Home News Ranya Rao: ನಟಿ ರನ್ಯಾ ಮಲತಂದೆ ಯಾರು?

Ranya Rao: ನಟಿ ರನ್ಯಾ ಮಲತಂದೆ ಯಾರು?

Hindu neighbor gifts plot of land

Hindu neighbour gifts land to Muslim journalist

Ranya Rao: ಚಿನ್ನ ಕಳ್ಳಸಾಗಣಿಕೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟಿ ರನ್ಯಾ ಮೇಲೆ 14.20 ಕೆಜಿ ಚಿನ್ನ ಕಳ್ಳಸಾಗಣೆ ಆರೋಪವಿದೆ. ಎರಡು ವಾರಗಳ ಮುನ್ನ ಕೂಡಾ ದುಬೈಗೆ ಹೋಗಿದ್ದ ನಟಿ ರನ್ಯಾ ರಾವ್‌ ತಪಾಸಣೆ ಸಂದರ್ಭ ವಿಮಾನ ನಿಲ್ದಾಣ ಕಸ್ಟಮ್ಸ್‌ ಅಧಿಕಾರಿಗಳ ಜೊತೆ ಜಗಳ ಮಾಡಿಕೊಂಡಿದ್ದರು. ತಾನು ಡಿಜಿಪಿ ಪುತ್ರಿ ಎಂದು ಹೇಳಿ ವಿಮಾನ ನಿಲ್ದಾಣದಲ್ಲಿ ತಪಾಸಣೆಗೆ ಒಳಗಾಗುತ್ತಿರಲಿಲ್ಲ. ಹಾಗಾಗಿ ಸುಲಭವಾಗಿ ಹೊರಗೆ ಬರುತ್ತಿದ್ದರು.

ರನ್ಯಾ ರಾವ್‌ ತಂದೆ ಡಿಜಿಪಿ ಕೆ.ರಾಮಚಂದ್ರ ರಾವ್.‌ ಮೂಲತಃ ಇವರು ಆಂಧ್ರಪ್ರದೇಶದವರು. ಡಿಜಿಪಿ ಕೆ.ರಾಮಚಂರ ರಾವ್‌ ಚಿಕ್ಕಮಗಳೂರು ಜಿಲ್ಲೆ ಕಾಫಿ ಪ್ಲಾಂಟರ್‌ ಮಾಲಕಿಯ ಜೊತೆ ಎರಡನೇ ವಿವಾಹವಾಗಿದ್ದರು. ರನ್ಯಾ ಡಿಜಿಪಿ ಕೆ. ರಾಮಚಂದ್ರ ರಾವ್‌ ಅವರ ಮಲ ಮಗಳು.

ಕರ್ನಾಟಕ ಕೇಡರ್‌ನ ಐಪಿಎಸ್‌ ಹುದ್ದೆಯಲ್ಲಿದ್ದಾರೆ ಕೆ.ರಾಮಚಂದ್ರ ರಾವ್‌. 2014 ರಲ್ಲಿ ದಕ್ಷಿಣ ವಲಯದ ಐಜಿಪಿಯಾಗಿದ್ದ ಸಮಯದಲ್ಲಿ ಜಪ್ತಿ ಮಾಡಲಾಗಿದ್ದ 2.20 ಕೋಟಿ ರೂ. ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದ ಆರೋಪವೊಂದು ಕೇಳಿಬಂದಿತ್ತು. ಈ ಕಾರಣದಿಂದ ರಾಮಚಂರ ರಾವ್‌ ಅವರನ್ನು ವರ್ಗಾವಣೆ ಮಾಡಲಾಗಿತ್ತು ಎಂದು ಮಾಧ್ಯಮ ಪ್ರಕಟ ಮಾಡಿದೆ. ಆದರೆ ಈ ಪ್ರಕರಣ ಸಿಐಡಿ ತನಿಖೆಯಲ್ಲಿ ಸಾಬೀತಾಗಲಿಲ್ಲ. ಈ ಪ್ರಕರಣ ನ್ಯಾಯಾಲಯದಲ್ಲಿ ವಜಾಗೊಂಡಿತ್ತು.