Home News Elephant Attack: ಅರಣ್ಯ ಇಲಾಖಾ ಸಿಬ್ಬಂದಿಗಳನ್ನೇ ಅಟ್ಟಾಡಿಸಿದ ಕಾಡಾನೆ ಹಿಂಡು

Elephant Attack: ಅರಣ್ಯ ಇಲಾಖಾ ಸಿಬ್ಬಂದಿಗಳನ್ನೇ ಅಟ್ಟಾಡಿಸಿದ ಕಾಡಾನೆ ಹಿಂಡು

Hindu neighbor gifts plot of land

Hindu neighbour gifts land to Muslim journalist

Elephant Attack: ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ ಸಂದರ್ಭ ಮದಗಜಗಳ ಹಿಂಡು ಅರಣ್ಯ ಇಲಾಖೆಯ(Forest Department) ಸಿಬ್ಬಂದಿಗಳನ್ನೇ ಅಟ್ಟಾಡಿಸಿರುವ ಘಟನೆ ವರದಿಯಾಗಿದೆ.

ತಿತಿಮತಿ ವಲಯ ಅರಣ್ಯ ವ್ಯಾಪ್ತಿಯ ಕಾಫಿ ತೋಟವೊಂದರಲ್ಲಿ ಕಾಡಾನೆಗಳನ್ನು ಮರಳಿ ಕಾಡಿಗೆ ಓಡಿಸುವ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭ ಪಲಾಯನಗೈಯುತ್ತಿದ್ದ ಕಾಡಾನೆಗಳ ದಂಡು ಇದ್ದಕ್ಕಿದ್ದಂತೆ ಅರಣ್ಯ ಇಲಾಖೆಯ ಸಿಬ್ಬಂದಿಗಳ ವಿರುದ್ಧ ತಿರುಗಿನಿಂತು ಬೆನ್ನಟ್ಟಿವೆ. ಇದರಿಂದಾಗಿ ಸಿಬ್ಬಂದಿಗಳು ಕಾಫಿ ತೋಟದೊಳಗೆ ಓಡಿ ಜೀವ ಉಳಿಸಿಕೊಂಡಿದ್ದಾರೆ. ನಂತರ ಆನೆಗಳು ಕಾಡಿನ ಕಡೆ ಪಯಣ ಬೆಳಸಿದ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿಗಳು ನಿಟ್ಟುಸಿರು ಬಿಟ್ಟರು.