Home News Viral Video : ಲವರ್ ಜೊತೆಗಿನ ಖಾಸಗಿ ವಿಡಿಯೋವನ್ನು ಗಂಡನಿಗೆ ಕಳಿಸಿದ ಪತ್ನಿ – ಅತ್ತು,...

Viral Video : ಲವರ್ ಜೊತೆಗಿನ ಖಾಸಗಿ ವಿಡಿಯೋವನ್ನು ಗಂಡನಿಗೆ ಕಳಿಸಿದ ಪತ್ನಿ – ಅತ್ತು, ಗೋಳಾಡಿ ಪ್ರಾಣಬಿಟ್ಟ ಗಂಡ!!

Hindu neighbor gifts plot of land

Hindu neighbour gifts land to Muslim journalist

Viral Video : ಪತ್ನಿಯೊಬ್ಬಳು ತಾನು ತನ್ನ ಗೆಳೆಯನೊಂದಿಗೆ ಇರುವ ಖಾಸಗಿ ಕ್ಷಣದ ವಿಡಿಯೋವನ್ನು ತನ್ನ ಗಂಡನಿಗೆ ಕಳುಹಿಸಿದ ಕಾರಣ ಮನನೊಂದು ಆತ ಅತ್ತು ಗೋಳಾಡಿ ಪ್ರಾಣ ಬಿಟ್ಟಂತಹ ಮನಮಿಡಿಯುವ ಘಟನೆಯೊಂದು ನಡೆದಿದೆ.

ಮಗನ್ ಎಂಬಾತ ಆತ್ಮಹತ್ಯೆಗೊಳಗಾದ ವ್ಯಕ್ತಿ. ಈತ ಆತ್ಮಹ*ತ್ಯೆಗೆ ಮಾಡಿಕೊಳ್ಳುವ ಮುನ್ನ ಮಗನ್ ವಿಡಿಯೋ ಮಾಡಿದ್ದು, ಸಾವಿಗೆ ಪತ್ನಿ ದಿವ್ಯಾ ಮತ್ತು ಆಕೆಯ ಪ್ರಿಯಕರ ದೀಪಕ್ ಕಾರಣ ಎಂದು ಹೇಳಿದ್ದಾರೆ. ಇಬ್ಬರು ಜೊತೆಯಾಗಿ ತಮಗೆ ಹೇಗೆ ಕಿರುಕುಳ ನೀಡಿದ್ದಾರೆ ಎಂಬುದನ್ನು ಮಗನ್ ಎಳೆ ಎಳೆಯಾಗಿ ವಿವರಿಸುತ್ತಾ ಕಣ್ಣೀರು ಹಾಕಿದ್ದಾರೆ.

ವಿಡೀಯೋದಲ್ಲಿ ನನ್ನ ಹೆಸರು ಮಗನ್, ಪತ್ನಿ ದಿವ್ಯಾ ಮತ್ತು  ಆಕೆಯ ಪ್ರಿಯಕರ್ ದೀಪಕ್‌ ಕಿರುಕುಳದಿಂದ ನಾನು ಆತ್ಮಹ*ತ್ಯೆ ಮಾಡಿಕೊಳ್ಳುತ್ತಿದ್ದೇನೆ. ಪತ್ನಿಯ ಪ್ರಿಯಕರ ದೀಪಕ್ ಸಂಭಾಜಿ ನಗರದ ನಿವಾಸಿಯಾಗಿದ್ದು, ಪೊಲೀಸ್ ಸೇವೆಯಲ್ಲಿದ್ದಾನೆ. ಇವರಿಬ್ಬರು ಜೊತೆಯಾಗಿ ನನಗೆ ಕಿರುಕುಳ ನೀಡುತ್ತಿದ್ದಾರೆ. ನನಗೆ ಮೋಸವಾಗಿದ್ದು, ಹಣವನ್ನು ಸಹ ಪಡೆದುಕೊಂಡಿದ್ದಾರೆ. ನನಗೆ ಹಣ ನೀಡುವಂತೆ ಪದೇ ಪದೇ ಒತ್ತಡ ಹಾಕುತ್ತಾರೆ. ಈಗ ದೀಪಕ್‌ಗೆ ಉದ್ಯೋಗದಲ್ಲಿ ಬಡ್ತಿ ಸಿಗಲು ಲಂಚ ಕೊಡಬೇಕಿದೆ. ಅದಕ್ಕಾಗಿ ತಂದೆಯನ್ನು ಕೊ*ಲ್ಲು ಮತ್ತು ಪೂರ್ವಜರಿಂದ ಬಂದಿರುವ ಜಮೀನು ಮಾರಾಟ ಮಾಡಿ ಹಣ ನೀಡುವಂತೆ ಹೇಳುತ್ತಿದ್ದಾರೆ.

ಪತ್ನಿ ದಿವ್ಯಾ ವಿಡಿಯೋ ಕಳುಹಿಸಿದ್ದು, ಇದರಲ್ಲಿ ಆಕೆ ದೀಪಕ್ ಮುಂದೆ ಡ್ಯಾನ್ಸ್ ಮಾಡುತ್ತಿದ್ದಾಳೆ. ದಿವ್ಯಾ ಮತ್ತು ದೀಪಕ್ ಆಕ್ಷೇಪಾರ್ಹ ಸ್ಥಿತಿಯಲ್ಲಿರುವ ವಿಡಿಯೋ ಇದಾಗಿದೆ. ಈ ವಿಡಿಯೋ ನನ್ನನ್ನು ತುಂಬಾ ಡಿಸ್ಟರ್ಬ್ ಮಾಡಿದೆ. ಇದರಿಂದಾಗಿ ನಾನು ಮಾನಸಿಕವಾಗಿ ಕುಸಿದಿದ್ದೇನೆ. ಈಗಾಗಲೇ ದೀಪಕ್ ಬಡ್ತಿಗಾಗಿ 3.5 ಲಕ್ಷ ರೂ. ನೀಡಿದ್ದೇನೆ. ಇದೀಗ ಮತ್ತೆ 1.5 ಲಕ್ಷ ರೂ. ನೀಡುವಂತೆ ಹೇಳುತ್ತಿದ್ದಾರೆ. ತನ್ನನ್ನು ಮದುವೆಯಾಗುವ ಮುಂಚೆಯೇ ದಿವ್ಯಾಳಿಗಹೆ ಮದುವೆಯಾಗಿತ್ತು. ನಂತರ ಈ ಪ್ರಕರಣವನ್ನು ಹಣವನ್ನು ನೀಡಿ ಇತ್ಯರ್ಥ ಮಾಡಿಕೊಂಡಿದ್ದೇನೆ. ನನ್ನ ಸಾವಿಗೆ ಇವರಿಬ್ಬರು ಕಾರಣ. ಹಾಗಾಗಿ ಇವರಿಬ್ಬರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: Shriram: ಡ್ರಗ್ಸ್‌ ಪ್ರಕರಣ: ಜನಪ್ರಿಯ ನಟ ಶ್ರೀರಾಮ್ ಬಂಧನ! ಇನ್ನೊಬ್ಬ ನಟನಿಗೆ ಹುಡುಕಾಟ!