Home News Chess World Cup 2025: ಮಹಿಳಾ ಚೆಸ್ ವಿಶ್ವಕಪ್ ಫೈನಲ್‌: ಇತಿಹಾಸ ಸೃಷ್ಟಿಸಿದ ದಿವ್ಯಾ ದೇಶಮುಖ್

Chess World Cup 2025: ಮಹಿಳಾ ಚೆಸ್ ವಿಶ್ವಕಪ್ ಫೈನಲ್‌: ಇತಿಹಾಸ ಸೃಷ್ಟಿಸಿದ ದಿವ್ಯಾ ದೇಶಮುಖ್

Hindu neighbor gifts plot of land

Hindu neighbour gifts land to Muslim journalist

Chess World Cup 2025: ಫಿಡೆ ಮಹಿಳಾ ಚೆಸ್ ವಿಶ್ವಕಪ್ 2025(Chess World Cup 2025) ಪಂದ್ಯದಲ್ಲಿ ಗ್ರ್ಯಾಂಡ್ ಮಾಸ್ಟರ್ ಕೊನೆರು ಹಂಪಿ (Koneru Humpy) ಅವರನ್ನ ಯುವ ಪ್ರತಿಭೆ ದಿವ್ಯಾ ದೇಶ್‌ಮುಖ್ (Divya Deshmukh) ಸೋಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಶನಿವಾರ ನಡೆದಿದ್ದ ಜಿದ್ದಾಜಿದ್ದಿ ಆರಂಭಿಕ ಪಂದ್ಯದಲ್ಲಿ 41 ಚಲನೆಗಳ ಬಳಿಕ ಇಬ್ಬರೂ ಆಟವನ್ನು ಡ್ರಾಗೊಳಿಸಿದ್ದರು. ನಂತರ ಭಾನುವಾರ ಸಹ ಟೈ ಆಗಿತ್ತು.

19 ವರ್ಷದ ದಿವ್ಯಾ ದೇಶಮುಖ್, ಭಾರತದ ಮೊದಲ FIDE ಮಹಿಳಾ ಚೆಸ್ ವಿಶ್ವಕಪ್ ಚಾಂಪಿಯನ್ ಆಗುವ ಮೂಲಕ ಇತಿಹಾಸ ಬರೆದಿದ್ದಾರೆ. ಎರಡು ರಾಪಿಡ್ ಟೈಬ್ರೇಕ್‌ಗಳ ಅಗತ್ಯವಿದ್ದ ಫೈನಲ್‌ನಲ್ಲಿ ಅವರು ಕೊನೆರು ಹಂಪಿಯನ್ನು 1.5-0.5 ಅಂತರದಿಂದ ಸೋಲಿಸಿದ್ದಾರೆ. ಮೊದಲ ಟೈಬ್ರೇಕ್ ಡ್ರಾದಲ್ಲಿ ಕೊನೆಗೊಂಡಿತ್ತು, ಆದರೆ ದಿವ್ಯಾ ಎರಡನೇ ಗೇಮ್ ಅನ್ನು 75 ಚಲನೆಗಳಲ್ಲಿ ಕಪ್ಪು ಕಾಯಿಗಳೊಂದಿಗೆ ಗೆದ್ದು ವಿಶ್ವಕಪ್ ಗೆದ್ದಿದ್ದಾರೆ.

ಇದನ್ನೂ ಓದಿ: Sullia: ಸುಳ್ಯ: ರಸ್ತೆ ದಾಟುತ್ತಿದ್ದ ವೇಳೆ ಬೈಕ್‌ ಡಿಕ್ಕಿ ಹೊಡೆದು ಮಹಿಳೆ ಸಾವು!