Home News World Bamboo day: ಸೆ. 18 ವಿಶ್ವ ಬಿದಿರು ದಿನ: ವಾಣಿಜ್ಯ ಬೆಳೆಯಾಗಿ ಬಿದಿರು

World Bamboo day: ಸೆ. 18 ವಿಶ್ವ ಬಿದಿರು ದಿನ: ವಾಣಿಜ್ಯ ಬೆಳೆಯಾಗಿ ಬಿದಿರು

Hindu neighbor gifts plot of land

Hindu neighbour gifts land to Muslim journalist

World Bamboo day: ಸೆ. 18.. ಈ ದಿನವನ್ನು ಬಿದಿರಿನ(bamboo) ಕುರಿತು ಜಾಗತಿಕವಾಗಿ(Global) ತಿಳಿವಳಿಕೆ ಮೂಡಿಸುವ ದಿನವನ್ನಾಗಿ ಆಚರಿಸಲಾಗುತ್ತಿದೆ.

ಬಿದಿರು ಯಾವುದೇ ಆರೈಕೆಯಿಲ್ಲದೆ ತಾನಾಗಿಯೇ ಬೆಳೆಯುತ್ತದೆ. ಆದ್ದರಿಂದ ನೂರಾರು ಉಪಯೋಗಗಳಿವೆ. ಆದರೆ ಅದನ್ನು ಸೂಕ್ತವಾಗಿ ಬಳಸಿಕೊಳ್ಳುವ ಮಾರ್ಗವನ್ನು ನಾವು ಅರಿತುಕೊಂಡಿಲ್ಲ. ಆರ್ಥಿಕವಾಗಿ(Economical), ಪರಿಸರಕ್ಕೆ(Nature) ಪೂರಕವಾಗಿರುವ ಬಿದಿರನ್ನು ಬಳಸಿಕೊಳ್ಳುವ ಸಾಧ್ಯತೆಗಳ ಬಗ್ಗೆ ದಕ್ಷಿಣ ಏಷ್ಯಾ ಬ್ಯಾಂಬೂ ಫೌಂಡೇಶನ್‌ ಜಾಗೃತಿ ಮೂಡುಸುತ್ತಿದೆ.

ಜಗತ್ತಿನಲ್ಲಿ 550 ಬಿದಿರು ಪ್ರಭೇದಗಳಿವೆ ಎಂದು ಗುರುತಿಸಲಾಗಿದೆ. ಭಾರತದಲ್ಲಿ 126 ಜಾತಿಯ ಬಿದಿರುಗಳನ್ನು ಪತ್ತೆ ಮಾಡಲಾಗಿದೆ. ಆದರೆ ನಮಗೆ 40 ಬಗೆಯ ಬಿದಿರುಗಳು ಮಾತ್ರ ಹೆಚ್ಚಾಗಿ ಕಾಣಸಿಗುತ್ತವೆ.

ಈಶಾನ್ಯ ಭಾರತದಲ್ಲಿ ಹೆಚ್ಚಾಗಿ ಬಿದಿರು ಬೆಳೆಯಲಾಗುತ್ತದೆ. ಅಲ್ಲಿನ ಸರ್ಕಾರಗಳು ಈ ದಿನವನ್ನು ವಿಶೇಷವಾಗಿ ಆಚರಣೆ ಮಾಡುತ್ತವೆ. ಅಸ್ಸಾಂ, ಮಣಿಪುರ, ಮೇಘಾಲಯ ಸರ್ಕಾರಗಳು ಬಿದಿರಿನ ಉತ್ಪನ್ನಗಳ ತಯಾರಿಕೆ, ಮಾರಾಟ ಹಾಗೂ ಮಾರುಕಟ್ಟೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತವೆ.