Home News Vastu Tips: ನಿಮ್ಮ ಅಂಗೈಯಲ್ಲಿ ಈ M ಚಿಹ್ನೆ ಇದ್ದರೆ ಏನಾಗುತ್ತದೆ!? ಇಲ್ಲಿದೆ ನೋಡಿ ಆಶ್ಚರ್ಯಕರ...

Vastu Tips: ನಿಮ್ಮ ಅಂಗೈಯಲ್ಲಿ ಈ M ಚಿಹ್ನೆ ಇದ್ದರೆ ಏನಾಗುತ್ತದೆ!? ಇಲ್ಲಿದೆ ನೋಡಿ ಆಶ್ಚರ್ಯಕರ ಸಂಗತಿ

Hindu neighbor gifts plot of land

Hindu neighbour gifts land to Muslim journalist

Vastu Tips: ಜ್ಯೋತಿಷ್ಯದಲ್ಲಿ ಅನೇಕ ಬಗೆಗಳಿರುವುದು ಎಲ್ಲರಿಗೂ ತಿಳಿದಿದೆ. ಅವುಗಳಲ್ಲಿ ಹಸ್ತಸಾಮುದ್ರಿಕ ಶಾಸ್ತ್ರವೂ ಒಂದು. ಕೆಲ ಜ್ಯೋತಿಷಿಗಳು ಕೈಯಲ್ಲಿರುವ ರೇಖೆಗಳನ್ನು ನೋಡಿಯೇ ಜಾತಕವನ್ನು ಹೇಳುತ್ತಾರೆ. ಹಸ್ತಸಾಮುದ್ರಿಕ ಶಾಸ್ತ್ರವು(Vastu Tips) ಹಸ್ತ ರೇಖೆಗಳು ಮತ್ತು ಬೆರಳುಗಳನ್ನು ನೋಡುವ ಮೂಲಕ ಭವಿಷ್ಯವನ್ನು ಮುನ್ಸೂಚಿಸುವ ಪ್ರಾಚೀನ ಅಭ್ಯಾಸವಾಗಿದೆ. ಅವುಗಳ ಆಕಾರ, ಉದ್ದ ಇತ್ಯಾದಿಗಳನ್ನು ನೋಡಿ ಭವಿಷ್ಯವನ್ನು ಊಹಿಸಬಹುದು. ಹಿಂದೂ ಜ್ಯೋತಿಷ್ಯ ಶಾಸ್ತ್ರದಲ್ಲಿ, ವಿವಿಧ ಅಂಗೈ ರೇಖೆಗಳು ಮತ್ತು ಬೆರಳುಗಳು ಮತ್ತು ಅಂಗೈ ವೈಶಿಷ್ಟ್ಯಗಳ ಮೂಲಕ ಮದುವೆ, ಸಂತತಿ, ವೃತ್ತಿ, ಆರೋಗ್ಯ, ಯಶಸ್ಸು ಇತ್ಯಾದಿಗಳಂತಹ ಜೀವನದಲ್ಲಿ ಕೆಲವು ಘಟನೆಗಳ ಬಗ್ಗೆ ತಿಳಿದುಕೊಳ್ಳಬಹುದು.

ಹಾಗೆಯೇ ಕೈಗಳಲ್ಲಿ ಹಲವು ಗೆರೆಗಳು ಅಥವಾ ಗೀರುಗಳಿವೆ. ಆ ಗೆರೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಕೆಲವರಿಗೆ ಅಂಗೈ ಮಧ್ಯದಲ್ಲಿ ಆಂಗ್ಲ ಅಕ್ಷರ ‘M’ ಆಕಾರದಲ್ಲಿ ಗುರುತು ಕಾಣಿಸುತ್ತದೆ. ನಿಮ್ಮ ಕೈಯಲ್ಲಿ ಈ ಗುರುತು ಇದೆಯಾ ಒಮ್ಮೆ ಚೆಕ್‌ ಮಾಡಿಕೊಳ್ಳಿ. ಅಂಗೈಯಲ್ಲಿ ಈ M ಚಿಹ್ನೆ ಇದ್ದರೆ ಏನಾಗುತ್ತದೆ ಎಂಬುದನ್ನು ನಾವೀಗ ತಿಳಿಯೋಣ.

ಈ M ಚಿಹ್ನೆಯು ಲೈಫ್ ಲೈನ್, ಹೆಡ್ ಲೈನ್ ಮತ್ತು ಹಾರ್ಟ್ ಲೈನ್‌ನಿಂದ ರೂಪುಗೊಂಡಿದೆ. ಅಂಗೈಯಲ್ಲಿರುವ M ಚಿಹ್ನೆಯು ಹಣ ಮತ್ತು ಪ್ರೀತಿಯ ಅದೃಷ್ಟವನ್ನು ಪ್ರತಿನಿಧಿಸುತ್ತದೆ. ಅಂದರೆ ಅಂಗೈಯಲ್ಲಿ M ನ ಗುರುತಿರುವ ವ್ಯಕ್ತಿ ಜೀವನ ಸಂಗಾತಿಯ ವಿಷಯದಲ್ಲಿಯೂ ಅದೃಷ್ಟವಂತನನ್ನಾಗಿರುತ್ತಾನೆ. ವ್ಯಕ್ತಿಯ ಜೀವನ ಸಂಗಾತಿಯು ಆತನನ್ನು ಬಹಳ ಪ್ರೀತಿಸುತ್ತಾರೆ.

ಕೈಯಲ್ಲಿ M ಚಿಹ್ನೆಯಿರುವಂಥಹ ವ್ಯಕ್ತಿ ಯಾವುದೇ ರೀತಿಯ ಸವಾಲುಗಳಿಗೆ ಹೆದರುವುದಿಲ್ಲ. ಎಂಥಹ ಪರಿಸ್ಥಿತಿಯೇ ಎದುರಾದರೂ ಧೈರ್ಯದಿಂದ ಎದುರಿಸುತ್ತಾನೆ. ಎದುರಾಗುವ ಕಠಿಣ ಪರಿಸ್ಥಿತಿಯನ್ನು ಎದುರಿಸಿ ಜಯಶೀಲನಾಗುತ್ತಾನೆ.

ಅಂಗೈಯಲ್ಲಿ M ಚಿಹ್ನೆ ಇದ್ದರೆ, ವ್ಯಕ್ತಿಯು ಹುಟ್ಟಿನಿಂದಲೇ ನಾಯಕನ ಗುಣಗಳನ್ನು ಹೊಂದಿರುತ್ತಾನೆ ಎಂದು ಹೇಳಲಾಗುತ್ತದೆ. ಜೀವನದಲ್ಲಿ ಜವಾಬ್ದಾರಿಯುತ ಸ್ಥಾನಕ್ಕೆ ಏರುತ್ತಾನೆ. ಈ ಜನರು ಹೆಚ್ಚಾಗಿ ಯಶಸ್ಸನ್ನು ಸಾಧಿಸುತ್ತಾರೆ ಮತ್ತು ಮನ್ನಣೆಯನ್ನೂ ಗಳಿಸುತ್ತಾರೆ. 40 ವರ್ಷಗಳಲ್ಲಿ ಖ್ಯಾತಿ ಮತ್ತು ಹಣವನ್ನು ಪಡೆಯುತ್ತಾರೆ ಎಂದು ಕೂಡಾ ಹೇಳಲಾಗುತ್ತದೆ.

ನಿಮ್ಮ ಹಸ್ತದಲ್ಲಿ M ಗುರುತು ಇದ್ದು, ಇತರ ಗ್ರಹಗಳು ಕೂಡಾ ಉತ್ತಮ ಸ್ಥಾನದಲ್ಲಿದ್ದರೆ, ಆ ವ್ಯಕ್ತಿ ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೇರುವ ಸಾಧ್ಯತೆ ಇದೆ.

ಕೈಯಲ್ಲಿ ಈ ಚಿಹ್ನೆ ಉಳ್ಳವರು ಉತ್ಸಾಹಿ, ಸಹಾನುಭೂತಿ, ಸೃಜನಶೀಲರು ಮತ್ತು ಇತರರು ನಿರ್ಲಕ್ಷಿಸುವ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮುಂಚೂಣಿಯಲ್ಲಿರುತ್ತಾರೆ. ಅವರು ಉತ್ತಮ ಬರಹಗಾರರು, ಚಿಂತಕರು, ಕಲಾವಿದರು, ಭಾಷಣಕಾರರಾಗಿ ಹೊರ ಹೊಮ್ಮುತ್ತಾರೆ ಎಂಬುದಾಗಿದೆ.