Home News Weight Loss: ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಬೇಕೆ? ಇಲ್ಲಿದೆ 10 ಪರಿಣಾಮಕಾರಿ ಮನೆಮದ್ದುಗಳು

Weight Loss: ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಬೇಕೆ? ಇಲ್ಲಿದೆ 10 ಪರಿಣಾಮಕಾರಿ ಮನೆಮದ್ದುಗಳು

Hindu neighbor gifts plot of land

Hindu neighbour gifts land to Muslim journalist

Weight Loss: ಈಗ ಹೊಟ್ಟೆಯ ಬೊಜ್ಜು ಇರುವುದು ಸರ್ವೇಸಾಮಾನ್ಯವಾಗಿದೆ. ಪುರುಷರಿಗಿಂತ ವಿವಾಹಿತ ಮಹಿಳೆಯರಲ್ಲಿ ಹೊಟ್ಟೆಯ ಬೊಜ್ಜಿನ ಪ್ರಮಾಣ ಅಧಿಕವಾಗಿದೆ. ಸುಮಾರು 98% ರಷ್ಟು ಮಹಿಳೆಯರಿಗೆ ಹೆರಿಗೆ ನಂತರ ಹೊಟ್ಟೆ ಬೊಜ್ಜು ಬೆಳೆಯುತ್ತದೆ. ಇತ್ತೀಚಿನ ದಿನಗಳಲ್ಲಿ ಅವಿವಾಹಿತ ಯುವತಿಯರಲ್ಲೂ ಹೊಟ್ಟೆಯ ಬೊಜ್ಜು ಕಂಡುಬರುತ್ತಿದೆ. ಅಷ್ಟೇ ಏಕೆ ಇತ್ತೀಚಿಗಂತೂ ಮಕ್ಕಳಲ್ಲಿಯೂ ಬೊಜ್ಜು ಸಾಮಾನ್ಯವಾಗಿದೆ.

ಒಂದು ಅಂದಾಜಿನ ಪ್ರಕಾರ ಒಟ್ಟು ಜನಸಂಖ್ಯೆಯ ಸುಮಾರು 82% ರಷ್ಟು ಜನರಿಗೆ ಹೊಟ್ಟೆಯ ಬೊಜ್ಜು ಇದ್ದೇ ಇರುತ್ತದೆ. ಇತ್ತೀಚಿಗೆ ತೀವ್ರವಾಗಿ ಬೆಳೆಯುತ್ತಿರುವ ಬೊಜ್ಜಿಗೆ ಆಧುನಿಕ ಜೀವನ ಶೈಲಿಯೆ ಮುಖ್ಯ ಕಾರಣ. ಅಧಿಕ ಕ್ಯಾಲರಿಯುಕ್ತ ಅಪೌಷ್ಟಿಕ ಆಹಾರ ಹಾಗೂ ದೈಹಿಕ ಚಟುವಟಿಕೆಗಳ ಅಭಾವ ಪ್ರಮುಖ ಕಾರಣಗಳಾಗಿವೆ.

ಹೊಟ್ಟೆಯ ಬೊಜ್ಜನಾಗಲಿ ಅಥವಾ ಅಧಿಕ ದೇಹ ತೂಕವನ್ನಾಗಲಿ ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ. ಅನೇಕ ಜನರು ಬೊಜ್ಜು ಇರುವುದು ಸಮೃದ್ಧಿ ಹಾಗೂ ಪ್ರತಿಷ್ಠೆ ಸಂಗತಿ ಅಂದುಕೊಳ್ಳುತ್ತಾರೆ. ಆದರೆ, ವಾಸ್ತವದಲ್ಲಿ ಅನಾರೋಗ್ಯ ಮತ್ತು ಅಜ್ಞಾನದ ಸಂಗತಿಯಾಗಿದೆ. ಇದು ಭವಿಷ್ಯದಲ್ಲಿ ಬರಲಿರುವ ಗಂಭೀರ ಕಾಯಿಲೆಗಳ ಮುನ್ಸೂಚನೆ ಎಂಬುವುದು ಹೆಚ್ಚಿನ ಜನರಿಗೆ ಅರಿವಿಲ್ಲ. ಅಧಿಕ ದೇಹದ ತೂಕ ವಿಶೇಷವಾಗಿ ಹೊಟ್ಟೆಯ ಬೊಜ್ಜು ಹೃದಯ ರೋಗಗಳು, ಹೃದಯಾಘಾತ, ಮಧುಮೇಹ, ಅಧಿಕ ರಕ್ತ ಒತ್ತಡ, ಯಕೃತ್ತಿನ ಸಮಸ್ಯೆಗಳು, ಕೀಲು ಸವೆತ/ನೋವುಗಳು, ಇತ್ಯಾದಿಗಳಿಗೆ ಮುಕ್ತ ಆಹ್ವಾನದ ಸೂಚನೆಯಾಗಿರುತ್ತದೆ.

ಆದ್ದರಿಂದ, ಅಧಿಕ ದೇಹದ ತೂಕವನ್ನು ಲಘುವಾಗಿ ಪರಿಗಣಿಸದೆ ಅದನ್ನು ಆದಷ್ಟು ಶೀಘ್ರ ಕಡಿಮೆ ಮಾಡಿಕೊಳ್ಳುವುದು ಆರೋಗ್ಯಕ್ಕೆ ಉತ್ತಮ. ನೀವು ಮೊದಲಿಗೆ ತೂಕ ಹೆಚ್ಚಾಗುವುದನ್ನು ಗಮನಿಸುವುದಿಲ್ಲ. ಆದರೆ ತೂಕ ಹೆಚ್ಚಾದಾಗ, ಅದನ್ನು ಕಳೆದುಕೊಳ್ಳಲು ನೀವು ಬೆವರು ಸುರಿಸುತ್ತಾ ಇರಬೇಕಾಗುತ್ತದೆ. ಮುಂಚಿತವಾಗಿಯೇ ತೂಕ ಹೆಚ್ಚಾಗದಂತೆ ಕಾಳಜಿ ವಹಿಸುವುದು ಹೆಚ್ಚು ಪ್ರಯೋಜನಕಾರಿ. ಆದರೂ, ಈಗಾಗಲೇ ಬೊಜ್ಜು ಬೆಳೆದಿದ್ದರೆ ಈ ಮನೆಮದ್ದುಗಳ ಸಹಾಯದಿಂದ ನೀವು ಬೇಗನೆ ತೂಕವನ್ನು ಕಳೆದುಕೊಳ್ಳಬಹುದು.

1. ಈರುಳ್ಳಿ, ಶುಂಠಿ, ಬೆಳ್ಳುಳ್ಳಿ, ಟೊಮೆಟೊ, ದಾಲ್ಚಿನ್ನಿ ದೇಹದ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

2. ಆಹಾರದಲ್ಲಿ ಉಪ್ಪಿನ ಪ್ರಮಾಣವನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ. ಏಕೆಂದರೆ, ಉಪ್ಪಿನಲ್ಲಿರುವ ಸೋಡಿಯಂ ದೇಹದಲ್ಲಿ ನೀರಿನಂಶವನ್ನು ಹೆಚ್ಚಿಸಿ ಬೊಜ್ಜು ಹೆಚ್ಚಿಸುತ್ತದೆ.

3. ರಾತ್ರಿ ಮಲಗುವ ಮುನ್ನ ಹಸಿರು ಚಹಾ (ಗ್ರೀನ್ ಟೀ) ಕುಡಿಯುವುದರಿಂದ ದೇಹದ ಜೀರ್ಣಾಂಗ ವ್ಯವಸ್ಥೆಯು ಸುಧಾರಿಸುತ್ತದೆ. ಇದು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.

4. ಆಹಾರದಲ್ಲಿ ಸಕ್ಕರೆಯ ಪ್ರಮಾಣವನ್ನು ಆದಷ್ಟು ಕಡಿಮೆ ಮಾಡಿ. ನೀವು ಖಂಡಿತವಾಗಿಯೂ ಸಕ್ಕರೆಯ ಬದಲು ಬೆಲ್ಲ ಅಥವಾ ಜೇನುತುಪ್ಪವನ್ನು ಬಳಸಬಹುದು.

5. ನಿಮ್ಮ ಆಹಾರದಲ್ಲಿ ನಿಯಮಿತವಾಗಿ ಶುದ್ಧ ಮೊಸರು (ಕೆನೆರಹಿತ) ಇದ್ದರೆ, ಅದು ನಿಮ್ಮ ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಪ್ರತಿದಿನ ಬೆಳಿಗ್ಗೆ ಒಂದು ಲವಂಗ ಹಸಿ ಬೆಳ್ಳುಳ್ಳಿ ತಿನ್ನುವುದು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

6. ನೀವು ಸಾಕಷ್ಟು ನಿದ್ದೆ ಮಾಡದಿದ್ದರೆ, ನೀವು ತೂಕವನ್ನು ಹೆಚ್ಚಿಸುತ್ತೀರಿ. ನಿದ್ದೆ ಚೆನ್ನಾಗಿದ್ದರೆ ಜೀರ್ಣಶಕ್ತಿ ಹೆಚ್ಚುತ್ತದೆ ಮತ್ತು ಅಧಿಕ ಕೊಬ್ಬು ಸಂಗ್ರಹವಾಗುವುದಿಲ್ಲ. ಬೆಳಿಗ್ಗೆ ಹಸಿದ ವೇಳೆ ಬೆಚ್ಚಗಿನ ನೀರಿನಲ್ಲಿ ಒಂದು ಚಮಚ ಜೇನುತುಪ್ಪ ಸೇರಿಸಿ ಸೇವಿಸಿದರೆ ತೂಕ ಕಡಿಮೆಯಾಗುತ್ತದೆ.

7. ಯೋಗವು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ನೌಕಾಸನ ಯೋಗವು ಹೊಟ್ಟೆಯನ್ನು ಕಡಿಮೆ ಮಾಡಲು ಉತ್ತಮವಾಗಿದೆ.

ಬೆಚ್ಚಗಿನ ನೀರಿನಲ್ಲಿ ನಿಂಬೆ ರಸ ಮಿಶ್ರಣ ಮಾಡಿ ಪ್ರತಿದಿನ ಬೆಳಿಗ್ಗೆ ಇದನ್ನು ಸೇವಿಸುವುದರಿಂದ ದೇಹದಲ್ಲಿ ಚಯಾಪಚಯ ಕ್ರಿಯೆಯು ಉತ್ತಮವಾಗಿರುತ್ತದೆ ಮತ್ತು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.

8. ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ಬೆಳಗಿನ ವಾಕಿಂಗ್ ಅನ್ನು ಅಭ್ಯಾಸ ಮಾಡಿಕೊಳ್ಳಿ. ಇದು ಹೊಟ್ಟೆಯ ಕೊಬ್ಬನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.

9 ತಡರಾತ್ರಿಯಲ್ಲಿ ತಿಂದರೆ ಹೊಟ್ಟೆಯ ಕೊಬ್ಬು ಹೆಚ್ಚುತ್ತದೆ. ಆದ್ದರಿಂದ, ರಾತ್ರಿ ಮಲಗುವ 3 ಗಂಟೆಗಳ ಮೊದಲು ತಿನ್ನಿರಿ.

10. ರಾತ್ರಿಯ ಊಟದಲ್ಲಿ ಲಘು ಆಹಾರವನ್ನು ಸೇವಿಸಿ. ಎಣ್ಣೆಯುಕ್ತ, ಮಸಾಲೆಯುಕ್ತ ಆಹಾರವನ್ನು ಸೇವಿಸಬೇಡಿ. ಮಲಗುವ ಮುನ್ನ ಶತಪದಿ ಮಾಡುವುದನ್ನು ಮರೆಯಬೇಡಿ. ಇದು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಸಂಗ್ರಹ ಮತ್ತು ಸಂಪಾದನೆ: ಡಾ. ಪ್ರ. ಅ. ಕುಲಕರ್ಣಿ

Mysore Dasara: ಜಂಬೂ ಸವಾರಿ ಮೆರವಣಿ – ಶಿಥಿಲಗೊಂಡ ಕಟ್ಟಡಗಳ ಮೇಲೇರಲು ನಿರ್ಬಂಧ – ಜಿಲ್ಲಾಡಳಿತ ಕಟ್ಟುನಿಟ್ಟಿನ ನಿರ್ಧಾರ