈತರು ಲಾಭ ಪಡೆಯಬಹುದು. ಹೌದು, ಪ್ರಧಾನ ಮಂತ್ರಿ ಕಿಸಾನ್ ಎಫ್‌ಪಿಒ (PM Kisan FPO) ಯೋಜನೆಯ ಮೂಲಕ ರೈತರು 15 ಲಕ್ಷ ರೂ. ಪಡೆಯಬಹುದು. ಕೇಂದ್ರ ಸರಕಾರವು ಹೊಸ ಕೃಷಿ ಉದ್ಯಮ ಪ್ರಾರಂಭಿಸಲು ರೈತರಿಗೆ 15 ಲಕ್ಷ ರೂ. ನೀಡುತ್ತದೆ.

ಈ ಯೋಜನೆಯ ಲಾಭ ಪಡೆಯಲು, 11 ರೈತರು ಸೇರಿ ಸಂಘಟನೆ ಕಟ್ಟಿಕೊಳ್ಳಬೇಕು. ಕೃಷಿ ಉಪಕರಣಗಳು, ರಸಗೊಬ್ಬರಗಳು, ಬೀಜಗಳು, ಔಷಧಿಗಳ ಖರೀದಿಗೆ ಸಂಬಂಧಿಸಿದ ವ್ಯವಹಾರವನ್ನು ಪ್ರಾರಂಭಿಸಬಹುದು.

ವೆಬ್‌ಸೈಟ್‌ಗೆ ಲಾಗಿನ್ ಆಗುವುದು ಹೇಗೆ?
• ರಾಷ್ಟ್ರೀಯ ಕೃಷಿ ಮಾರುಕಟ್ಟೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
• FPO ಆಯ್ಕೆಯನ್ನು ಕ್ಲಿಕ್ ಮಾಡಿ
• ಲಾಗಿನ್ ಆಯ್ಕೆಯನ್ನು ಕ್ಲಿಕ್ ಮಾಡಿ
• ಲಾಗಿನ್ ಫಾರ್ಮ್ ತೆರೆಯುತ್ತದೆ. ಅದರಲ್ಲಿ ಬಳಕೆದಾರರ ಹೆಸರು, ಪಾಸ್‌ವರ್ಡ್ ಕ್ಯಾಪ್ಪಾ ಕೋಡ್ ನಮೂದಿಸಿ.
• ನಂತರ ನೀವು ಲಾಗಿನ್ ಆಗುತ್ತೀರಿ.

ಅರ್ಜಿ ಸಲ್ಲಿಸುವುದು ಹೇಗೆ?
• ರಾಷ್ಟ್ರೀಯ ಕೃಷಿ ಮಾರುಕಟ್ಟೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
• FPO ಆಯ್ಕೆಯ ಮೇಲೆ ಕ್ಲಿಕ್ ಮಾಡಿ
• ‘ನೋಂದಣಿ’ ಆಯ್ಕೆಯನ್ನು ಫಾರ್ಮ್ ಕಾಣಿಸುತ್ತದೆ. ಫಾರ್ಮ್‌ನಲ್ಲಿ ಕೇಳಲಾದ ಮಾಹಿತಿಯನ್ನು ಭರ್ತಿಮಾಡಿ.
• ಪಾಸ್‌ಬುಕ್ ಅಥವಾ ರದ್ದುಪಡಿಸಿದ ಚೆಕ್ ಅಥವಾ ಐಡಿಯನ್ನು ಸ್ಕ್ಯಾನ್ ಮಾಡಿ ಮತ್ತು ಅಪ್‌ಲೋಡ್ ಮಾಡಿ
• ಸಬ್ ಮಿಟ್ ಮಾಡಿ.

 

ಇದನ್ನು ಓದಿ : Account in SBI Bank : ನಿಮ್ದು SBI ಬ್ಯಾಂಕ್‌ನಲ್ಲಿ ಅಕೌಂಟ್​ ಇದ್ಯಾ? ಹಾಗಾದ್ರೆ ಈ ನ್ಯೂಸ್​ ನಿಮಗಾಗಿ!