Home Karnataka State Politics Updates HDK Road Show : JDS ಅಧಿಕಾರಕ್ಕೆ ಬಂದ್ರೆ 2 B ಮೀಸಲಾತಿ ಮರು ಜಾರಿ,...

HDK Road Show : JDS ಅಧಿಕಾರಕ್ಕೆ ಬಂದ್ರೆ 2 B ಮೀಸಲಾತಿ ಮರು ಜಾರಿ, ಮುಸ್ಲಿಂ ಮತ ಕಸಿಯಲು ತಂತ್ರ ?!

HDK Road Show

Hindu neighbor gifts plot of land

Hindu neighbour gifts land to Muslim journalist

HDK Road Show : ಇಂದು ಹಾಸನದಲ್ಲಿ ಜೆಡಿಎಸ್ ಅಭ್ಯರ್ಥಿ ಹೆಚ್ ಪಿ ಸ್ವರೂಪ್ ಪರ ಮತ್ತು ಜೆಡಿಎಸ್ ಗೆಲುವಿಗಾಗಿ ಮತಯಾಚನೆ ಪ್ರಯುಕ್ತ ನಡೆದ ಬೃಹತ್ ರೋಡ್ ಶೋ ನಲ್ಲಿ ಪ್ರಮುಖರಾದ ಹೆಚ್.ಡಿ ದೇವೇಗೌಡ ಭರ್ಜರಿ ಶಕ್ತಿ ಪ್ರದರ್ಶನ ನಡೆಸಿದ್ದು, ತೆರೆದ ವಾಹನದಲ್ಲಿ ರೋಡ್ ಶೋ( HDK Road Show) ನಡೆಸಿದ ಮಾಜಿ ಪ್ರಧಾನಿ ದೇವೇಗೌಡ ಕಾರ್ಯಕರ್ತರಿಗೆ ಮಾತಿನ ಬಾಣದಲ್ಲೇ ಬಲ ನೀಡಿದ್ದಾರೆ.

ಅದಲ್ಲದೆ ಚುನಾವಣಾ ಪ್ರಚಾರ ಕುರಿತು ಮಾತನಾಡಿದ ದೇವೇಗೌಡ, ರಾಜ್ಯದಲ್ಲಿ ‘ಜೆಡಿಎಸ್ ಅಧಿಕಾರಕ್ಕೆ ಬಂದ್ರೆ ನಮ್ಮ ಕುಮಾರಸ್ವಾಮಿ 2 ಬಿ ಮೀಸಲಾತಿ ಮರುಜಾರಿಗೊಳಿಸುತ್ತಾರೆ ಎಂದು ಭರವಸೆ ನೀಡಿದರು.

ಅದಲ್ಲದೆ ಈಗಾಗಲೇ ಮೂರು ಪಟ್ಟಿಯನ್ನು ರಾಜ್ಯ ವಿಧಾನಸಭಾ ಚುನಾವಣೆಗಾಗಿ ಬಿಡುಗಡೆ ಮಾಡಿರುವ ಜೆಡಿಎಸ್ ಪಕ್ಷವು, ಇಂದು ನಾಲ್ಕನೆ ಪಟ್ಟಿಯಲ್ಲಿ 13 ಕ್ಷೇತ್ರಗಳಿಗೆ ಹೆಸರು ಘೋಷಿಸಿದ್ದು, ಈ ಬಗ್ಗೆ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ನಾಲ್ಕನೆ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದ್ದಾರೆ. ಇಂದಿನ ಪಟ್ಟಿಯಲ್ಲಿ 13 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದಾರೆ.

ಶಿಗ್ಗಾಂವಿ – ಶಶಿಧರ್ ಚನ್ನಬಸಪ್ಪ ಯಲಿಗಾರ, ಮೊಳಕಾಲ್ಕೂರು – ಮಹಾದೇವಪ್ಪ, ಪುಲಕೇಶಿನಗರ – ಅನುರಾಧ, ಶಿವಾಜಿನಗರ- ಮಂಜುನಾಥ್ ಗೌಡ, ಗೋಕಾಕ್ – ಚನ್ನಬಸಪ್ಪ ಬಾಳಪ್ಪ ಗಿದ್ದಣ್ಣ, ಕಿತ್ತೂರು – ಅಶ್ವಿನಿ ಸಿಂಗಯ್ಯ ಪೂಜೇರಾ, ಯಾದಗಿರಿ – ಎಬಿ ಮಾಲಕರೆಡ್ಡಿ, ಭಾಲ್ಕಿ – ರೌಫ್ ಪಡೇಲ್, ಬೆಳ್ತಂಗಡಿ – ಅಶ್ರಫ್ ಆಲಿ ಕುಂಞ, ಮಂಗಳೂರು ನಗರ ಉತ್ತರ – ಮೋಹಿನುದ್ದೀನ್ ಬಾವ ಹಾಗೂ ಬಂಟ್ವಾಳ್ – ಪ್ರಕಾಶ್ ರಫಾಯಿಲ್ ಗೋಮ್ಸ್ ಗೆ ಟಿಕೆಟ್ ನೀಡಲಾಗಿದೆ ಎಂದು ಮಾಹಿತಿ ಹೊರ ಬಿದ್ದಿದೆ.

 

ಇದನ್ನು ಓದಿ: Marriage viral Video: ‘ನೋಡ್ಲಿಕೆ ಮಾತ್ರ, ಮುಟ್ಲಿಕೆ ಇಲ್ಲ ‘ : ವರನ ಕೈ ತುಟಿ ಸವರಿತು ಎಂದು ವರನಿಗೆ ಮಂಟಪದಲ್ಲಿ ಹೊಡೆದ ವಧು !