Home News Yuva Raghavendra & Sapthami Gowda: ರಾಘವೇಂದ್ರ ರಾಜಕುಮಾರ್ ರವರ ಮಗನಾದ ಯುವನ ಚಿತ್ರಕ್ಕೆ ಜೊತೆಯಾದ...

Yuva Raghavendra & Sapthami Gowda: ರಾಘವೇಂದ್ರ ರಾಜಕುಮಾರ್ ರವರ ಮಗನಾದ ಯುವನ ಚಿತ್ರಕ್ಕೆ ಜೊತೆಯಾದ ಕಾಂತಾರದ ಕಲರವ ಸಪ್ತಮಿ ಗೌಡ !

Hindu neighbor gifts plot of land

Hindu neighbour gifts land to Muslim journalist

Yuva Raghavendra & Sapthami Gowda: ರಾಜ್ ಕುಮಾರ್ ಅವರ ಎರಡನೆಯ ತಲೆಮಾರು, ರಾಘವೇಂದ್ರ ರಾಜಕುಮಾರ್ ರವರ (Raghavendra raj kumar Son) ಮಗನಾದ ಯುವ ರಾಜಕುಮಾರರವರ ‘ ಯುವ ‘ (Yuva) ಚಿತ್ರದ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಹಾಗೂ ನಿರ್ದೆಶಕ ಸಂತೋಷ್ ಆನಂದ್ ರಾಮ್ ಅವರು ‘ಯುವ’ ಚಿತ್ರದ ನಾಯಕಿಯ ಹೆಸರನ್ನು ಬಹಿರಂಗ ಪಡಿಸಿದ್ದಾರೆ.

ಆಕೆ ಬೇರೆ ಯಾರೂ ಅಲ್ಲ, ಕಾಂತರಾದ ಮೂಲಕ ಕನ್ನಡಿಗರ ಕನಸು ತುಂಬಿಕೊಂಡ ಕಣ್ಣುಗಳಲ್ಲಿ ಕಲರವ ಎಬ್ಬಿಸಿದ ಎತ್ತರದ ಚೆಲುವೆ “ಲೀಲಾ” ಆಗಿ ಅಭಿಮಾನಿಗಳ ಮನಸು ಕದ್ದಿದ್ದ ಮತ್ತು ಗೆದ್ದಿದ್ದ ಸಪ್ತಮಿಗೌಡ (Sapthami Gowda). ಅದರ ನಿರ್ದೆಶಕ ಸಂತೋಷ್ ರವರು ಸೋಮವಾರ ಸಾಮಾಜಿಕ ಜಾಲತಾಣ (social media) ದಲ್ಲಿ ಸಪ್ತಮಿ ಅವರಿಗೆ ‘ಯುವ’ ಚಿತ್ರತಂಡಕ್ಕೆ ‘ ಯುವ ರಾಜನ ಅರಸಿಗೆ ಆದರದ ಸ್ವಾಗತ’ ಎಂಬ ಕ್ಯಾಪ್ಶನ್ ಮೂಲಕ ಸ್ವಾಗತ ಕೋರಿದ್ದಾರೆ.

ಯುವ ಹಾಗೂ ಸಪ್ತಮಿಯವರು ಜೊತೆಯಾಗಿರುವ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋ ಗೆ ಅಭಿಮಾನಿಗಳು ತಮ್ಮ ಸಂತೋಷವನ್ನು ಕಮೆಂಟ್ ಮೂಲಕ ವ್ಯಕ್ತ ಪಡಿಸಿದ್ದಾರೆ. ಇದು ಯುವ ಅವರ ಎರಡನೇ ಚಿತ್ರೀಕರಣವಾಗಿದೆ. ಇವರ ಮೊದಲ ಚಿತ್ರವಾದ ‘ ಯುವ ರಣಧೀರ ಕಂಠೀರವ ‘ ಚಿತ್ರದ ಪೋಸ್ಟರ್ ಅನ್ನೂ ಬಿಡುಗಡೆ ಮಾಡಿದ್ದರು. ಆದರೆ ಕಾರಣಾಂತರದಿಂದ ಆ ಚಿತ್ರದ ಚಿತ್ರೀಕರಣ ಮುಂದುವರೆಯಲೇ ಇಲ್ಲ. ಇದರಿಂದ ಬೇಸರವಾಗಿದ್ದ ದೊಡ್ಮನೆ ಅಭಿಮಾನಿಗಳು ‘ ಯುವ ‘ ಚಿತ್ರಕ್ಕಾಗಿ ತುಂಬಾ ಕಾತುರದಿಂದ ಕಾದು ನೋಡುತ್ತಿದ್ದಾರೆ. ಈಗ ಸಪ್ತಮಿ ತಂಡ ಸೇರಿಕೊಂಡಿದ್ದಾಳೆ. ರಥ ಸಪ್ತಮಿ ಚೆನ್ನಾಗಿ ಓಡುವ ನಿರೀಕ್ಷೆಯಿದೆ.

ಇವರಿಬ್ಬರ ಜೋಡಿಯನ್ನು ಬೆಳ್ಳಿ ಪರದೆಯ ಮೇಲೆ ನೋಡಲು ಯುವ ಹಾಗೂ ಸಪ್ತಮಿಯವರ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ ಎಂಬ ಅಭಿಪ್ರಾಯವನ್ನು ತಿಳಿಸಿದ್ದಾರೆ.ಅದರಲ್ಲಿ ಕೆಲವು ಜನ ವಿಭಿನ್ನ ಕಾಮೆಂಟ್ ಕೂಡ ಮಾಡಿದ್ದಾರೆ. ಯುವನ ಎದುರು ಸಪ್ತಮಿ ಗೌಡ ಅಕ್ಕನ ಥರ ಕಾನ್ತಾಳೆ ಅಂದಿದ್ದಾರೆ ಕೆಲವರು. ಎತ್ತರದ ತುಂಬಿದ ದೇಹದ ಸಪ್ತಮಿ ಕೆಲವರಿಗೆ ಅಕ್ಕನ ಥರ ಅನ್ನಿಸಿರಲೂ ಸಾಕು. ಏನೇ ಇರಲಿ, ಚಿತ್ರ ಚೆನ್ನಾಗಿ ಬರಲಿ ಅಂತ ಅಭಿಮಾನಿಗಳು ಅಂದುಕೊಳ್ಳುತ್ತಿದ್ದಾರೆ. ಹಾಗೆಯೇ ಸಪ್ತಮಿ ಗೌಡಳ ಅವರ ಮುಂದಿನ ನಟನೆಯು ಅಭಿಷೇಕ್ ಅಂಬರೀಶ್ ರವರ (Abhishek Ambarish) ‘ ಕಾಳಿ ‘ ಚಿತ್ರವೆಂದು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಅಭಿಷೇಕ್ ಅಂಬರೀಷ್ ಎತ್ತರ ಮತ್ತು ಪರ್ಸನಾಲಿಟಿಗೆ ಸಪ್ತಮಿಯ ಎತ್ತರ ಮ್ಯಾಚ್ ಆಗಲಿದ್ದು ಚಿತ್ರ ಕುತೂಹಲ ಮೂಡಿಸಿದೆ.