Home Karnataka State Politics Updates DK Shivakumar: ಡಿ. ಕೆ ಶಿವಕುಮಾರ್ ಗೆ ತಪ್ಪಿದ ಕಂಟಕ! ಕನಕಪುರದಲ್ಲಿ ಆಸ್ಥಾನ ಪಕ್ಕಾ!

DK Shivakumar: ಡಿ. ಕೆ ಶಿವಕುಮಾರ್ ಗೆ ತಪ್ಪಿದ ಕಂಟಕ! ಕನಕಪುರದಲ್ಲಿ ಆಸ್ಥಾನ ಪಕ್ಕಾ!

DK Shivakumar
Image Source: News 18 Kannada

Hindu neighbor gifts plot of land

Hindu neighbour gifts land to Muslim journalist

DK shivakumar : ಕನಕಪುರದಲ್ಲಿ ಟಿಕೆಟ್ ಪಡೆಯಲು ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಬಗೆಗಿನ ಗೊಂದಲ ತಿಳಿಗೊಂಡಿದೆ. ಡಿ.ಕೆ ಶಿವಕುಮಾರ್ (DK shivakumar) ಕನಕಪುರದಲ್ಲಿ ಕೈ ಅಭ್ಯರ್ಥಿಯಾಗಿ ತಮ್ಮನ್ನು ಚುನಾವಣಾ ಕಣದಿಂದ ತೆಗೆದು ಹಾಕಬಹುದು ಎನ್ನುವ ಇದ್ದರು. ಹೌದು, ಏಪ್ರಿಲ್ 17 ರಂದು ನಾಮಪತ್ರವನ್ನು ಸಲ್ಲಿಸಿದ್ದು, ಬಳಿಕ ಅವರ ನಾಮಪತ್ರವನ್ನು ಅಮಾನ್ಯ ಮಾಡಲಾಗುವುದು ಎನ್ನುವ ಭಯವಿತ್ತು.

ಯಾಕೆಂದರೆ ಬಿಜೆಪಿ ಪರ ವಕೀಲರು ಡಿ.ಕೆ ಶಿವಕುಮಾರ್ ಅವರ ನಾಮಪತ್ರದಲ್ಲಿ ಕೆಲವು ಮಾಹಿತಿಗಳು ಸರಿ ಇಲ್ಲ ಎಂದು ಚುನಾವಣಾ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು, ಆದರೆ ಈ ಆರೋಪದ ಹಿನ್ನೆಲೆ ದಾಖಲೆಗಳು ಸಲ್ಲಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದರು.

ಅದೃಷ್ಟವಶಾತ್ ಡಿ.ಕೆ ಶಿವಕುಮಾರ್ ವಿರುದ್ಧ ಯಾವುದೇ ದಾಖಲೆಗಳು ಬಿಜೆಪಿ ಪಕ್ಷದವರಲ್ಲಿ ಇಲ್ಲದೇ ಇದ್ದರಿಂದ ಅವರ ನಾಮಪತ್ರವನ್ನು ಪುರಸ್ಕಾರ ಮಾಡಲಾಗಿದೆ ಎನ್ನಲಾಗಿದೆ.

ಅದಲ್ಲದೆ ಬಿಜೆಪಿ ಡಿ.ಕೆ ಶಿವಕುಮಾರ್ ವಿರುದ್ಧ ಮಾಡಿದ ಆರೋಪ ಹಿನ್ನೆಲೆ ಡಿ. ಕೆ ಸುರೇಶ್ ಅವರು ಕೂಡ ಕಾಂಗ್ರೆಸ್ ಪರ ನಾಮಪತ್ರವನ್ನು ಸಲ್ಲಿಸಿದ್ದರು. ಸದ್ಯ ಡಿ.ಕೆ ಶಿವಕುಮಾರ್ ವಿರುದ್ಧ ಇದ್ದ ಆರೋಪ ಬಗೆಹರಿದ ಕಾರಣ ನಾಳೆ ಡಿಕೆ ಸುರೇಶ್ ಅವರು ನಾಮಪತ್ರವನ್ನು ವಾಪಸ್ಸು ತೆಗೆದುಕೊಳ್ಳಲಾಗುವುದು ಎನ್ನಲಾಗಿದೆ. ಒಟ್ಟಿನಲ್ಲಿ ಕನಕಪುರದಲ್ಲಿ ಡಿ.ಕೆ ಶಿವಕುಮಾರ್ ಅವರ ಆಸ್ಥಾನ ಗಟ್ಟಿಯಾಗಿದೆ.

 

ಇದನ್ನು ಓದಿ: BECILನಿಂದ ಸ್ಟಾಫ್‌ ನರ್ಸ್‌ ಹುದ್ದೆಗೆ ಅರ್ಜಿ ಆಹ್ವಾನ!! ವೇತನ ರೂ.30,000 ; ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ