Home News ATM ಗೆ ಹೋದಾಗ 2 ಸಲ ಕ್ಯಾನ್ಸಲ್ ಬಟನ್ ಒತ್ತಿದ್ರೆ ಏನಾಗುತ್ತೆ? ಇದುವರೆಗೂ ಯಾರಿಗೂ ಗೊತ್ತಿಲ್ಲ...

ATM ಗೆ ಹೋದಾಗ 2 ಸಲ ಕ್ಯಾನ್ಸಲ್ ಬಟನ್ ಒತ್ತಿದ್ರೆ ಏನಾಗುತ್ತೆ? ಇದುವರೆಗೂ ಯಾರಿಗೂ ಗೊತ್ತಿಲ್ಲ ಈ ವಿಚಾರ

Hindu neighbor gifts plot of land

Hindu neighbour gifts land to Muslim journalist

ATM ಗೆ ಹಣ ಬಿಡಿಸಲು ಹೋದಾಗ ನೀವು ಎರಡೆರಡು ಬಾರಿ ಕ್ಯಾನ್ಸಲ್ ಬಟನ್ ಒತ್ತಿದರೆ ಏನಾಗುತ್ತದೆ ಗೊತ್ತಿದೆಯಾ? ಇದುವರೆಗೂ ಯಾರಿಗೂ ಗೊತ್ತಿಲ್ಲದ ವಿಚಾರ ಇಲ್ಲಿದೆ ನೋಡಿ.

ಇತ್ತೀಚಿಗೆ ಕೆಲವು ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ನೀವು ಎಟಿಎಂಗೆ ಹೋಗಿ ಕಾರ್ಡ್ ಹಾಕಿ, ಪಿನ್ ನಂಬರ್ ಎಂಟರ್ ಮಾಡೋಕು ಮುಂಚೆ, ಅಲ್ಲಿರೋ Cancel ಬಟನ್‌ ಅನ್ನು ಎರಡು ಸಲ ಪ್ರೆಸ್ ಮಾಡಬೇಕು. ಒಂದು ವೇಳೆ ನೀವು ಈ ತರ ಮಾಡಿದರೆ ಕಳ್ಳರು ಏನಾದ್ರೂ ನಿಮ್ಮ ಪಿನ್ ಕದಿಯೋಕೆ ಸ್ಕಿಮ್ಮಿಂಗ್ ಮಷಿನ್ ಇಟ್ಟಿದ್ರೆ, ಅದು ಕೆಲಸ ಮಾಡಲ್ಲ, ಅಲ್ಲದೇ ಇದರಿಂದ ನೀವು ಹ್ಯಾಕರ್ ಗಳಿಂದ ತಪ್ಪಿಸಿಕೊಳ್ಳಬಹುದು ಎಂಬ ಸಂದೇಶ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಅಸಲಿಗೆ ಇದು ಸುಳ್ಳು.. ಎಟಿಎಂ ನಲ್ಲಿ ಹಣ ತೆಗೆಯುವಾಗ ಅಥವಾ ಹಣ ಎಷ್ಟಿದೆ ಎಂದು ಚೆಕ್ ಮಾಡುವ ಮುನ್ನ cancel ಎಂಬ ಬಟನ್ ಅನ್ನು ಎರಡು ಬಾರಿಯಲ್ಲ ಬದಲಿಗೆ 10 ಬಾರಿ ಒತ್ತಿದರೂ ಕೂಡ ಯಾವುದೇ ಪ್ರಯೋಜನವಿಲ್ಲ.. ಈ ಬಗ್ಗೆ ಸ್ವತಃ ಆರ್ ಬಿಐ ನೇ ಸ್ಪಷ್ಟಪಡಿಸಿದೆ. ಅಲ್ಲದೇ ಸರ್ಕಾರದ ಸತ್ಯಶೋಧನಾ ವಿಭಾಗ ಕೂಡ ತಮ್ಮ ಸೋಶಿಯಲ್ ಮೀಡಿಯಾ ಎಕ್ಸ್ ನಲ್ಲಿ ಇದೆಲ್ಲಾ ಸುಳ್ಳು, ಇಂತಹ ಮೆಸೇಜ್ ನಂಬಬೇಡಿ ಎಂದು ಪೋಸ್ಟ್‌ ಮಾಡಿಕೊಂಡಿದೆ.

ಎಟಿಎಂ ನಲ್ಲಿ cancel ಬಟನ್ ಯಾಕೆ ಇರುತ್ತೆ.?
ಎಟಿಎಂನಲ್ಲಿ Cancel ಬಟನ್‌ನ ಕೆಲಸ ಒಂದೇ ತಪ್ಪಾದ ಆಯ್ಕೆ ಅಥವಾ ಬೇಡವಾದ ವಹಿವಾಟನ್ನು ನಿಲ್ಲಿಸುವುದು. ಪಿನ್ ಕಳುವು, ಹ್ಯಾಕಿಂಗ್‌ ಅಥವಾ ಸ್ಕಿಮ್ಮಿಂಗ್‌ಗೆ ಇದಕ್ಕೆ ಯಾವುದೇ ಸಂಬಂಧ ಇಲ್ಲ. ಆರ್‌ಬಿಐ ಕೂಡ ಈ ಬಗ್ಗೆ ಯಾವ ಸೂಚನೆಯನ್ನೂ ನೀಡಿಲ್ಲ