Home Karnataka State Politics Updates Congress: ಜೆಡಿಎಸ್, ಬಿಜೆಪಿಯ ಹೊಸ ಆಪರೇಷನ್: ಸಿದ್ದರಾಮಯ್ಯ ಸ್ವಪಕ್ಷದ ಶಾಸಕರಿಗೆ ನೀಡಿದ್ರು ರೆಡ್ ಅಲರ್ಟ್

Congress: ಜೆಡಿಎಸ್, ಬಿಜೆಪಿಯ ಹೊಸ ಆಪರೇಷನ್: ಸಿದ್ದರಾಮಯ್ಯ ಸ್ವಪಕ್ಷದ ಶಾಸಕರಿಗೆ ನೀಡಿದ್ರು ರೆಡ್ ಅಲರ್ಟ್

Congress
image source: The economics times

Hindu neighbor gifts plot of land

Hindu neighbour gifts land to Muslim journalist

Congress : ಕಾಂಗ್ರೆಸ್ (Congress) ಅಧಿಕಾರಕ್ಕೆ ಬಂದು ಒಂದು ತಿಂಗಳಲ್ಲಿ ವರ್ಗಾವಣೆ ದಂಧೆ ಮಾಡುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿ ಕಾರುತ್ತಿರುವ ಜೆಡಿಎಸ್‌ನ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ (HD Kumaraswamy) ಅವರು ಬುಧವಾರ ವಿಧಾನಸೌಧಕ್ಕೆ ಪೆನ್‌ಡ್ರೈವ್‌ನೊಂದಿಗೆ ಆಗಮಿಸಿದ್ದು, ವರ್ಗಾವಣೆಯಲ್ಲಿ ಭ್ರಷ್ಟಾಚಾರ ನಡೆದಿರುವುದು ಸಾಬೀತಾಗಿದೆ ಮತ್ತು ನನ್ನಲ್ಲಿ ಪೆನ್ ಡ್ರೈವ್‌ನಲ್ಲಿ ಆಡಿಯೋ ಸಾಕ್ಷ್ಯವಿದೆ ಎಂದು ಹೇಳಿಕೊಂಡಿದ್ದಾರೆ. ಇದೀಗ ಕುಮಾರಸ್ವಾಮಿ ಜೊತೆಗೆ ಬಿಜೆಪಿ ಸಹ ಪರವಾಗಿದೆ.

ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಆರೋಪ ಹಿನ್ನೆಲೆ ಹೆದರಿಕೊಂಡು ಎಚ್ಚೆತ್ತ ಸಿಎಂ, ಎಚ್ಚರಿಕೆಯಿಂದ ಕೆಲಸ ಮಾಡುವಂತೆ ಸ್ವಪಕ್ಷದ ಶಾಸಕರುಗಳಿಗೆ ಮತ್ತು ಸಚಿವರಿಗೆ ಸಲಹೆನೀಡಿದ್ದಾರೆ .

ಬಿಜೆಪಿ ಮತ್ತು ಜೆಡಿಎಸ್ ಬಗ್ಗೆ ನಮ್ಮ ಶಾಸಕರು ಹೆಚ್ಚು ಗಮನಹರಿಸಬೇಕು. ನಮ್ಮ ಮೇಲೆ ಸ್ಟಿಂಗ್ ಆಪರೇಷನ್ ಮಾಡುವ ಸಾಧ್ಯತೆ. ಬಿಜೆಪಿ, ಜೆಡಿಎಸ್​ನವರು ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಎಲ್ಲರು ಎಚ್ಚರಿಕೆಯಿಂದ ಇರಬೇಕೆಂದು ಸೂಚಿಸಿದರು. ಇಲ್ಲವೆಂದಲ್ಲಿ ಕುರ್ಚಿ ಬಿಟ್ಟುಕೊಡಬೇಕಾದೀತು ಎಂದಿದ್ದಾರೆ.

ವಿಪಕ್ಷಗಳ ಟ್ರ್ಯಾಪ್​​ಗೆ ಬೀಳಬೇಡಿ. ಗ್ಯಾರಂಟಿಗಳ ಅನುಷ್ಠಾನಕ್ಕೆ ಹೆಚ್ಚು ಒತ್ತು ನೀಡಬೇಕು. ನಿಮ್ಮ ಕ್ಷೇತ್ರದಲ್ಲಿ ಜನರಿಗೆ ಗ್ಯಾರಂಟಿಗಳನ್ನು ತಲುಪಿಸಬೇಕು ಎಂದು ತಮ್ಮ ಶಾಸಕರಿಗೆ ಸೂಚಿಸಿದ್ದಾರೆ.

ಮುಖ್ಯವಾಗಿ, ಹೆಚ್ಚು ವಿಶೇಷ ಅನುಧಾನ ಶಾಸಕರಿಗೆ ಕೊಡಲು ಸಾಧ್ಯವಿಲ್ಲ. ಗ್ಯಾರಂಟಿಗಳ ಜಾರಿ ಇರುವ ಕಾರಣ ಹೆಚ್ಚು ಅನುದಾನ ನೀಡಲು ಆಗುತ್ತಿಲ್ಲ. ಶಾಸಕರು ಎಂಟು ತಿಂಗಳು ಅನುಧಾನ ವಿಚಾರವಾಗಿ ಸಹಕಾರ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿಕೊಂಡಿದ್ದಾರೆ.

 

ಇದನ್ನು ಓದಿ: Nithyananda: ನಿತ್ಯಾನಂದನ ಕೈಲಾಸದಲ್ಲಿ ಪ್ರಿಯ ಶಿಷ್ಯೆ ರಂಜಿತಾಳೇ ಪ್ರಧಾನ ಮಂತ್ರಿ, ಉಳಿದ ಖಾತೆ ಹಂಚಿಕೆ ಬಾಕಿ !!