Home News Hot water: ಕುದಿಸಿದ ನೀರು ಸಪ್ಪೆ ಏಕೆ ಅನಿಸುತ್ತದೆ? ಕಾರಣ ಏನು?

Hot water: ಕುದಿಸಿದ ನೀರು ಸಪ್ಪೆ ಏಕೆ ಅನಿಸುತ್ತದೆ? ಕಾರಣ ಏನು?

Hindu neighbor gifts plot of land

Hindu neighbour gifts land to Muslim journalist

Hot water: ಜ್ವರ, ನೆಗಡಿ, ಕೆಮ್ಮು, ಹೊಟ್ಟೆನೋವು ಇತ್ಯಾದಿ ಸಮಸ್ಯೆಗಳು ಇದ್ದಾಗ ನೀವು ಕುದಿಸಿ ತಣ್ಣಗಾದ ಉಗುರುಬೆಚ್ಚನೆಯ ನೀರನ್ನು ಕುಡಿದಿರಬಹುದು ಮತ್ತು ಈ ನೀರಿಗೆ ರುಚಿಯೇ ಇಲ್ಲ ಎಂದು ನೀವು ಸಪ್ಪೆ ಮುಖ ಮಾಡಿರಬಹುದು. ಇದು ಹೀಗೆ ಏಕೆ ಆಗುತ್ತದೆ? ಕುದಿಸಿದ ನೀರಿನ ರುಚಿ ಬದಲಾಗಲು ಕಾರಣವೇನು?

ನೀರಿನಲ್ಲಿ ಕರಗಿರುವ ಸಾರಜನಕ ಮತ್ತು ಲವಣಗಳಿಂದಾಗಿ ನೀರು ತನ್ನ ರುಚಿಯನ್ನು ಹೊಂದಿರುತ್ತದೆ. ಆದ್ದರಿಂದ, ನಲ್ಲಿ ನೀರಿನ ರುಚಿ, ಬಾವಿ ನೀರಿನ ರುಚಿ ಅಥವಾ ನದಿಗಳು, ಸರೋವರಗಳು, ಬುಗ್ಗೆಗಳು, ಸಮುದ್ರದ ನೀರಿನ ರುಚಿ ವಿಭಿನ್ನವಾಗಿದೆ. ನೀರನ್ನು ಬಿಸಿ ಮಾಡುವುದರಿಂದ ಕರಗಿದ ಅನಿಲಗಳು ವಾತಾವರಣಕ್ಕೆ ಮತ್ತು ಲವಣಗಳು ತಳಕ್ಕೆ ಸೇರಿಕೊಳ್ಳುತ್ತವೆ. ಈ ರೀತಿಯಾಗಿ, ನೀರಿಗೆ ರುಚಿ ನೀಡುವ ಅಂಶಗಳೆರಡೂ ಕಳೆದುಹೋಗುತ್ತವೆ ಮತ್ತು ನೀರು ಸಪ್ಪೆಯಾಗುತ್ತದೆ. ಶುದ್ಧ H2O ತುಂಬಾ ಸಪ್ಪೆಯಾಗಿರುತ್ತದೆ. ಅದನ್ನು ಕುಡಿಯಲು ಯಾರೂ ಇಷ್ಟಪಡುವುದಿಲ್ಲ.

ಆದರೆ, ಆಗಾಗ್ಗೆ ಭೇದಿಯಿಂದ ಬಳಲುತ್ತಿರುವವರು ಕುದಿಸಿ ತಣ್ಣಗಾದ ನೀರನ್ನೇ ಕುಡಿಯಬೇಕು. ಇದರಿಂದ ಸೋಂಕು ಉಂಟುಮಾಡುವ ಸೂಕ್ಷ್ಮಣಗಳು ನಿಮ್ಮ ದೇಹವನ್ನು ಬಾಧಿಸುವುದಿಲ್ಲ. ಅಂದರೆ, ನೀವು ಭೇದಿಯಿಂದ ಬಳಲುವ ಪ್ರಮಾಣ ಕಡಿಮೆಯಾಗುತ್ತದೆ. ಅತಿಸಾರದಿಂದ ಬಳಲುತ್ತಿರುವವರು ಕೂಡ ಕುದಿಸಿದ ನೀರನ್ನು ಸೇವಿಸಬೇಕು. ರುಚಿಗಿಂತ ಸುರಕ್ಷಿತತೆ ಮುಖ್ಯ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು.

ಸಂಗ್ರಹ ಮತ್ತು ಸಂಪಾದನೆ: ಡಾ. ಪ್ರ. ಅ. ಕುಲಕರ್ಣಿ

ಇದನ್ನೂ ಓದಿ: Weather Report: ಕರ್ನಾಟಕದ ಹವಾಮಾನ ವರದಿ : ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆ