Home Karnataka State Politics Updates ‘ನಾವು ನೆಹರೂ-ಗಾಂಧಿ ಕುಟುಂಬದ ಗುಲಾಮರು, ಕೊನೆ ಉಸಿರಿರುವವರೆಗೂ ಗುಲಾಮರಾಗಿಯೇ ಇರುತ್ತೇವೆ’ ಎಂದು ಘೋಷಿಸಿದ ಕಾಂಗ್ರೆಸ್ ಶಾಸಕ...

‘ನಾವು ನೆಹರೂ-ಗಾಂಧಿ ಕುಟುಂಬದ ಗುಲಾಮರು, ಕೊನೆ ಉಸಿರಿರುವವರೆಗೂ ಗುಲಾಮರಾಗಿಯೇ ಇರುತ್ತೇವೆ’ ಎಂದು ಘೋಷಿಸಿದ ಕಾಂಗ್ರೆಸ್ ಶಾಸಕ !! | ಗುಲಾಮಗಿರಿಗಾಗಿ ಅಭಿನಂದನೆಗಳು ಎಂದು ಕಾಲೆಳೆದ ಬಿಜೆಪಿ

Hindu neighbor gifts plot of land

Hindu neighbour gifts land to Muslim journalist

ತಾವು ನೆಹರೂ-ಗಾಂಧಿ ಕುಟುಂಬದ ಗುಲಾಮರು ಮತ್ತು ಕೊನೆ ಉಸಿರು ಇರುವವರೆಗೂ ಅವರ ಗುಲಾಮರಾಗಿಯೇ ಇರುತ್ತೇವೆ ಎಂದು ಸಿರೋಹಿ ಕಾಂಗ್ರೆಸ್ ಶಾಸಕ ಸನ್ಯಾಮ್ ಲೋಧಾ ಅವರು ರಾಜಸ್ಥಾನ ವಿಧಾನಸಭೆಯಲ್ಲಿ ಘೋಷಿಸಿದ್ದಾರೆ.

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಲೋಧಾ ಅವರು ರಾಜಸ್ಥಾನ ವಿಧಾನಸಭೆಯಲ್ಲಿ ನಡೆಯುತ್ತಿರುವ ಬಜೆಟ್ ಅಧಿವೇಶನದ ವೇಳೆ ಮಾತನಾಡಿದ್ದಾರೆ. ಹರಿದೇವ್ ಜೋಶಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದ ತಿದ್ದುಪಡಿ ಮಸೂದೆ ಕುರಿತು ಮಾತನಾಡಿದ ಲೋಧಾ, ಹೌದು ನಾವು ನೆಹರು-ಗಾಂಧಿ ಕುಟುಂಬದ ಗುಲಾಮರು ಮತ್ತು ನಮ್ಮ ಕೊನೆಯ ಉಸಿರು ಇರುವವರೆಗೂ ನಾವು ಅವರ ಗುಲಾಮರಾಗಿಯೇ ಇರುತ್ತೇವೆ ಎಂದಿದ್ದಾರೆ.

ಹರಿದೇವ್ ಜೋಶಿ ಯೂನಿವರ್ಸಿಟಿ ಆಫ್ ಜರ್ನಲಿಸಂ ಮತ್ತು ಸಮೂಹ ಸಂವಹನ (ತಿದ್ದುಪಡಿ) ಮಸೂದೆ, 2022 ರ ಚರ್ಚೆಯ ಸಂದರ್ಭದಲ್ಲಿ ಲೋಧಾ ಅವರು ಚರ್ಚೆಯ ಮಧ್ಯದಲ್ಲಿ ಎದ್ದುನಿಂತು, “ಹೌದು, ನಾವು ಗುಲಾಮರು, ನಾವು ನಮ್ಮ ಕೊನೆಯ ಉಸಿರಿನವರೆಗೂ ಗಾಂಧಿ-ನೆಹರೂ ಕುಟುಂಬಕ್ಕೆ ಗುಲಾಮಗಿರಿ ಮಾಡುತ್ತೇವೆ. ಏಕೆಂದರೆ ಈ ದೇಶವನ್ನು ನಿರ್ಮಿಸಿದ್ದು ಗಾಂಧಿ-ನೆಹರೂ ಕುಟುಂಬ” ಎಂದು ಹೇಳಿದ್ದಾರೆ.

ಲೋಧಾ ಕಾಂಗ್ರೆಸಿಗರನ್ನು ಗುಲಾಮರು ಎಂದು ಕರೆದ ಕೂಡಲೇ ಪ್ರತಿಪಕ್ಷ ಬಿಜೆಪಿ ಉಪನಾಯಕ ರಾಜೇಂದ್ರ ರಾಥೋಡ್, “ಅಯ್ಯೋ ಗುಲಾಮರೇ! ಇದು ಹೊಸ ಸಂಸ್ಕೃತಿಯಾಗಿ ಬಂದಿದೆ. ಗುಲಾಮಗಿರಿಗಾಗಿ ನಿಮಗೆ ಅಭಿನಂದನೆಗಳು. ಇವರು ಗುಲಾಮರು, ಸಮಾಜಕ್ಕೆ ಯಾವ ಸಂದೇಶ ಕೊಡುತ್ತಾರೆ. ಗುಲಾಮರು ತಮ್ಮ ಮನಸ್ಸನ್ನು ಮಾತನಾಡಲು ಸಾಧ್ಯವಿಲ್ಲ, ಅವರು ಅದನ್ನು ಸ್ವತಃ ಒಪ್ಪಿಕೊಂಡಿದ್ದಾರೆ” ಎಂದು ಲೇವಡಿ ಮಾಡಿದ್ದಾರೆ.