Home Karnataka State Politics Updates Haladi Srinivas Shetty : ಗುರುದಕ್ಷಿಣೆಯಾಗಿ ಕ್ಷೇತ್ರ ತ್ಯಜಿಸಿ ರಾಜಕೀಯ ನಿವೃತ್ತಿ ಘೋಷಿಸಿದ ಭೀಷ್ಮ ಹಾಲಾಡಿ...

Haladi Srinivas Shetty : ಗುರುದಕ್ಷಿಣೆಯಾಗಿ ಕ್ಷೇತ್ರ ತ್ಯಜಿಸಿ ರಾಜಕೀಯ ನಿವೃತ್ತಿ ಘೋಷಿಸಿದ ಭೀಷ್ಮ ಹಾಲಾಡಿ ಶ್ರೀನಿವಾಸ್ ಶೆಟ್ಟಿ

Hindu neighbor gifts plot of land

Hindu neighbour gifts land to Muslim journalist

Haladi Srinivas Shetty : 2023 ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election) ಇನ್ನೇನು ದಿನಗಣನೆ ಶುರುವಾಗಿದೆ. ಚುನಾವಣೆ ಸಮೀಪಿಸಿದಂತೆ ರಾಜಕಾರಣಿಗಳು ಪಕ್ಷದಿಂದ ಪಕ್ಷಕ್ಕೆ ಸೇರುವ ರಾಜಕೀಯ ವಿದ್ಯಾಮಾನಗಳು ಸಾಮಾನ್ಯ. ಆದರೆ ಕರಾವಳಿ ರಾಜಕಾರಣಿಗಳ ಪೈಕಿ ಕುಂದಾಪುರದ ವಾಜಪೇಯಿ ಎಂದೇ ಹೆಸರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ (Haladi srinivas Shetty) ಸತತ 25 ವರ್ಷಗಳಿಂದ ಐದು ವಿಧಾನಸಭಾ ಚುನಾವಣೆಗಳಲ್ಲಿ ಗೆದ್ದ ಜನನಾಯಕ ನಿನ್ನೆ ಧಿಡೀರ್ ಎಂದು ತಮ್ಮ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಪ್ರಸ್ತುತ ರಾಜಕೀಯ ತಮಗೆ ಇಷ್ಟವಾಗದೇ ಇರುವುದರಿಂದ ರಾಜಕೀಯದಿಂದ ದೂರ ಸರಿಯುವುದಾಗಿ ತಮ್ಮ ಆಪ್ತರಿಗೆ ಅವರು ತಿಳಿಸಿದ್ದಾರೆ.

ಭಾನುವಾರ ಬೆಂಗಳೂರಿನಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲೂ ಹಾಲಾಡಿ ಭಾಗವಹಿಸಿದ್ದರು. ರಾಜ್ಯದ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಮುಂದೆ ಪಕ್ಷ ಅವಕಾಶ ಕೊಟ್ಟರೆ ಖಂಡಿತ ಭಾಗವಹಿಸುವೆ ಎಂದು ಕೂಡಾ ಹೇಳಿದ್ದರು. ಆದರೆ ಹಠಾತ್ ತಮ್ಮ ರಾಜಕೀಯ ನಿವೃತ್ತಿಯನ್ನು ಆಪ್ತರ ಜೊತೆ ಸೇರಿ ಸೋಮವಾರ ಸಂಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅದು ಬಹು ಚರ್ಚೆಗೆ ಕಾರಣ ಆಗಿದೆ.

ಸಾಮಾಜಿಕ ನ್ಯಾಯ ಎಂದೇ ಹೇಳುತ್ತಾ ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಸತತ ಐದು ಬಾರಿ ಗೆದ್ದು ಕರಾವಳಿಯ ವಿಭಿನ್ನ ಜನಪ್ರತಿನಿಧಿ ಎಂದೇ ಗುರುತಿಸಿಕೊಂಡಿದ್ದರು. ಕರಾವಳಿಯ ಜನ ಇವರನ್ನು ಪ್ರೀತಿಯಿಂದ ಕುಂದಾಪುರದ ವಾಜಪೇಯಿ ಎಂದೇ ಕರೆಯುತ್ತಿದ್ದರು. ಸತತ 25 ವರ್ಷಗಳ ರಾಜಕೀಯ ಮಾಡಿದ ಹಾಲಾಡಿ ತಮ್ಮ ನಿವೃತ್ತಿ ಘೋಷಣೆ ಮಾಡಿರುವುದು ಕರಾವಳಿ ಜನತೆಗೆ ಆಘಾತ ಉಂಟು ಮಾಡಿದೆ.

2023 ಚುನಾವಣೆ ಸಮಯದಲ್ಲಿ ಎಲ್ಲ ರಾಜಕಾರಣಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಟಿಕೆಟ್ ಗಿಟ್ಟಿಸಿಕೊಳ್ಳಲು ಬಡಿದಾಡುತ್ತಿರುವಾಗಲೇ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅವರು ತಮ್ಮ ರಾಜಕೀಯ ಗುರು ಎ ಜಿ ಕೊಡಗಿ ಋಣ ತೀರಿಸಲು ಈ ಬಾರಿ ಚುನಾವಣೆಯಿಂದ ದೂರ ಸರಿದಿದ್ದಾರೆ. ಎ. ಜಿ ಕೊಡಗಿ ಅವರ ಪುತ್ರ ಕಿರಣ್ ಕೊಡಗಿ ಅವರಿಗಾಗಿ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ.

ಬಂಟ ಸಮುದಾಯಕ್ಕೆ ಸೇರಿದ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಈ ಬಾರಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಎ. ಜಿ ಕೊಡಗಿ ಅವರ ಪುತ್ರ ಕಿರಣ್ ಕೊಡಗಿ ಅವರಿಗೆ ಬೆಂಬಲ ನೀಡಲು ಬಯಸುತ್ತಿದ್ದಾರೆ. ಹಾಗೂ ಈ ಬಾರಿ ಬಿಜೆಪಿಗೆ ಮತ ನೀಡಿ ಎಂದು ಕುಂದಾಪುರದ ಜನತೆಗೆ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಕೋರಿದ್ದಾರೆ. ಅಧಿಕಾರಕ್ಕಾಗಿ ಏನೂ ಮಾಡಲು ಸಿದ್ದರಿರುವವರ ಮಧ್ಯೆ, ಕುರ್ಚಿ ಸಿಕ್ಕಿದರೆ ಕುಟುಂಬವನ್ನು ಕೂಡಾ ಕಳಚಿಕೊಳ್ಳುವವರ ಮಧ್ಯೆ ಹಾಲಾಡಿ ಶೆಟ್ರು ಒಂದು ಆದರ್ಶ. ಅದಕ್ಕೇ ಅವರನ್ನು ಕುಂದಾಪುರ ವಾಜಪೇಯಿ ಅನ್ನೋದು !