Home Karnataka State Politics Updates Tejaswi Surya FIR: ರೈತನ ಸಾವು ವಕ್ಫ್‌ ಘಟನೆಗೆ ಲಿಂಕ್‌; ತೇಜಸ್ವಿ ಸೂರ್ಯ ವಿರುದ್ಧ ಎಫ್‌ಐಆರ್‌...

Tejaswi Surya FIR: ರೈತನ ಸಾವು ವಕ್ಫ್‌ ಘಟನೆಗೆ ಲಿಂಕ್‌; ತೇಜಸ್ವಿ ಸೂರ್ಯ ವಿರುದ್ಧ ಎಫ್‌ಐಆರ್‌ ದಾಖಲು

Hindu neighbor gifts plot of land

Hindu neighbour gifts land to Muslim journalist

Tejaswi Surya FIR: ಸುಳ್ಳು ಮಾಹಿತಿ ಹರಡಿದ ಆರೋಪದ ಮೇರೆಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಎಫ್‌ಐಆರ್‌ ದಾಖಲು ಮಾಡಲಾಗಿದೆ.

ಹಾವೇರಿಯ ಹನಗೇರಿ ಗ್ರಾಮದ ರೈತ ರುದ್ರಪ್ಪ ಆತ್ಮಹತ್ಯೆಗೆ ವಕ್ಫ್‌ ನೋಟಿಸ್‌ ಕಾರಣ ಎಂದು ಸುಳ್ಳು ಮಾಹಿತಿ ಹರಡಿದ ಆರೋಪದಲ್ಲಿ ಹಾವೇರಿಯ ಸಿಇಎನ್‌ ಠಾಣೆಯಲ್ಲಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಹಾವೇರಿಯಲ್ಲಿ ರೈತನ ಆತ್ಮಹತ್ಯೆಗೆ ವಕ್ಫ್‌ ನೋಟಿಸ್‌ ಕಾರಣವಾಗಿದ್ದು, ವಕ್ಫ್‌ ನೋಟಿಸ್‌ಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತೇಜಸ್ವಿ ಸೂರ್ಯ ಟ್ವೀಟ್‌ ಮಾಡಿದ್ದರು. ಆದರೆ ಜಿಲ್ಲಾಡಳಿತ ಮತ್ತು ಪೊಲೀಸರು ರೈತ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿರುವುದಾಗಿ ಸ್ಪಷ್ಪಡಿಸಿದ್ದರು.

ಹಾಗಾಗಿ ಸುಳ್ಳು ಆರೋಪ ಹಬ್ಬಿಸಿದ ಕಾರಣಕ್ಕೆ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.