Home Karnataka State Politics Updates ರಾಜ್ಯಾಧ್ಯಕ್ಷರ ಬದಲಾವಣೆಗೆ ಮುಂದಾಗಿದೆ ಬಿಜೆಪಿ ಹೈಕಮಾಂಡ್!! ಜಿಲ್ಲೆಯ ಕೆಲ ಘಟನೆಗಳಿಂದಾಗಿ ಕಟೀಲ್ ಕೈತಪ್ಪುತ್ತಾ ರಾಜ್ಯಾಧ್ಯಕ್ಷ ಪಟ್ಟ!??

ರಾಜ್ಯಾಧ್ಯಕ್ಷರ ಬದಲಾವಣೆಗೆ ಮುಂದಾಗಿದೆ ಬಿಜೆಪಿ ಹೈಕಮಾಂಡ್!! ಜಿಲ್ಲೆಯ ಕೆಲ ಘಟನೆಗಳಿಂದಾಗಿ ಕಟೀಲ್ ಕೈತಪ್ಪುತ್ತಾ ರಾಜ್ಯಾಧ್ಯಕ್ಷ ಪಟ್ಟ!??

Hindu neighbor gifts plot of land

Hindu neighbour gifts land to Muslim journalist

ಸದ್ಯ ಉತ್ತರಪ್ರದೇಶ ಸೇರಿದಂತೆ ಐದು ರಾಜ್ಯಗಳ ಚುನಾವಣೆ ನಡೆಯಲಿದ್ದು ಬಿಜೆಪಿ ಬಿರುಸಿನ ಪ್ರಚಾರಕ್ಕೆ ಮುಂದಾಗಿರುವ ಬೆನ್ನಲ್ಲೇ,ಕರ್ನಾಟಕ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯ ವದಂತಿ ಎದ್ದಿದೆ.

ಆಪರೇಷನ್ ಕಮಲದಿಂದಾಗಿ ರಾಜ್ಯದಲ್ಲಿ 2019 ರಿಂದ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ಈ ಎರಡು ವರ್ಷದಲ್ಲಿ ಜನತೆಯಿಂದ ಹೇಳಿಕೊಳ್ಳುವಷ್ಟು ಒಲವು ತೋರಿಲ್ಲ ಎಂಬುವುದಕ್ಕೆ ಮೊನ್ನೆಯ ವಿಧಾನಪರಿಷತ್ ಚುನಾವಣೆಯ ಫಾಲಿತಾಂಶವೇ ಸಾಕ್ಷಿ ಎನ್ನಲಾಗುತ್ತಿದೆ. ಹೀಗಾದರೆ ಮುಂದಿನ ಬಾರಿ ಬಿಜೆಪಿ ನೆಲಕ್ಕೆ ಉರುಳುತ್ತದೆ ಎಂಬ ಭಯ ಸದ್ಯ ಪಕ್ಷವನ್ನು ಕಾಡುತ್ತಿದೆ ಎನ್ನಲಾಗುತ್ತಿದೆ.

ಬಿಜೆಪಿಯ ಭದ್ರಕೋಟೆ ದಕ್ಷಿಣಕನ್ನಡದಲ್ಲಿ ಇತ್ತೀಚಿನ ಬೆಳವಣಿಗೆ ಕಂಡರೆ ಬಿಜೆಪಿ ಮುಂದಿನಬಾರಿ ಅಧಿಕಾರ ಹಿಡಿಯುವುದು ಅನುಮಾನ. ಇದಕ್ಕೆಲ್ಲಾ ಮೊನ್ನೆಯ ಕೆಲ ಪ್ರಕರಣಗಲೇ ಪ್ರತ್ಯಕ್ಷ ಸಾಕ್ಷಿಯಂತೆ ಕಾಣುತ್ತಿದೆ.ಸದ್ಯ ಬಿಜೆಪಿ ಹೈಕಮಾಂಡ್ ರಾಜ್ಯಾಧ್ಯಕ್ಷರನ್ನೇ ಬದಲಿಸುವ ಪ್ಲಾನ್ ನಡೆಸಿದ್ದು, ನಾಯಕತ್ವ ಗುಣವಿರುವ ಸೂಕ್ತ ವ್ಯಕ್ತಿಯ ಆಯ್ಕೆಗೆ ಮುಂದಾಗಿದೆ ಎನ್ನಲಾಗುತ್ತಿದೆ. ಹಾಗಾದರೆ ಮುಂದಿನ ಬಾರಿಯ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗೂ ಮುನ್ನ ನಳಿನ್ ಕುಮಾರ್ ಕಟೀಲ್ ರಾಜ್ಯಾಧ್ಯಕ್ಷ ಪಟ್ಟದಿಂದ ಕೆಳಗಿಳಿಯುತ್ತಾರೆಯೇ, ಮುಂದಿನ ರಾಜ್ಯಾಧ್ಯಕ್ಷ ಯಾರಾಗುತ್ತಾರೆ ಎಂಬುವುದು ಎಲ್ಲರ ಪ್ರಶ್ನೆಯಾಗಿದೆ.