Home News ಅಡ್ಯನಡ್ಕ : ಈಜುಕೊಳಕ್ಕೆ ಬಿದ್ದು ಸಂಶೋಧನಾ ವಿದ್ಯಾರ್ಥಿನಿ ಮೃತ್ಯು

ಅಡ್ಯನಡ್ಕ : ಈಜುಕೊಳಕ್ಕೆ ಬಿದ್ದು ಸಂಶೋಧನಾ ವಿದ್ಯಾರ್ಥಿನಿ ಮೃತ್ಯು

Hindu neighbor gifts plot of land

Hindu neighbour gifts land to Muslim journalist

ಬಂಟ್ವಾಳ : ಈಜುಕೊಳವೊಂದಕ್ಕೆ ಬಿದ್ದ ಸಂಶೋಧನ ವಿದ್ಯಾರ್ಥಿನಿಯೋರ್ವರು ಮೃತಪಟ್ಟ ಘಟನೆ ಸೆ.14ರಂದು ಎಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಅಡ್ಯನಡ್ಕ ವಾರಣಾಸಿ ಫಾರ್ಮ್ ನಲ್ಲಿ ನಡೆದ ಬಗ್ಗೆ ವರದಿಯಾಗಿದೆ.

ಮಂಗಳೂರು ಮೂಲದ ನೇಝೀ ಫೆರ್ನಾಂಡಿಸ್ (32 ವ.) ಮೃತಪಟ್ಟವರಾಗಿದ್ದಾರೆ.

ಎರಡು ದಿನಗಳ ಹಿಂದೆ ಫಾರ್ಮ್‌ಗೆ ಆಗಮಿಸಿದ ಅವರು ಈಜುಕೊಳದ ಸಮೀಪಕ್ಕೆ ಒಂಟಿಯಾಗಿ ಹೋಗಿದ್ದಾರೆನ್ನಲಾಗಿದೆ. ಆಕೆ ಮರಳಿ ಬಾರದ ಹಿನ್ನೆಲೆಯಲ್ಲಿ ಅವರಿಗಾಗಿ ಹುಡುಕಾಟ ನಡೆಸಿದಾದ ಕೆರೆ ಪಕ್ಕ ಅವರ ಚಪ್ಪಲಿ ಹಾಗೂ ಬಟ್ಟೆಗಳು ಪತ್ತೆಯಾಗಿದ್ದವು, ಕೆರೆಯಲ್ಲಿ ಹುಡುಕಾಟ ನಡೆಸಿ ನೀರಿನಡಿಯಲ್ಲಿದ್ದ ಆಕೆಯ ದೇಹವನ್ನು ಹೊರ ತೆಗೆದು ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ದ ವೇಳೆ ಆಕೆ ಮೃತಪಟ್ಟಿರುವುದನ್ನು ಅಲ್ಲಿನ ವೈದ್ಯರು ದೃಢಪಡಿಸಿದ್ದರು.

ವೈದ್ಯಕೀಯ ತರಬೇತಿ ಪಡೆಯುತ್ತಿದ್ದ ನೇಝೀ ಫೆರ್ನಾಂಡೀಸ್ ಅದನ್ನು ಅರ್ಧದಲ್ಲಿ ಮೊಟಕುಗೊಳಿಸಿ ಆರ್ಗಾನಿಕ್ ಫಾರ್ಮಿಂಗ್ ಬಗ್ಗೆ ಸಂಶೋಧನೆ ನಡೆಸುವ ನಿಟ್ಟಿನಲ್ಲಿ ವಾರಣಾಸಿ ಫಾರ್ಮ್‌ಗೆ ಕೆಲವು ದಿನಗಳ ಹಿಂದೆ ಆಗಮಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ವಿಟ್ಲ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ನಾಗರಾಜ್ ಎಚ್. ಇ. ರವರ ನೇತೃತ್ವದ ಪೊಲೀಸರ ತಂಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ. ಈ ಬಗ್ಗೆ ಮಹಿಳೆಯ ಸಂಬಂಧಿಕರು ತಲುಪಿದ ಬಳಿಕ ಪ್ರಕರಣ ದಾಖಲಾಗಬೇಕಾಗಿದೆ.