Home Karnataka State Politics Updates Assam: ಬರೀ ‘ಇಂಡಿಯಾ’ಅಲ್ಲ, ರಾಹುಲ್ ಗಾಂಧಿ ಹೆಸರಲ್ಲೂ ಬದಲಾವಣೆ ?! ಏನಿದು ಶಾಕಿಂಗ್ ನ್ಯೂಸ್ ?

Assam: ಬರೀ ‘ಇಂಡಿಯಾ’ಅಲ್ಲ, ರಾಹುಲ್ ಗಾಂಧಿ ಹೆಸರಲ್ಲೂ ಬದಲಾವಣೆ ?! ಏನಿದು ಶಾಕಿಂಗ್ ನ್ಯೂಸ್ ?

Himanta Biswa Sarma
Image source Credit: Hindustan Times

Hindu neighbor gifts plot of land

Hindu neighbour gifts land to Muslim journalist

Himanta Biswa Sarma: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ(Himanta Biswa Sarma) ರಾಹುಲ್ ಗಾಂಧಿ (Rahul Gandhi)ಕುರಿತಂತೆ ತಮ್ಮ ಅಸಮಾಧಾನ ಹೊರ ಹಾಕಿದ್ದು, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ತಮ್ಮ ಹೆಸರನ್ನು ಬದಲಿಸಿಕೊಳ್ಳಬೇಕು ಎಂದು ಹೇಳಿಕೆ ನೀಡಿದ್ದಾರೆ.

Himanta Biswa Sarma

ಅಸ್ಸಾಂ(Assam )ರಾಜಧಾನಿ ಗುವಾಹಟಿಯಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗಿಯಾಗಿದ್ದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಕಾಂಗ್ರೆಸ್ ಸರ್ಕಾರದ ಮೇಲೆ ಕಿಡಿ ಕಾರಿದ್ದಾರೆ. ಗಾಂಧಿ ಕುಟುಂಬ”ದೇಶವನ್ನು ಒಡೆಯುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ ಹಿಮಂತ ಅವರು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ತಮ್ಮ ಹೆಸರಿನ ಗಾಂಧಿ ಪಟ್ಟವನ್ನು ಬಿಟ್ಟುಕೊಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಈ ಗಾಂಧಿ ಕುಟುಂಬವು “ನಕಲಿಗಳ ಸರದಾರ” ಅಷ್ಟೆ ಅಲ್ಲದೇ, ಅವರು “ಹಲವಾರು ಹಗರಣಗಳನ್ನು” ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಅವರ ಮೊದಲ ಹಗರಣ ಗಾಂಧಿ ಪಟ್ಟದಿಂದ ಪ್ರಾರಂಭವಾಗಿದೆ. ಕೇವಲ ಪರಿವಾರದ ಮತ್ತು ದೇಶವನ್ನು ಒಡೆಯುವ ಕೆಲಸ ಮಾಡಿರುವ ಗಾಂಧಿ ಪಟ್ಟವನ್ನು ಬಿಟ್ಟುಕೊಡುವಂತೆ ನಾನು ರಾಹುಲ್ ಗಾಂಧಿಗೆ ವಿನಂತಿಸುತ್ತೇನೆ” ಎಂದು ಇದೇ ವೇಳೆ ಹೇಳಿಕೊಂಡಿದ್ದಾರೆ

ಇದರ ನಡುವೆ, ದೆಹಲಿಯಲ್ಲಿ ನಡೆದ ಜಿ 20 ನಾಯಕರ ಶೃಂಗಸಭೆಯಲ್ಲಿ ಅಂಗೀಕರಿಸಲಾದ ‘ದೆಹಲಿ ಘೋಷಣೆ’ಗಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಕೊಂಡಾಡಿದ್ದಾರೆ. ಪ್ರಧಾನಿ ಮೋದಿಯ ಗುಣಗಾನ ಮಾಡಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಭಾರತವನ್ನು ವಿಶ್ವಗುರುವನ್ನಾಗಿ ಮಾಡಲು ಶ್ರಮಿಸುತ್ತಿರುವ ಮಹಾ ನಾಯಕನ ಕಾರ್ಯ ವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಹಿಳೆಯರು ಈಗ ದೇಶವನ್ನು ಮುನ್ನಡೆಸುತ್ತಿದ್ದು, ಪ್ರಧಾನಿ ಮೋದಿಯವರು ನಾರಿ ಶಕ್ತಿ, ಮಹಿಳಾ ಸಬಲೀಕರಣಕ್ಕೆ ಹೆಚ್ಚು ಮಹತ್ವ ನೀಡುತ್ತಿದ್ದಾರೆ ಎಂದು ಶ್ಲಾಘಿಸಿದ್ದಾರೆ.

ಇದನ್ನೂ ಓದಿ: Mangalore: ಈ ಭಾಗದ ಜನರಿಗೆ ಗಣೇಶ ಹಬ್ಬದ ರಜೆಯಲ್ಲಿ ಬದಲಾವಣೆ ?! ಹಾಗಿದ್ರೆ ಚತುರ್ಥಿಯ ಸಾರ್ವತ್ರಿಕ ರಜೆ ಯಾವಾಗ ಗೊತ್ತಾ?