Home News ಮನೆಯಲ್ಲಿ AC ಉಂಟೆಂದು ಬೇಕಾಬಿಟ್ಟಿ ಹಾಕುವಂತಿಲ್ಲ; ದೇಶದಲ್ಲಿ ಹೊಸ ರೂಲ್ಸ್ ಜಾರಿ!

ಮನೆಯಲ್ಲಿ AC ಉಂಟೆಂದು ಬೇಕಾಬಿಟ್ಟಿ ಹಾಕುವಂತಿಲ್ಲ; ದೇಶದಲ್ಲಿ ಹೊಸ ರೂಲ್ಸ್ ಜಾರಿ!

Small Air Cooler
Image source: YouTube

Hindu neighbor gifts plot of land

Hindu neighbour gifts land to Muslim journalist

ನವದೆಹಲಿ: ದೇಶದಲ್ಲಿ ಏರ್ ಕಂಡೀಷನ್’ ಗಳಿಗೆ (AC) ಹೊಸ ರೂಲ್ಸ್ ಜಾರಿ ಆಗುತ್ತಿದೆ. ಈ ಸಂಬಂಧ ಕೇಂದ್ರ ಸರ್ಕಾರ ಹೊಸ ನಿರ್ಧಾರ ಮಾಡಿದೆ. ಈ ನಿಯಮದಲ್ಲಿ ಏರ್ ಕಂಡೀಷನ್ ಗಳಿಗೆ ಸ್ಟಾಂಡರ್ಡ್ ಟೆಂಪರೆಚರ್ ರೇಂಜ್ ಅನ್ನು ನಿಗದಿಪಡಿಸಲಾಗುತ್ತದೆ. ಈ ಹೊಸ ನಿಯಮವು ಹೊಸ AC ಹಾಗೂ ಹಳೆಯ ACಗಳಿಗೂ ಅನ್ವಯ ಆಗುತ್ತಿದೆ.

ಸದ್ಯಕ್ಕೆ ದೇಶದಲ್ಲಿ ಬಳಕೆಯಲ್ಲಿರುವ ACಗಳಲ್ಲಿ 18 ಡಿಗ್ರಿ ಸೆ. ನಿಂದ 30 ಡಿಗ್ರಿ ಸೆಲ್ಸಿಯಸ್‌ವರೆಗೂ ಉಷ್ಣಾಂಶ ನಿಗದಿ ಮಾಡಬಹುದಾಗಿದೆ. ಆದರೆ ಇನ್ನುಮುಂದೆ 20 ಡಿಗ್ರಿ ಸೆಲ್ಸಿಯಸ್‌ನಿಂದ 28 ಡಿಗ್ರಿ ಸೆಲ್ಸಿಯಸ್‌ವರೆಗೂ ಮಾತ್ರ ಉಷ್ಣಾಂಶ ನಿಗದಿ ಮಾಡಬೇಕಾಗುವುದು

ಈ ಹೊಸ ರೂಲ್ಸ್ ಅನ್ನು ಸದ್ಯದಲ್ಲೇ ಮನೆ ಹಾಗೂ ವಾಣಿಜ್ಯ ಕಟ್ಟಡಗಳಿಗೆ ಅನ್ವಯವಾಗುವಂತೆ ಜಾರಿಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಹೊಸ ರೂಲ್ಸ್‌ನಲ್ಲಿ ಕಟ್ಟಡಗಳಲ್ಲಿ ಬಳಸುವ ಏರ್ ಕಂಡೀಷನ್ ಮೆಷಿನ್‌ಗಳು 20 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಉಷ್ಣಾಂಶಕ್ಕೆ ಕೂಲ್ ಆಗುವುದಿಲ್ಲ, ಅಲ್ಲದ 28 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ಉಷ್ಣಾಂಶ ಇರದಂತೆ ಮಾಡಲಾಗುತ್ತದೆ. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಖಟ್ಟರ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

AC ಗಳಲ್ಲಿ ಉಷ್ಣಾಂಶವನ್ನು ತೀರಾ ಕಡಿಮೆ ಮಾಡಿದ್ರೆ ಹೆಚ್ಚಿನ ಪ್ರಮಾಣದ ವಿದ್ಯುತ್ ಬಳಕೆಯಾಗುತ್ತದೆ. ದೇಶದಲ್ಲಿ ವಿದ್ಯುತ್ ಬಳಕೆಯ ಮೇಲೆ ನಿಯಂತ್ರಣ ಹಾಗೂ ಎನರ್ಜಿ ಡಿಮ್ಯಾಂಡ್ ಅನ್ನು ನಿರ್ವಹಣೆ ಮಾಡುವ ಉದ್ದೇಶದಿಂದ ACಗಳಿಗೆ ಸ್ಟಾಂಡರ್ಡ್ ಟೆಂಪರೆಚರ್ ನಿಗದಿಪಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಬೇಸಿಗೆಯಲ್ಲಿ ಬಹಳಷ್ಟು ಮಂದಿ ಕಡಿಮೆ ಉಷ್ಣಾಂಶವನ್ನು ಎಸಿಯಲ್ಲಿ ಫಿಕ್ಸ್ ಮಾಡುತ್ತಾರೆ. ಇದರಿಂದ ಹೆಚ್ಚಿನ ವಿದ್ಯುತ್ ಬಳಕೆ ಆಗುತ್ತಿದೆ ಎಂದವರು ಹೇಳಿದ್ದಾರೆ.

ಇಂಧನ, ಹೌಸಿಂಗ್ ಇಲಾಖೆಯ ಅಧಿಕಾರಿ ಒಬ್ಬರು ಮಾತನಾಡಿ ದೇಶದಲ್ಲಿ ಈಗ ಏರ್ ಕಂಡೀಷನ್‌ಗಳು 50ಗಿಗಾ ವ್ಯಾಟ್ ವಿದ್ಯುತ್ ಬಳಸುತ್ತಿವೆ. ಅಂದರೆ ಇದು ದೇಶದ ಒಟ್ಟು ವಿದ್ಯುತ್ ಬೇಡಿಕೆಯ ಶೇ. 20ರಷ್ಟು. ಏರ್ ಕಂಡೀಷನ್ 1% ನಷ್ಟು ಉಷ್ಣಾಂಶ ಜಾಸ್ತಿ ಮಾಡಿದರೆ ಶೇ.6ರಷ್ಟು ಪ್ರಮಾಣದ ವಿದ್ಯುತ್ ಉಳಿತಾಯವಾಗಲಿದೆ ಎಂದು ಅವರು ತಿಳಿಸಿದ್ದಾರೆ. ನಗರ ಪ್ರದೇಶಗಳಲ್ಲಿ ಎಸಿ ಬಳಕೆ ಹೆಚ್ಚಾಗುತ್ತಿದೆ. ಮಾಲಿನ್ಯ ತಡೆಗಟ್ಟುವುದರ ಜತೆಗೆ, ಸುಸ್ಥಿರ ಇಂಧನಕ್ಕಾಗಿ ಈ ಹೊಸ ನಿಯಮ ಜಾರಿಗೆ ತರಲಾಗುತ್ತಿದೆ. ದೇಶದಲ್ಲಿ ACಯ ಹೊಸ ರೂಲ್ಸ್ ಜಾರಿಯಿಂದ ಪವರ್ ಗ್ರಿಡ್ ಮೇಲಿನ ಪ್ರೆಷರ್ ಕೂಡ ಕಡಿಮೆಯಾಗುತ್ತದೆ. ಅಲ್ಲದೆ ವಾರ್ಷಿಕ 18,000 ದಿಂದ 20,000 ಕೋಟಿಯ ತನಕ ಉಳಿತಾಯ ಆಗಲಿದೆ.