Home News Yogi Adithyanath: ಭವಿಷ್ಯದ ಪ್ರಧಾನಿಯಾಗುವ ಕುರಿತು ಯೋಗಿ ಆದಿತ್ಯನಾಥ್ ಹೇಳಿದ್ದೇನು?

Yogi Adithyanath: ಭವಿಷ್ಯದ ಪ್ರಧಾನಿಯಾಗುವ ಕುರಿತು ಯೋಗಿ ಆದಿತ್ಯನಾಥ್ ಹೇಳಿದ್ದೇನು?

Hindu neighbor gifts plot of land

Hindu neighbour gifts land to Muslim journalist

Yogi Adithyanath: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭವಿಷ್ಯದ ಪ್ರಧಾನಿ ಎಂದು ಹೇಳಲಾಗುತ್ತಿದೆ. ಯೋಗಿ ಅವರೇ ನರೇಂದ್ರ ಮೋದಿ ಅವರ ಉತ್ತರಾಧಿಕಾರಿ ಎಂದು ಬಿಂಬಿಸಲಾಗುತ್ತಿದೆ. ಆದರೆ ಇದೀಗ ಸಿಎಂ ಯೋಗಿ ಆದಿತ್ಯನಾಥ ಅವರು ಈ ಕುರಿತಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಹೌದು, ಸಂದರ್ಶನ ಒಂದರಲ್ಲಿ ನೀವು ಭವಿಷ್ಯದ ಪ್ರಧಾನಿಯಾಗುವ ಕುರಿತು ಚರ್ಚೆಯಾಗುತ್ತಿದೆ ಎಂಬ ಪ್ರಶ್ನೆ ಎದುರಾದಾಗ ಆದಿತ್ಯನಾಥ್ ಅವರು, “ರಾಜಕೀಯವು ನನಗೆ ಪೂರ್ಣ ಸಮಯದ ಕೆಲಸವಲ್ಲ. ಕೊನೆಗೆ, ನಾನು ಹೃದಯದಲ್ಲಿ ಯೋಗಿ (ಸನ್ಯಾಸಿ) ಆಗಿದ್ದೇನೆ. ಎಂದು ಹೇಳಿದ್ದಾರೆ. ಅಲ್ಲದೆ ರಾಜಕೀಯದಲ್ಲಿ ಎಷ್ಟು ಕಾಲ ಉಳಿಯುವ ಯೋಜನೆ ಇದೆ ಎಂದು ಕೇಳಿದಾಗ, “ಇದಕ್ಕೂ ಒಂದು ಸಮಯ ಮಿತಿ ಇರುತ್ತದೆ” ಎಂದು ಅವರು ಉತ್ತರಿಸಿದ್ದಾರೆ.

ಅಲ್ಲದೆ ತಮ್ಮ ಪ್ರಾಥಮಿಕ ಪಾತ್ರವು ಉತ್ತರ ಪ್ರದೇಶದ ಜನರಿಗೆ ಸೇವೆ ಸಲ್ಲಿಸುವುದು ಎಂದು ತಮ್ಮ ಪಕ್ಷವು ತಮಗೆ ನೀಡಿದ ಜವಾಬ್ದಾರಿಯನ್ನು ಒತ್ತಿ ಹೇಳಿದರು. “ನಾನು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದೇನೆ, ಮತ್ತು ಪಕ್ಷವು ರಾಜ್ಯದ ಜನರ ಸೇವೆಗಾಗಿ ನನ್ನನ್ನು ಇಲ್ಲಿ ಇರಿಸಿದೆ,” ಎಂದು ಅವರು ಹೇಳಿದರು.