Home News ನಿಮ್ಮಲ್ಲಿ ಮತಗಳಿವೆ, ನನ್ನಲ್ಲಿ ಹಣವಿದೆ, ಮತ ಕೊಟ್ರೆ ಮಾತ್ರ ಅಭಿವೃದ್ಧಿ- ಮಹಾ ಡಿಸಿಎಂ ಅಜಿತ್‌ ಪವಾರ್

ನಿಮ್ಮಲ್ಲಿ ಮತಗಳಿವೆ, ನನ್ನಲ್ಲಿ ಹಣವಿದೆ, ಮತ ಕೊಟ್ರೆ ಮಾತ್ರ ಅಭಿವೃದ್ಧಿ- ಮಹಾ ಡಿಸಿಎಂ ಅಜಿತ್‌ ಪವಾರ್

Hindu neighbor gifts plot of land

Hindu neighbour gifts land to Muslim journalist

ಪುಣೆ: ‘ನಿಮ್ಮಲ್ಲಿ ಮತಗಳಿದ್ರೆ, ನನ್ನಲ್ಲಿ ಹಣವಿದೆ. ನೀವು ತಿರಸ್ಕರಿಸಿದರೆ, ನಾನೂ ತಿರಸ್ಕರಿಸುತ್ತೇನೆ’ -ಇದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್‌ ಪವಾರ್ ಅವರ ವರ್ಷನ್. ಇದು ಅವರು ಮತದಾರರಿಗೆ ನೀಡಿದ ಎಚ್ಚರಿಕೆ ಸಂದೇಶ. ಅವರು ಬಾರಾಮತಿ ತಾಲ್ಲೂಕಿನ ಮಾಲೇಗಾಂವ್ ನಗರ ಪಂಚಾಯಿತಿಯಲ್ಲಿ ಎನ್‌ಸಿಪಿ ಅಭ್ಯರ್ಥಿಗಳ ಪರ ಪ್ರಚಾರದ ವೇಳೆ ಈ ರೀತಿ ಹೇಳಿಕೆ ನೀಡಿದ್ದಾರೆ.

ಮಹಾರಾಷ್ಟ್ರದ ಬಿಜೆಪಿ-ಎನ್‌ಸಿಪಿ, ಶಿವಸೇನಾ ಸರ್ಕಾರದಲ್ಲಿ ಅಜಿತ್ ಪವಾರ್‌ ಹಣಕಾಸು ಸಚಿವರಾಗಿದ್ದಾರೆ. ಅಭಿವೃದ್ಧಿಗೆ ಅನುದಾನ ಒದಗಿಸಲು ಹಣದ ಕೊರತೆಯಿಲ್ಲ. ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸದಿದ್ದರೆ, ಅವರು ಕೂಡ ನಿಮ್ಮನ್ನು ತಿರಸ್ಕರಿಸಲಿದ್ದಾರೆ ಎಂದು ಅವರು ಎಚ್ಚರಿಕೆ ನೀಡಿದ್ದು ಪರೋಕ್ಷವಾಗಿ ಮತ ಕೊಟ್ರೆ ಅಭಿವೃದ್ದಿ, ಇಲ್ಲದಿದ್ದರೆ ಇಲ್ಲ ಎಂದಿದ್ದಾರೆ.