

ಗುಜರಾತಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಅಶ್ವಮೇಧದ ಕುದುರೆ ಲಂಗು ಲಗಾಮು ಬಿಚ್ಚಿಕೊಂಡು ನಾಗಾಲೋಟ ಗೈಯುತ್ತಿದೆ. ಹಳೆಯ ಎಲ್ಲಾ ದಾಖಲೆಗಳನ್ನು ಮತ್ತು ಇದುವರೆಗೆ ಬಂದ ಎಲ್ಲಾ ಎಕ್ಸಿಟ್ ಪೋಲ್ ಗಳ ನಿರೀಕ್ಷೆಯನ್ನು ಕೂಡಾ ಮೀರಿ 150 ಕ್ಕು ಅಧಿಕ ಸ್ಥಾನಗಳಲ್ಲಿ ಬಿಜೆಪಿ ಮುಂದಿದೆ.
ಗುಜರಾತಿನಲ್ಲಿ ಈವರೆಗೆ 150 ರ ಗಡಿಯನ್ನು ಯಾವುದೇ ಪಕ್ಷ ಕೂಡಾ ಸಾಧಿಸಿರಲಿಲ್ಲ. ಆದರೆ ಈ ಬಾರಿ 160 ರ ಆಸುಪಾಸಿನಲ್ಲಿ ಬಿಜೆಪಿ ಬಿರುಗಾಳಿ ಎಬ್ಬಿಸಿಕೊಂಡು ಓಡುತ್ತಿದೆ. ಬಿಜೆಪಿಯ ಗುಜರಾತ್ ವಿಜಯದ ಕಡೆಗಿನ ಮುನ್ನಡೆಯನ್ನು ಸಿಹಿ ಹಂಚಿಕೊಂಡು ಗುಜರಾತಿನಲ್ಲಿ ಆಚರಣೆ ಮಾಡಲಾಗುತ್ತಿದೆ. ಗುಜರಾತಿನ ರಸ್ತೆ ರಸ್ತೆಗಳಲ್ಲಿ ಕೇಸರಿ ಬಾವುಟ ಪಟಪಟಿಸುತ್ತಿದೆ. ಕೇಸರಿ ಶಾಲು ಮತ್ತು ಬಿಜೆಪಿ ಬಾವುಟ ಧರಿಸಿದ ಮಹಿಳೆಯರು ರಸ್ತೆ ಯುದ್ಧಕ್ಕೂ ಸಂಭ್ರಮದ ನೃತ್ಯ ಆಚರಣೆ ನಡೆಸುತ್ತಿದ್ದಾರೆ.

ಗುಜರಾತಿನಲ್ಲಿ ಈ ಮಟ್ಟಿಗಿನ ಬಿಜೆಪಿಯ ಮುನ್ನಡೆಗೆ ಬಿಜೆಪಿಯ ಗುಜರಾತ್ ಮಾಡೆಲ್ ಅನ್ನು ಗುಜರಾತಿನ ಜನ ಒಪ್ಪಿಕೊಂದದ್ದನ್ನು ಸ್ಪಷ್ಟವಾಗಿ ತೋರಿಸುತ್ತದೆ. ದೇಶದಲ್ಲಿ ಬಿಜೆಪಿ ಮತ್ತು ಮೋದಿಯವರು ಒಳ್ಳೆಯ ಕೆಲಸ ನಡೆಸುತ್ತಿದ್ದಾರೆ. ಅವರನ್ನು ಎಲ್ಲಾ ಸೇರಿ ಬೆಂಬಲಿಸಬೇಕು. ಗುಜರಾತಿನ ನಾವು ಮೊದಲು ಬೆಂಬಲಿಸದೆ ಹೋದರೆ, ಇನ್ನಾರು ಬೆಂಬಲಿಸೋದು ಅನ್ನುವ ಮನಸ್ಥಿತಿಯಲ್ಲಿ ಗುಜರಾತಿನ ಜನ ಇದ್ದಾರೆ.

ಅಷ್ಟೇ ಅಲ್ಲದೆ, ದೇಶಕ್ಕೆ ಮೋದಿಯವರಿಗೆ ಪ್ರತಿಸ್ಪರ್ಧಿ ಆಗಬಲ್ಲ ಆಲ್ಟರ್ನೇಟ್ ಅನ್ನುವ ನಾಯಕತ್ವ ಕಾಣಿಸದ ಕಾರಣ ಮೋದಿಯವರ ಏಕಚಕ್ರಾಧಿಪತ್ಯ ಮುಂದುವರೆಯುತ್ತಿದೆ. ಒಟ್ಟು 182 ವಿಧಾನಸಭಾ ಕ್ಷೇತ್ರಗಳ ಪೈಕಿ ಇದೀಗ 160 ಕ್ಷೇತ್ರಗಳಲ್ಲಿ ಬಿಜೆಪಿ ದಿಗ್ವಿಜಯ ಸಾಧಿಸುವ ಎಲ್ಲ ಸ್ಪಷ್ಟ ಸೂಚನೆಗಳನ್ನು ನೀಡುತ್ತಿದ್ದು ಬಹುಮತಕ್ಕೆ ಕೇವಲ 90 ಸ್ಥಾನಗಳ ಅಗತ್ಯವಿದೆ. ಈ ಮಹತ್ತರ ಖುಷಿಯ ನಡುವೆಯೂ ಬಿಜೆಪಿಗೆ ಒಂದು ನೋವಿನ ಸಂಗತಿ ಎದುರಾಗಿದೆ. ಅದು ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಬಹುಮತದತ್ತ ದಾಪುಗಾಲು ಹಾಕುತ್ತಿರುವ ವಿಷಯ. 40 ರ ಅಗತ್ಯ ಗಡಿಯಲ್ಲಿ ಕಾಂಗ್ರೆಸ್ ನಿಂತು ಬೀಗುತ್ತಿದೆ. ಅಂತಿಮ ಮತ ಎಣಿಕೆ ನಂತರ ಸಣ್ಣ ಮಟ್ಟಿನ ಬದಲಾವಣೆ ಆಗುವುದು ಸಹಜ.
ಹಾಲಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಅಭ್ಯರ್ಥಿ ಜೈರಾಂ ಠಾಕೂರ್ ಸೆರಜ್ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಚೇತ್ ರಾಮ್ ವಿರುದ್ಧ ಗೆಲುವು ಸಾಧಿಸಿದ್ದಾರೆ. 20245 ಮತಗಳ ಅಂತರದಲ್ಲಿ ಸೆರಾಜ್ ಕ್ಷೇತ್ರದಲ್ಲಿ ಜಯಗಳಿಸಿದ್ದಾರೆ.













