Home News Rishab Shetty : ರಿಷಬ್ ಶೆಟ್ಟಿ ಅವರ ಬಹು ನಿರೀಕ್ಷಿತ ಮುಂದಿನ ಸಿನಿಮಾಗಳಾವು? ಇಲ್ಲಿದೆ ನೋಡಿ...

Rishab Shetty : ರಿಷಬ್ ಶೆಟ್ಟಿ ಅವರ ಬಹು ನಿರೀಕ್ಷಿತ ಮುಂದಿನ ಸಿನಿಮಾಗಳಾವು? ಇಲ್ಲಿದೆ ನೋಡಿ ಲಿಸ್ಟ್

Hindu neighbor gifts plot of land

Hindu neighbour gifts land to Muslim journalist

Rishab Shetty : ಕಾಂತಾರ ಚಿತ್ರದ ಮುಖಾಂತರ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ರೂಪುಗೊಂಡಿರುವ ರಿಷಬ್ ಶೆಟ್ಟಿ ಅವರ ಕಾಂತಾರ ಚಾಪ್ಟರ್ 1 ಇದೀಗ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದ್ದು ಹಲವು ಚಿತ್ರಗಳ ದಾಖಲೆಯನ್ನು ಮುರಿದು ಜನರ ಮೆಚ್ಚುಗೆ ಪಡೆಯುತ್ತಿದೆ. ಇದರ ಬೆನ್ನಲ್ಲೇ ರಿಷಬ್ ಶೆಟ್ಟಿ ಅವರ ಮುಂದಿನ ಬಹು ನಿರೀಕ್ಷಿತ ಸಿನಿಮಾಗಳ ಲಿಸ್ಟ್ ವೈರಲ್ ಆಗಿದೆ.

ಹೌದು, ಕಾಂತಾರಾ ಸಿನಿಮಾ ಬಳಿಕ ಇದೀಗ ಬಿಡುಗಡೆಯಾಗಿರುವ ಕಾಂತಾರಾ ಚಾಪ್ಟರ್ 1 ಸಿನಿಮಾಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. 8 ದಿನದಲ್ಲಿ 400 ಕೋಟಿ ರೂಪಾಯಿಗೂ ಅಧಿಕ ಸಂಗ್ರಹ ಮಾಡಿದೆ. ಇದೀಗ ರಿಷಬ್ ಶೆಟ್ಟಿ ಮುಂಬರುವ ಸಿನಿಮಾ ಯಾವುದು ಅನ್ನೋ ಕುತೂಹಲಕ್ಕೆ ಇಲ್ಲಿದೆ ಉತ್ತರ.

ಛತ್ರಪತಿ ಶಿವಾಜಿ ಮಹಾರಾಜ್

ಛತ್ರಪತಿ ಶಿವಾಜಿ ಮಹಾರಾಜರಾಗಿ ಕಾಣಿಸಿಕೊಳ್ಳಲಿರುವ ಭಾರಿ ಬಿಗ್ ಬಜೆಟ್ ಹಿಂದಿ ಸಿನಿಮಾ ದೇಶದ ಕುತೂಹಲ ಕೆರಳಿಸಿದೆ. ಚಿತ್ರದ ಪೋಸ್ಟರ್ ಈಗಾಗಲೇ ಹಲವರ ಕುತೂಹಲ ಹೆಚ್ಚಿಸಿದೆ. ಈ ಸಿನಿಮಾ ಶೂಟಿಂಗ್ 2026ರಲ್ಲಿ ಆರಂಭಗೊಳ್ಳುತ್ತಿದೆ. 

ಜೈ ಹನುಮಾನ್

ಪ್ರಶಾಂತ್ ವರ್ಮಾ ನಿರ್ದೇಶನದ ಜೈ ಹನುಮಾನ್ ಸಿನಿಮಾ ಡಿಸೆಂಬರ್ ತಿಂಗಳಿನಿಂದ ಶೂಟಿಂಗ್ ಆರಂಭಿಸಲಿದೆ. ಈಗಾಗಲೇ ಸಿನಿಮಾ ಕೆಲಸಗಳು ನಡೆಯುತ್ತಿದೆ. ಇತ್ತ ರಿಷಬ್ ಶೆಟ್ಟಿ ಕೂಡ ಸಂಪೂರ್ಣ ತಯಾರಿಯೊಂದಿಗೆ ಶೂಟಿಂಗ್ ನಡೆಸಲಿದ್ದಾರೆ. ಚಿತ್ರದ ಪೋಸ್ಟರ್ ಭಾರಿ ಸದ್ದು ಮಾಡುತ್ತಿದೆ.

ಬೆಲ್ ಬಾಟಂ 2

ರಿಷಬ್ ಶೆಟ್ಟಿ ನಾಯಕನಾಗಿ ಕಾಣಿಸಿಕೊಂಡ ಬೆಲ್ ಬಾಟಂ ಸಿನಿಮಾದ ಎರಡನೇ ಭಾಗ ತೆರೆಗೆ ಬರುತ್ತಿದೆ. ಈ ಕುರಿತು ತಯಾರಿಗಳು ನಡೆಯುತ್ತಿದೆ. 

ಇದನ್ನೂ ಓದಿ:Umesh: ಹಿರಿಯ ನಟ ಹಾಸ್ಯ ಕಲಾವಿದ ಉಮೇಶ್‌ ಆಸ್ಪತ್ರೆಗೆ ದಾಖಲು

ರುದ್ರಪ್ರಯಾಗ ದಿಂದ ನಾಥುರಾಮ್

ರಿಷಬ್ ಶೆಟ್ಟಿ ನಿರ್ದೇಶದ ರುದ್ರಪ್ರಯಾಗ್ ಸಿನಿಮಾ ತಯಾರಿಗಳು ನಡೆಯುತ್ತಿದೆ ಅನ್ನೋ ಮಾತುಗಳು ಕೇಳಿಬಂದಿದೆ. ಇದೇ ವೇಳೆ ರಿಷಬ್ ಶೆಟ್ಟಿ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ನಾಥುರಾಮ್ ಸಿನಿಮಾ ಕೂಡ ಸೆಟ್ಟೇರುತ್ತಿದೆ ಅನ್ನೋ ಮಾತುಗಳು ಕೇಳಿಬಂದಿದೆ.