Home News Viral Video : ಸೂಪರ್ ಮಾರ್ಕೆಟ್ ಗೆ ನುಗ್ಗಿ ಶಾಪಿಂಗ್ ಮಾಡಿದ ಕಾಡಾನೆ !! ವಿಡಿಯೋ...

Viral Video : ಸೂಪರ್ ಮಾರ್ಕೆಟ್ ಗೆ ನುಗ್ಗಿ ಶಾಪಿಂಗ್ ಮಾಡಿದ ಕಾಡಾನೆ !! ವಿಡಿಯೋ ವೈರಲ್

Hindu neighbor gifts plot of land

Hindu neighbour gifts land to Muslim journalist

Viral Video : ಹಸಿದ ಆನೆಯೊಂದು ಥೈಲ್ಯಾಂಡ್‌ನ ಸೂಪರ್‌ ಮಾರ್ಕೆಟ್‌ಗೆ ನುಗ್ಗಿ, ಯಾರಿಗೂ ಏನನ್ನೂ ಹೇಳದೆ, ಮಾಡದೇ ತನಗೆ ಬೇಕಾದುದನ್ನು ತಿಂದು ತನ್ನಷ್ಟಕ್ಕೆ ತಾನೇ ಹೊರಟುಹೋದ ಅಪರೂಪದ ಘಟನೆಯೊಂದು ನಡೆದಿದ್ದು ಈ ಘಟನೆಯ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

 

ಹೌದು, ಒಂದು ದೊಡ್ಡ ಆನೆ, ಸೂಪರ್ ಮಾರ್ಕೆಟ್ ಒಳಗೆ ನುಗ್ಗಿದಾಗ ಗ್ರಾಹಕರು ಮತ್ತು ಅಂಗಡಿ ಮಾಲೀಕರು ಆಘಾತಕ್ಕೊಳಗಾದರು. ಆನೆ ತಮ್ಮ ಮೇಲೆ ದಾಳಿ ಮಾಡುತ್ತದೆ ಎಂದು ಭಯಭೀತರಾಗಿದ್ದರು. ಆನೆಯನ್ನು ನೋಡಿದ ಕೆಲವರು ಜೀವ ಭಯದಿಂದ ಓಡಿಹೋದರು. ಆದರೆ, ಆನೆ ಯಾರಿಗೂ ಹಾನಿ ಮಾಡಲಿಲ್ಲ. ಅದು ತನ್ನ ಹಸಿವನ್ನು ನೀಗಿಸಿಕೊಂಡು ಅಲ್ಲಿಂದ ಮೌನವಾಗಿ ಹಿಂತಿರುಗಿತು.

https://x.com/AP/status/1930260551067656651?t=DAGYqNFCPyONu2d_gJUWvg&s=19

ಇಲ್ಲಿ ಗಮನಾರ್ಹ ಸಂಗತಿ ಏನೆಂದರೆ, ಸೂಪರ್​ ಮಾರ್ಕೆಟ್​ನಲ್ಲಿ ಹಲವು ರೀತಿಯ ಆಹಾರ ಪದಾರ್ಥಗಳಿದ್ದರೂ ಗಜರಾಜ ತನಗೆ ಬೇಕಾದನ್ನು ಮಾತ್ರ ತಿಂದನು. ಅದರ ಮುಂದೆ ಹಲವು ರೀತಿಯ ಆಹಾರಗಳಿದ್ದರೂ, ಅದು ಫ್ರಿಡ್ಜ್ ಅನ್ನು ಪಕ್ಕಕ್ಕೆ ತಳ್ಳಿ ತುಂಬಾ ಸಿಹಿತಿಂಡಿಗಳಿದ್ದ ಸ್ಥಳಕ್ಕೆ ಹೋಗಿ ನಿಧಾನವಾಗಿ ಪ್ರತಿಯೊಂದು ಸಿಹಿ ಪ್ಯಾಕೆಟ್ ಅನ್ನು ತಿನ್ನುತ್ತಿತ್ತು. ನಂತರ ಅದು ಬಾಳೆಹಣ್ಣುಗಳನ್ನು ತಿಂದು ಹೊರಟು ಹೋಗಿದೆ.

 

ಅಂಗಡಿಯ ಮಾಲೀಕ ಬಿಯಾಂಗ್ ಲೆಕ್, ಆ ಆನೆ ತನ್ನ ಅಂಗಡಿಯ ಬಳಿ ಹಲವು ಬಾರಿ ಹಾದು ಹೋಗಿದೆ, ಆದರೆ ಈ ರೀತಿ ಎಂದಿಗೂ ‘ಶಾಪಿಂಗ್’ ಮಾಡಿಲ್ಲ. ಆನೆ ಶಾಪಿಂಗ್ ಮಾಡಿ ಬಿಲ್ ಪಾವತಿಸದೆ ಹೊರಟು ಹೋಗಿದೆ ಎಂದು ತಿಳಿದ ನಂತರ ವನ್ಯಜೀವಿ ಸಂರಕ್ಷಣಾ ಪ್ರತಿನಿಧಿಗಳು ತನಗೆ 800 ಥಾಯ್ ಬಹ್ತ್ ಪಾವತಿಸಿದ್ದಾರೆ ಎಂದು ಅವರು ನಕ್ಕಿದ್ದಾರೆ.