Home Karnataka State Politics Updates ನುಚ್ಚುನೂರಾದ ಬಿಜೆಪಿಯ ಮತಾಂತರ ನಿಷೇಧ ಮಸೂದೆಯ ಕನಸು!! ತಮ್ಮವರಿಂದಲೇ ಪೇಚಿಗೆ ಸಿಲುಕಿದ ಬೊಮ್ಮಾಯಿ ಸರ್ಕಾರದ ವಿರುದ್ಧ...

ನುಚ್ಚುನೂರಾದ ಬಿಜೆಪಿಯ ಮತಾಂತರ ನಿಷೇಧ ಮಸೂದೆಯ ಕನಸು!! ತಮ್ಮವರಿಂದಲೇ ಪೇಚಿಗೆ ಸಿಲುಕಿದ ಬೊಮ್ಮಾಯಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಆರ್.ಎಸ್.ಎಸ್

Hindu neighbor gifts plot of land

Hindu neighbour gifts land to Muslim journalist

ಬಿಜೆಪಿ ಹೆಣೆದ ತಂತ್ರಗಳಿಗೆ ತಮ್ಮ ಪಕ್ಷದವರೇ ವಿರುದ್ಧ ನಿಂತಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡಿದ್ದು, ಇಬ್ಬರು ಸದಸ್ಯರ ಗೈರು ಬಿಜೆಪಿಯ ಕನಸನ್ನು ನುಚ್ಚು ನೂರು ಮಾಡಿಬಿಟ್ಟಿದೆ.

ಹೌದು.ಮೊನ್ನೆ ನಡೆದ ವಿಧಾನಸಭಾ ಕಲಾಪದಲ್ಲಿ ಮತಾಂತರ ನಿಷೇಧ ವಿಧೇಯಕವನ್ನು ಮಂಡಿಸಿದ್ದ ಬಿಜೆಪಿ, ಮಂಡನೆಯನ್ನು ಅಂಗೀಕರಿಸಲು ಪಟ್ಟುಹಿಡಿದಿತ್ತು. ಹಲವರ ವಿರೋಧದ ನಡುವೆಯೂ ಮಸೂದೆ ಮಂಡಿಸಿದ್ದ ಬೊಮ್ಮಾಯಿ ಗೆದ್ದು ಬೀಗಿದ್ದರು.ಆದರೀಗ ತಮ್ಮವರಿಂದಲೇ ಆರ್.ಎಸ್.ಎಸ್ ಎದುರು ಬಿಜೆಪಿ ತಲೆ ತಗ್ಗಿಸಿದಂತಾಗಿದೆ ಎಂಬ ಮಾತು ಕೇಳಿಬರುತ್ತಿದೆ.

ಗುರುವಾರ ವಿಧಾನ ಪರಿಷತ್ ನಲ್ಲಿ ವಿಧೇಯಕ ಮಂಡನಗೆ ಎಲ್ಲಾ ಪ್ಲಾನ್ ನಡೆದಿತ್ತು. ಅದರಂತೆಯೇ ಎಲ್ಲಾ ಸದಸ್ಯರು ಮೂರು ಗಂಟೆಯ ಹೊತ್ತಿಗೆ ಸೇರಿ ಅಂಗೀಕರಿಸಲು ಆಗ್ರಹಿಸಿದಾಗ ಪ್ರತಿಪಕ್ಷಗಳು ಪಟ್ಟುಬಿಡದೆ ವಿರೋಧ ವ್ಯಕ್ತಪಡಿಸಿದ ಕಾರಣ ಅಂಗೀಕೃತವಾಗಿರಲಿಲ್ಲ. ಇದರಿಂದಾಗಿ ಬಿಜೆಪಿ ಕೊಂಚ ಪೇಚಿಗೆ ಸಿಲುಕಿದಂತಾಗಿದ್ದು, ಸದ್ಯ ಗೈರು ಹಾಜರಾದ ಸದಸ್ಯರಾದ ಎಂ.ಕೆ ಪ್ರಾಣೇಶ್ ಹಾಗೂ ರುದ್ರೇಗೌಡ ರನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗಿದೆ.

ಇತ್ತ ವಿಧೇಯಕ ಅಂಗೀಕೃತವಾಗುತ್ತದೆ ಎಂದು ಖುಷಿಯಿಂದ ಬೀಗಲು ಸಜ್ಜಾಗಿದ್ದ ಆರ್.ಎಸ್.ಎಸ್ ಹಾಗೂ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿದಲ್ಲದೇ, ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಎಲ್ಲಾ ಘಟನೆಗಳಿಗೂ ಕಾರಣರಾದ ಇಬ್ಬರು ಸದಸ್ಯರಿಗೆ ಸಂಕಷ್ಟ ಎದುರಾಗಿದೆ.