Home Karnataka State Politics Updates Congress Manifesto 2023: ಕಾಂಗ್ರೆಸ್ ಚುನಾವಣೆ ಪ್ರಣಾಳಿಕೆ ಬಿಡುಗಡೆ! 10 ಕೆಜಿ ಅಕ್ಕಿ, 200 ಯೂನಿಟ್...

Congress Manifesto 2023: ಕಾಂಗ್ರೆಸ್ ಚುನಾವಣೆ ಪ್ರಣಾಳಿಕೆ ಬಿಡುಗಡೆ! 10 ಕೆಜಿ ಅಕ್ಕಿ, 200 ಯೂನಿಟ್ ಉಚಿತ್ ವಿದ್ಯುತ್!!!

Congress Manifesto 2023
Image source : Twitter ANI

Hindu neighbor gifts plot of land

Hindu neighbour gifts land to Muslim journalist

Congress Manifesto 2023: ಈಗಾಗಲೇ ಕರ್ನಾಟಕದಲ್ಲಿ ಪ್ರಸ್ತುತ ಅಧಿಕಾರದಲ್ಲಿರುವ ಪಕ್ಷ ‘ಬಿಜೆಪಿ ಪ್ರಜಾ ಪ್ರಣಾಳಿಕೆ 2023′ ಹೆಸರಿನಲ್ಲಿ ಹಲವಾರು ಭರವಸೆಗಳನ್ನು ಜನರಿಗೆ ನೀಡಿದೆ. ಬಿಜೆಪಿ `ಪ್ರಜಾ ಪ್ರಣಾಳಿಕೆ’ ಬಿಡುಗಡೆ ಮಾಡಿದ ಬೆನ್ನಲ್ಲೇ ಇಂದು ಕಾಂಗ್ರೆಸ್ ಚುನಾವಣೆ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.

ಹೌದು, ಇಂದು ವಿಧಾನಸಭಾ ಚುನಾವಣೆ ರಾಷ್ಟ್ರೀಯ ಪಕ್ಷ ಕಾಂಗ್ರೆಸ್‌ ಸರದಿ ಆಗಿದ್ದು, ಕಾಂಗ್ರೆಸ್‌ ಹಲವು ಭರವಸೆಯನ್ನು ನಾಡಿನ ಜನರಿಗೆ ನೀಡಿದೆ.

ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇಂದು ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ (Congress Manifesto 2023 )ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಪ್ರಮುಖ ಗಣ್ಯರು ಪಾಲ್ಗೊಂಡಿದ್ದರು.

ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಬಿಡುಗಡೆ ಬಳಿಕ ಮಾತನಾಡಿದ ಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನ ಪ್ರಣಾಳಿಕೆ ಜನರಿಗೆ ಸಾಕಷ್ಟು ಪ್ರಯೋಜನ ಆಗಲಿದೆ . ನಾವು ಏನು ಹೇಳುತ್ತೇವೆ. ಅದನ್ನು ಮಾಡಿ ತೋರಿಸುತ್ತೇವೆ . ಈ ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಸಿದ್ದರಾಮಯ್ಯ ಆಗಿದ್ದಾಗ, 165 ಭರವಸೆಗಳಲ್ಲಿ 158 ಭರವಸೆಗಳನ್ನು ಪೂರೈಸಿದ್ದೇವೆ ಎಂದು ಹೇಳಿದ್ದಾರೆ.

ಇನ್ನು ಚುನಾವಣಾ ಪ್ರಣಾಳಿಕೆ ಬಿಡುಗಡೆ ವೇಳೆ ಮಾತನಾಡಿದ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಅವರು, ಎಲ್ಲ ಸಮುದಾಯದ ಎಲ್ಲ ವರ್ಗದವರ ಅಭಿವೃದ್ಧಿಗೆ ಪೂರಕವಾಗಿ ಪ್ರಾಣಾಳಿಕೆ ಸಿದ್ಧಪಡಿಸಲಾಗಿದೆ ಎಂದರು. ಅದಲ್ಲದೆ ನಮ್ಮ ಮುಖಂಡರ ಜೊತೆಗೆ ಚರ್ಚಿಸಿ ಪ್ರಾಣಾಳಿಕೆ ತಯಾರಿಸಿದ್ದೇವೆ. ಸರ್ವಜನಾಂಗದ ಶಾಂತಿ ಕಾಪಾಡಲು ಕಾಂಗ್ರೆಸ್ ಬದ್ಧತೆ ಈ ಘೋಷ ವಾಕ್ಯದೊಂದಿಗೆ ಪ್ರಣಾಳಿಕೆ ತಯಾರು ಮಾಡಿದ್ದೇವೆ ಎಂದರು.

ಮುಖ್ಯವಾಗಿ ಬಿಎಪಿಲ್ ಕಟುಂಬಕ್ಕೆ ಪ್ರತಿ ತಿಂಗಳು 10 ಕೆಜಿ ಅಕ್ಕಿ, ಗೃಹಜ್ಯೋತಿ ಯೋಜನೆಡಿ 200 ಯೂನಿಟ್ ವಿದ್ಯುತ್ ಉಚಿತ ವಿದ್ಯುತ್ ನೀಡಲಾಗುತ್ತದೆ. ಮಹಿಳೆಯರಿಗೆ ಸರ್ಕಾರಿ ಬಸ್‌ ನಲ್ಲಿ ಉಚಿತ ಪ್ರಯಾಣ, ಅನ್ನಭಾಗ್ಯ ಯೋಜನೆಯಡಿ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ, ಗೃಹಲಕ್ಷ್ಮೀ ಯೋಜನೆಡಿ ಮನೆ ಯಜಮಾನಿಗೆ 2 ಸಾವಿರ ರೂ.ನೀಡಲಾಗುತ್ತದೆ. ಮತ್ತು ಯುವನಿಧಿ, ನಿರುದ್ಯೋಗ ಭತ್ಯೆ, ಪದವೀಧರರಿಗೆ 3,000 ರೂ. ಡಿಪ್ಲೋಮಾ ಪಡೆದವರಿಗೆ 1,500 ರೂ. ನೀಡುವುದಾಗಿ ಭರವಸೆ ನೀಡಿದ್ದಾರೆ.

ಅದಲ್ಲದೆ ಇನ್ನಿತರ ಭಾರವಸೆಗಳಾದ, ಯುವನಿಧಿ ಯೋಜನೆಯಡಿ ನಿರುದ್ಯೋಗ ಯುವಕರಿಗೆ ನೆರವು, ನೇಕಾರರ ಮಗ್ಗ ಆಧುನಿಕರಣಕ್ಕಾಗಿ ವರ್ಷಕ್ಕೆ 30 ಸಾವಿರ ಅನುದಾನ, ಮಂಗಳಮುಖಿ ಮಂಡಳಿ ಸ್ಥಾಪನೆ ವಾರ್ಷಿಕ 100 ಕೋಟಿ ಅನುದಾನ ಮತ್ತು ಅದರ ಮೂಲಕ ಮೂರು ಲಕ್ಷದವರೆಗೆ ಸ್ವಉದ್ಯೋಗಕ್ಕೆ ಅನುದಾನ, ಬೀದಿ ಬದಿ ವ್ಯಾಪಾರಿಗಳಿಗೆ ಒಂದು ಬಾರಿಯ ನೆರವಿನ ರೂಪದಲ್ಲಿ 20,000 ಅನುದಾನ ನೀಡಲಾಗುತ್ತದೆ.

ಇನ್ನು ಅಸಂಘಟಿತ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪನೆಗೆ 3 ಸಾವಿರ ಕೋಟಿ ಹೂಡಿಕೆ, ಮೈಸೂರು ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ರೂ 5 ಸಾವಿರ ಸ್ಫೋಟಗಳ ಹೂಡಿಕೆ, ಮಂಡ್ಯದಲ್ಲಿ ಮೈಶುಗರ್ ಕಾರ್ಖಾನೆ ಮತ್ತು ಹೊಸ ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕೆ ಯೋಜನ ಅನುಷ್ಠಾನ, ಮೈಸೂರಿನಲ್ಲಿ 500 ಕೋಟಿ ಬಜೆಟ್‌ನೊಂದಿಗೆ ವಿಶ್ವದರ್ಜೆಯ ಡಾ. ರಾಜ್ ಕುಮಾರ್ ಫಿಲ್ಮ್ ಸಿಟಿ ನಿರ್ಮಾಣ, ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ವಿಶ್ವವಿದ್ಯಾಲಯ ಮತ್ತು ಕ್ರೀಡಾ ಸಂಕೀರ್ಣ ಸ್ಥಾಪನೆ ಮುಂತಾದ ಭರವಸೆಯನ್ನು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಮೂಲಕ ನೀಡಲಾಗಿದೆ .

ಇದನ್ನೂ ಓದಿ: ಮೇ.3 ದ.ಕ.ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ ಆಗಮನ ,ಬಿಗಿ ಭದ್ರತೆ,ವಾಹನ ಸಂಚಾರ ಬದಲಾವಣೆ