Home News Hindu Muslim Converts: ಹಿಂದೂ ಧರ್ಮದ ಪ್ರೇಮಿಯನ್ನು ಸೇರಲು ಮುಸ್ಲಿಂ ಧರ್ಮದಿಂದ ಮತಾಂತರಗೊಂಡ ಯುವತಿ!

Hindu Muslim Converts: ಹಿಂದೂ ಧರ್ಮದ ಪ್ರೇಮಿಯನ್ನು ಸೇರಲು ಮುಸ್ಲಿಂ ಧರ್ಮದಿಂದ ಮತಾಂತರಗೊಂಡ ಯುವತಿ!

Hindu Muslim Converts

Hindu neighbor gifts plot of land

Hindu neighbour gifts land to Muslim journalist

Hindu Muslim Converts: ಉತ್ತರ ಪ್ರದೇಶದ (Uttar Pradesh) ಬರೇಲಿಯಲ್ಲಿ ಹಿಂದೂ ಪ್ರಿಯಕರನನ್ನು ಮದುವೆಯಾಗಲು ಮುಸ್ಲಿಂ ಯುವತಿಯೊಬ್ಬಳು ತನ್ನ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡಿರುವ ಘಟನೆ ನಡೆದಿದೆ. ಹೌದು, ಯುಕ್ತಿ ಫರಾನಾ ಎಂಬ ಯುವತಿಯು ಹಿಂದೂ ಯುವಕನನ್ನು ಪ್ರೀತಿಸುತ್ತಿದ್ದಳು, ಆತನನ್ನು ಮದುವೆಯಾಗುವ ಸಲುವಾಗಿ ಫರಾನಾ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಲ್ಲದೇ ಹೆಸರನ್ನೂ ಕೂಡ ಪಲ್ಲವಿ ಎಂದು ಬದಲಾಯಿಸಿಕೊಂಡಿದ್ದಾರೆ.

ಇದನ್ನೂ ಓದಿ: Charlie 777: 6 ಮುದ್ದಾದ ಮರಿಗಳಿಗೆ ಜನ್ಮ ನೀಡಿದ ಚಾರ್ಲಿ 777! ರಕ್ಷಿತ್ ಶೆಟ್ಟಿ ಲೈವ್ ವಿಡಿಯೋ ವೈರಲ್ !

19 ವರ್ಷದ ಫರಾನಾ ಎಂಬ ಯುವತಿ ತನ್ನ ಪ್ರಿಯಕರ ಧರಂವೀರ್ಗಾಗಿ ಧರ್ಮವನ್ನೇ ಬದಲಿಸಿಕೊಳ್ಳಲು ಮುಂದಾಗಿದ್ದಾರೆ. ಆರು ತಿಂಗಳ ಹಿಂದೆ ಚಂಡೀಗಢದ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ಇಬ್ಬರೂ ಪರಿಚಯವಾಗಿದ್ದು, ಪರಿಚಯ ಪ್ರೀತಿಗೆ ತಿರುಗಿದೆ.

ಫರಾನಾ ಪ್ರಕಾರ, ನನಗೆ ಮೊದಲಿನಿಂದಲೂ ಹಿಂದೂ ಧರ್ಮದ ಬಗ್ಗೆ ನಂಬಿಕೆ ಇದೆ, ನಾನು ನನ್ನ ಬಾಲ್ಯದ ದಿನಗಳಿಂದಲೂ ಪೂಜೆ ಮಾಡುತ್ತಿದ್ದೆ, ಆದರೆ ನನ್ನ ಕುಟುಂಬ ಸದಸ್ಯರು ಅದನ್ನು ವಿರೋಧಿಸಿದ್ದರು.

ಇದನ್ನು ಓದಿ: SSLC Exam Brucely Banner: SSLC ಯಲ್ಲಿ ಜಸ್ಟ್ ಪಾಸ್ ಆಗಿದ್ದಕ್ಕೆ ಬ್ಯಾನರ್ ಹಾಕಿ ಸಂಭ್ರಮಿಸಿದ ಸ್ನೇಹಿತರು : ಹಾಸ್ಯದಿಂದ ಕೂಡಿರುವ ಬ್ಯಾನ‌ರ್ ಎಲ್ಲೆಡೆ ವೈರಲ್

ಇದೀಗ ಫರಾನಾ ಪಲ್ಲವಿಯಾಗಿ ಬದಲಾಗಿದ್ದು, ಜೀವನ ಪರ್ಯಂತ ಧರಂವೀರ್ ಜತೆ ಬಾಳುವುದಾಗಿ ನಿರ್ಧರಿಸಿದ್ದಾರೆ. ಸದ್ಯ ಪಲ್ಲವಿ ಹಾಗೂ ಧರಂವೀರ್ ಅಗಸ್ತ್ಯ ರಿಷಿ ಮುನಿ ಆಶ್ರಮದಲ್ಲಿ ವಿವಾಹವಾಗಿದ್ದಾರೆ.