Home News Pavitra Lokesh-Naresh: ‘ಮಕ್ಕಳನ್ನು ಮಾಡಿಕೊಳ್ಳಲು ನಾವಿಬ್ಬರೂ ಫಿಟ್, ಆದ್ರೆ…’ – ಸಂದರ್ಶನದಲ್ಲಿ ಅಚ್ಚರಿ ಹೇಳಿಕೆ ನೀಡಿದ...

Pavitra Lokesh-Naresh: ‘ಮಕ್ಕಳನ್ನು ಮಾಡಿಕೊಳ್ಳಲು ನಾವಿಬ್ಬರೂ ಫಿಟ್, ಆದ್ರೆ…’ – ಸಂದರ್ಶನದಲ್ಲಿ ಅಚ್ಚರಿ ಹೇಳಿಕೆ ನೀಡಿದ ಪವಿತ್ರ ಲೋಕೇಶ್, ನರೇಶ್

Hindu neighbor gifts plot of land

Hindu neighbour gifts land to Muslim journalist

Pavitra Lokesh-Naresh: ತೆಲುಗು ನಟ ನರೇಶ್ ಹಾಗೂ ನಟಿ ಪವಿತ್ರಾ ಲೋಕೇಶ್ ಕಳೆದ ಒಂದು ವರ್ಷಗಳಿಂದ ಭಾರೀ ಸುದ್ದಿಯಲ್ಲಿದ್ದಾರೆ. ಮೊಮ್ಮಕ್ಕಳನ್ನು ಕಾಣುವ ವಯಸ್ಸಿನಲ್ಲಿ ಇವರಿಬ್ಬರು ಮದುವೆಯಾಗಿ ಟ್ರೋಲಿಗರ ಬಾಯಿಗೆ ತುತ್ತಾಗಿದ್ದರು. ಇದೀಗ ಮಕ್ಕಳು ಮಾಡಿಕೊಳ್ಳುವ ವಿಚಾರವಾಗಿ ಮತ್ತೆ ಸುದ್ದಿಯಲ್ಲಿದ್ದಾರೆ.

 

ಹೌದು, ಮಕ್ಕಳನ್ನು ಪಡೆಯುವ ವಿಚಾರವಾಗಿ ಪವಿತ್ರ ಲೋಕೇಶ್ ಹಾಗೂ ನರೇಶ್ ಅವರು ಸಂದರ್ಶನದಲ್ಲಿ ಅಚ್ಚರಿಯ ಹೇಳಿಕೆಯನ್ನು ನೀಡಿದ್ದು ಅದು ಈಗ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲಾಗುತ್ತಿದೆ.

 

ಅಂದಹಾಗೆ ಸಂದರ್ಶನದಲ್ಲಿ “ಮಕ್ಕಳನ್ನು ಮಾಡಿಕೊಳ್ಳಲು ನಾನು, ಪವಿತ್ರಾ ದೈಹಿಕವಾಗಿ ಫಿಟ್‌ ಆಗಿದ್ದೇವೆ, ಈಗ ಇರುವ ಟೆಕ್ನಾಲಜಿ, ಸರೋಗಸಿಯಿಂದ ನಮ್ಮ ಮಕ್ಕಳನ್ನು ಪಡೆದುಕೊಳ್ಳಬಹುದು. ನಾನು, ಪವಿತ್ರಾ ಮೂರು-ನಾಲ್ಕು ವರ್ಷದಿಂದ ಜೊತೆಗೆ ಇದ್ದೇವೆ. ನಾವಿಬ್ಬರು ಈ ಬಗ್ಗೆ ಮಾತನಾಡಿಲ್ಲ. ಆದರೆ ನಮ್ಮಿಬ್ಬರ ಮನಸ್ಸಿನಲ್ಲಿದ್ದ ಆಲೋಚನೆಗಳು ಒಂದೇ ಆಗಿವೆ. ನಾವಿಬ್ಬರು ಜೋಡಿಯಾಗಿ ಚೆನ್ನಾಗಿದ್ದೇವೆ. ನನಗೆ ಪವಿತ್ರಾ ಅಮ್ಮನಾಗಿ, ಹೆಂಡ್ತಿಯಾಗಿ, ಮಗಳಾಗಿ, ಫ್ರೆಂಡ್‌ಆಗಿ ಕಾಣಿಸುತ್ತಾಳೆ. ಪವಿತ್ರಾ ಬಂದಮೇಲೆ ನನ್ನ ಜೀವನ ಬದಲಾಗಿದೆ, ನಾನೀಗ ಪಾರ್ಟಿ ಕೂಡ ಮಾಡೋದಿಲ್ಲ. ನನ್ನ ಬ್ಯಾಂಕ್‌ ಅಕೌಂಟ್‌ ನಂಬರ್‌ಏನು ಅಂತ ಪವಿತ್ರಾಗೆ ಗೊತ್ತಿಲ್ಲ. ನನ್ನ ತಲೆ ಕೂದಲು ಅಷ್ಟು ಉದುರಿದರೆ ನನ್ನ ಜೊತೆ ಇರ್ತೀಯಾ ಅಂತ ಕೇಳಿದೆ. ಆಗ ಅವಳು ನಿಮ್ಮ ಬಳಿ ಏನೂ ಇಲ್ಲದಿದ್ರೂ ಕೂಡ ನಾನು ನಿನ್ನ ಜೊತೆಗೆ ಇರ್ತೀನಿ ಎಂದು ಬಂದಳು’ ಎಂದು ನರೇಶ್‌ ಹೇಳಿದ್ದಾರೆ.

 

ಅಲ್ಲದೆ ಎಷ್ಟೋ ಮಕ್ಕಳಿಗೆ ಪಾಲಕರಿಲ್ಲ. ಇಂಥ ಸಂದರ್ಭದಲ್ಲಿ ಬದುಕುತ್ತಿರುವಾಗ ನಾವು ಮಕ್ಕಳನ್ನು ಮಾಡಿಕೊಂಡು ಯಾಕೆ ಸಮಾಜಕ್ಕೆ ಕೊಡಬೇಕು. ಇದನ್ನು ಬಿಟ್ಟು ಬೇರೆ ಕೆಲಸ ಮಾಡಬಹುದು” ಎಂದು ಪವಿತ್ರಾ ಲೋಕೇಶ್‌ ಹೇಳಿದ್ದಾರೆ.