Home Karnataka State Politics Updates ಬಿಜೆಪಿಗೆ ಯಾರ ಬೆಂಬಲವೂ ಬೇಡ !!-ಆಹಾರ ಸಚಿವ ಉಮೇಶ ಕತ್ತಿ ಹೇಳಿಕೆ

ಬಿಜೆಪಿಗೆ ಯಾರ ಬೆಂಬಲವೂ ಬೇಡ !!-ಆಹಾರ ಸಚಿವ ಉಮೇಶ ಕತ್ತಿ ಹೇಳಿಕೆ

Hindu neighbor gifts plot of land

Hindu neighbour gifts land to Muslim journalist

ಅಥಣಿ (ಬೆಳಗಾವಿ ಜಿಲ್ಲೆ): ‘ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದಿರುವ ಲಖನ್ ಜಾರಕಿಹೊಳಿ ಬೆಂಬಲ ಬಿಜೆಪಿಗೆ ಆಗತ್ಯವಿಲ್ಲ’ ಎಂದು ಆಹಾರ ಸಚಿವ ಉಮೇಶ ಕತ್ತಿ ಹೇಳಿದರು.

ಇಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ‘ಬಿಜೆಪಿಗೆ ಯಾರ ಬೆಂಬಲವೂ ಬೇಡ. ಜಿಲ್ಲೆಯಲ್ಲಿ ನಾವೇ 13 ಮಂದಿ ಶಾಸಕರಿದ್ದೇವೆ. ವಿಧಾನಪರಿಷತ್‌ ಪದವೀಧರರು ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷದ ಪರವಾಗಿ ಕೆಲಸ ಮಾಡುತ್ತೇವೆ. ಬೇರೆಯವರ ಬೆಂಬಲ ನಮಗೇಕೆ ಬೇಕು?’ ಎಂದು ಕೇಳಿದರು.
‘ಬೇಕಿದ್ದರೆ ಲಖನ್ ಪಕ್ಷದ ಪರವಾಗಿ ಪ್ರಚಾರಕ್ಕೆ ಬರಲಿ. ಬರುವವರಿಗೆ ಬೇಡ ಎನ್ನುವುದಿಲ್ಲ. ಲಖನ್ ಬೆಂಬಲವು ಬಿಜೆಪಿಗೆ ಯಾವುದೇ ಬದಲಾವಣೆ ತರುವುದಿಲ್ಲ. ಅವರು ನಮ್ಮ ಪಕ್ಷವನ್ನೇನೂ ಸೇರಿಲ್ಲ. ಹೀಗಾಗಿ, ಆ ಬಗ್ಗೆ ಹೆಚ್ಚು ಚರ್ಚಿಸುವುದಿಲ್ಲ’ ಎಂದು